ಮುನವಳ್ಳಿ: ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕುಂದಾಪುರದ ಹಾಲಾಡಿಯ ಮಹಾಗಣಪತಿ ಸಂಚಾರಿ ಯಕ್ಷಗಾನ ಮಂಡಳಿಯಿಂದ ಮಂಗಳವಾರ ಸಂಜೆ ಕ್ರಾಂತಿಯ ಕಿಡಿ ರಾಯಣ್ಣ ಯಕ್ಷಗಾನ ಜರುಗಿತು.
ಸೋಮಶೇಖರಮಠದ ಶ್ರೀ ಮುರುಘೇಂದ್ರ ಶ್ರೀಗಳು ಸಾನಿಧ್ಯ ವಹಿಸಿ ಆಶಿರ್ವಚನದಲ್ಲಿ ಯಕ್ಷಗಾನವು ಕರಾವಳಿಯ ಅತ್ಯಂತ ಪ್ರಸಿದ್ದ ಕಲೆ ಯಕ್ಷಗಾನ ಮಂಡಳಿಯ ಕಲಾವಿದರು ವಿವಿಧ ಪೌರಾಣಿಕ ಕಥೆಗಳನ್ನು ಆಯ್ದುಕೊಂಡು ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿಹಿಡಿಯುತ್ತಿದ್ದಾರೆ. ಉತ್ತರ ಕರ್ನಾಟಕದ ಜನರಿಗೆ ಯಕ್ಷಗಾನ ಕಲೆ ಮನರಂಜನೆ ನೀಡಲಿಎಂದು ಈ ಬಾಗಕ್ಕೆ ಹಲುವಾರು ವರ್ಷಗಳಿಂದ ಬಂದು ಪ್ರದರ್ಶನ ನೀಡುತ್ತಿದ್ದಾರೆ ಈ ಕಲಾವಿಧರಿಗೆ ನಮ್ಮ ಬಾಗದ ಜನರು ಸಹಕಾರ ನೀಡಬೇಕು ಎಂದರು.
ಕೋಡಿ ಕುಂದಾಪುರ, ಮಯ್ಯ ಹಾಲಾಡಿ, ಮಂಜುನಾಥ ಭಂಡಾರಿ, ನಾಗರಾಜ ಗೋಪಶೆಟ್ಟಿ, ಸುರೇಶ ಜಾವೂರ, ಶ್ರೀಶೈಲ ಹಂಜಿ, ಗಂಗಾಧರ ಗೊರಾಬಾಳ, ಕೇಶವ ಭಂಡಾರಿ, ಗಣೇಶ ಶೆಟ್ಟಿ ಇತರರು ಉಪಸ್ಥಿತರಿದ್ದರು.