’ದುಡ್ಡಿನ ಆಟ ಬಲ್ಲವರಾರು’ ಭರದಿಂದ ಸಾಗಿದ ಚಿತ್ರೀಕರಣ

MK HasiruKranti
’ದುಡ್ಡಿನ ಆಟ ಬಲ್ಲವರಾರು’ ಭರದಿಂದ ಸಾಗಿದ ಚಿತ್ರೀಕರಣ
WhatsApp Group Join Now
Telegram Group Join Now

ಶ್ರೀರಂಗಪಟ್ಟಣ : ಮೈಸೂರ್ ಫಿಲಂ ಮೇಕರ್ಸ್‌ರವರ ಚೊಚ್ಚಲ ಕನ್ನಡ ಚಲನಚಿತ್ರ ’ದುಡ್ಡಿನ ಆಟ ಬಲ್ಲವರಾರು’ ಶ್ರೀರಂಗಪಟ್ಟಣದ ಶ್ರೀ ಗುಂಜ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಗಂಜಾಂದಲ್ಲಿ ಮುಹೂರ್ತ ನಡೆದು ಮೊದಲ ಹಂತದ ಚಿತ್ರೀಕರಣ ಭರದಿಂದ ಸಾಗಿದೆ.
ಗೋಲ್ಡ್ ಸುರೇಶ ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಕ್ಲಾಪ್ ಲತಾ ಮೋಹನ್ ಮಾಡಿದರು. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಗಣ್ಯರು ಚಿತ್ರಕ್ಕೆ ಶುಭಕೋರಿದರು. ಚಿತ್ರೀಕರಣವು ಶ್ರೀರಂಗಪಟ್ಟಣ, ಮಂಡ್ಯ, ಮೈಸೂರಿನ ಸುತ್ತಮುತ್ತ ಎರಡು ಹಂತಗಳಲ್ಲಿ ನಡೆಯಲಿದೆ. ಒಂದು ಮಧ್ಯಮವರ್ಗದ ಕುಟುಂಬದಲ್ಲಿ ದುಡ್ಡು ಇಲ್ಲದಿರುವಾಗ ಮತ್ತು ದುಡ್ಡಿದ್ದಾಗ ಬದುಕಿನಲ್ಲಾಗುವ ಏರುಪೇರುಗಳು ನೋವು ನಲಿವುಗಳು ಕೊನೆಗೆ ದುಡ್ಡಿಂದ ಆಗುವ ಒಳಿತು ಕೆಡಕುಗಳನ್ನ ಸಮಾಜಕ್ಕೆ ತಿಳಿಸುವಂತಹ ಚಲನಚಿತ್ರ ದುಡ್ಡಿದ್ದರೆ ಜಗವೆಲ್ಲ, ದುಡ್ಡೇ ದೊಡ್ಡಪ್ಪ ಎಂಬುದು ಚಿತ್ರದ ಸಾರವಾಗಿದೆ. ಒಟ್ಟು ನಾಲ್ಕು ಹಾಡುಗಳು ಒಂದು ಫೈಟ್ ದೃಶ್ಯವಿದೆ. ಇದು ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಸನ್ನಿವೇಶವಾಗಿದೆ ಎಂದು ನಿರ್ದೇಶಕರು ತಿಳಿಸಿದರು.
ಈ ಚಿತ್ರದ ಮುಖ್ಯಪಾತ್ರದಲ್ಲಿ ಎಂಜಿಎನ್ ಪ್ರಸಾದ್, ಸೌಮ್ಯಮಲ್ಲಿಕ್, ಎಸ್ ಕೆ ಬಾಬು, ಸುಪ್ರಿಯಾ ರೆಡ್ಡಿ, ಲೋಕೇಶ್ ಕುಮಾರ್, ಶಂಕರ್ ಮಂಡ್ಯ, ಆನಂದ್, ಅಭಯ್, ಶಿವನಂಜು, ಲತಾ ಶೇಖರಿ, ಮಂಜುಳಾ, ರುದ್ರೇಗೌಡ, ಗುರುಮೂರ್ತಿ, ನಾರಾಯಣಸ್ವಾಮಿ , ಸಿದ್ದಲಿಂಗ, ವಿನೋದ್, ಪ್ರೇಮ, ಆನಂದ್, ರವಿ, ಪ್ರಕೃತಿ, ಪಲ್ಲವಿ, ವೆಂಕಟೇಶ್ ಪ್ರಸಾದ್ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ. ಚಿತ್ರದ ಕಥೆ ಸಾಹಿತ್ಯ ಸಂಭಾ?ಣೆ ನಿರ್ದೇಶನ ಎಸ್ ಕೆ ಬಾಬು ಬೆಳಗುಳ, ಛಾಯಾಗ್ರಹಣ ಸದಾಶಿವ ಹಿರೇಮಠ, ಸಂಗೀತ ಮನುರಾವ್, ಸಂಕಲನ ಮಹೇಂದ್ರ, ವರ್ಣಾಲಂಕಾರ ರಾಜು, ಸಾಹಸ ಧರ್ಮ, ಪತ್ರಿಕಾಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಕಾರ್ಯಕಾರಿ ನಿರ್ವಹಣೆ ಸುನಿಲ್ ಡಿಸೋಜಾ ಆಗಿದ್ದು ಚಿತ್ರಕ್ಕೆ ಮೈಸೂರು ಫಿಲಂ ಮೇಕರ್ಸ ಗ್ರೂಪ್ ಬಂಡವಾಳ ಹೂಡಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

WhatsApp Group Join Now
Telegram Group Join Now
Share This Article