ಎಲ್ಲ ಕ್ಷೇತ್ರಗಳಲ್ಲಿ ಮಿಂಚಿ ಅನೇಕ ಜನರಿಗೆ ಬೆಳಕಾಗಿದ್ದ ದಿ. ಎಸ್ ಎಫ್. ದೊಡ್ಡಗೌಡರು.

Ravi Talawar
ಎಲ್ಲ ಕ್ಷೇತ್ರಗಳಲ್ಲಿ ಮಿಂಚಿ ಅನೇಕ ಜನರಿಗೆ ಬೆಳಕಾಗಿದ್ದ ದಿ. ಎಸ್ ಎಫ್. ದೊಡ್ಡಗೌಡರು.
WhatsApp Group Join Now
Telegram Group Join Now

ಬೆಳಗಾವಿ.ದೊಡ್ಡವರಲ್ಲಿ ದೊಡ್ಡವರಾಗಿ, ಸಣ್ಣವರಲ್ಲಿ ಸಣ್ಣವರಾಗಿ, ಮಕ್ಕಳಲ್ಲಿ ಮಕ್ಕಳಾಗಿ, ದಣಿವರಿಯದ ಸಾದಾ ಸೀದಾ ಹಿರಿಮೆಯ ನಾಯಕನಾಗಿ ರಾಜಕೀಯದಲ್ಲಿ, ಸಹಕಾರ, ಸಾಹಿತ್ಯ, ಕಲೆ, ಸಂಗೀತ, ನಾಟಕ ರಂಗ, ಕನ್ನಡತನ,ಕ್ರೀಡೆ, ಶಿಕ್ಷಣ, ಇನ್ನು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವಿತ ಅವಧಿಯಲ್ಲಿ ಅನೇಕ ಸತ್ಕಾರ್ಯಗಳನ್ನು ಮಾಡಿ, ಬಡವರ, ಬಲ್ಲಿದರ ನಾಯಕನಾಗಿ ಅನೇಕರಿಗೆ ಮಾರ್ಗದರ್ಶಕರಾಗಿ ಬೆಳೆದು ದಿವಂಗತರಾದರೂ ಅವರನ್ನು ಇನ್ನು ಜನರ ಭಾವನೆಯಲ್ಲಿ ಸದಾ ಮೆಲಕು ಹಾಕುವ ವ್ಯಕ್ತಿ ದಿ. ಸಣಗೌಡ ಪಕ್ಕೀರಗೌಡ. ದೊಡ್ಡಗೌಡರ ಎಂದರೆ ತಪ್ಪಾಗಲಾರದು.

6-9-1968 ರಲ್ಲಿ ರೈತ ಮುಖಂಡರಾದ ಫಕ್ಕಿರಗೌಡ ದೊಡ್ಡಗೌಡರು ಹಾಗೂ ಶಾಂತವ್ವ ಅವರ ಸುಪುತ್ರರಾಗಿ ಜನಿಸಿದ ಇವರು ಬೆಳೆಯುತ್ತ ಶಿಕ್ಷಣ, ಕ್ರೀಡೆಯಲ್ಲಿ ತೊಡಗಿ, ಯುವ ಸಂಘಟಕರಾಗಿ ಬೆಳೆದು ದೊಡ್ಡಪ್ಪ ಬಿಡಿಸಿಸಿ ಬ್ಯಾಂಕ ಅಧ್ಯಕ್ಷರಾಗಿದ್ದ ದಿ.ಬಸವತಾರಾಯ ದೊಡ್ಡಗೌಡರ ಅವರ ಗರಡಿಯಲ್ಲಿ ಬೆಳೆದು ಪಿಕೆಪಿಸ್ ಸದಸ್ಯರಾಗಿ, ಅಧ್ಯಕ್ಷರಾಗಿ, ಯುವ ದುರಿಣರಾಗಿ ಬೆಳೆದು,ಇಂದಿರಾ ಗಾಂಧಿ, ಬಿ. ಶಂಕರಾನಂದ ಅವರು ಗುರುತಿಸುವ ಮಟ್ಟಕ್ಕೆ ಬೆಳೆದು , 1978 ರಲ್ಲಿ ವಿಧಾನ ಸಭೆ ಸ್ಪರ್ದಿಸಿದರು, ನಂತರ 1985 ರಿಂದ ಚನ್ನಮ್ಮನ ಕಿತ್ತೂರು ಕ್ಷೇತ್ರದಿಂದ್ ಸ್ಪರ್ದಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ, 2003 ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಜಿಲ್ಲೆಯ ಸರ್ವಾoಗಿನ ಅಭಿವೃದ್ಧಿಗೆ ಶ್ರಮಿಸಿ ಅದರಲ್ಲಿ ನೇಸರಗಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೆಚ್ಚಿನ ಅನುಧಾನ ನೀಡಿ, ಕುವೆಂಪು ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಾಗಿ ಜಿಲ್ಲೆಯಲ್ಲಿ ಉನ್ನತ ಮಟ್ಟದ ಶಾಲೆಯಾಗಿ ಮಾಡಲು ಇವರ ಶ್ರಮ ಮುಖ್ಯ. ನೇಸರಗಿ ಸಮೀಪದ ಹಣಬರಹಟ್ಟಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ (ಕೊಳ್ಳ ) ಅಭಿವೃದ್ಧಿಗೆ ಸರ್ಕಾರದಿಂದ ಅನುಧಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಜಿಲ್ಲೆಯ ಅನೇಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿ, ಜಿಲ್ಲಾ ಸಹಕಾರಿ ಯೂನಿಯನ್ ಸದಸ್ಯರಾಗಿ, ನೇಸರಗಿ ಅರ್ಬನ್ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಕರ್ನಾಟಕ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾಗಿ, ಪಟ್ಟಣ ಸಹಕಾರಿ ಸಂಘಗಳ ಸದಸ್ಯರಾಗಿ, ಹತ್ತಿ ನೂಲಿನ ಸಂಘದ ಅಧ್ಯಕ್ಷರಾಗಿ, ರಾಜೀವ ಗಾಂಧಿ ಯುವ ಅಭಿವೃದ್ಧಿ ಸಂಘ ಸ್ಥಾಪನೆ, ನೇಸರಗಿ ಕುವೆಂಪು ಶಾಲೆಗೆ ಗೋವಿಂದೇಗೌಡ ಪ್ರಶಸ್ತಿ ಲಭಿಸಲು ಕಾರಣಿಭೂತರಾಗಿದ್ದರು , ರಂಗ ಭೂಮಿಯಲ್ಲಿ ಜಗಜ್ಯೋತಿ ಬಸವೇಶ್ವರ್ ನಾಟಕದಲ್ಲಿ ಬಸವೇಶ್ವರ ಪಾತ್ರ ಮಾಡಿದರು. ಶ್ರೀ ಚನ್ನವೃಶಬೆಂದ್ರ ನಾಟಕ ರಚಿಸಿ, ಕಲಾ, ಸಂಸ್ಕೃತಿ, ಕ್ರೀಡೆ, ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಮತ್ತು ಸಹೋದರ ಮಹಾಂತೇಶ ದೊಡ್ಡಗೌಡರ ಇವರ ಮಾರ್ಗದರ್ಶನ ಮತ್ತು ತೋರಿಸಿದ ಹಾದಿಯಲ್ಲಿ ಬಿಡಿಸಿಸಿ ನಿರ್ದೇಶಕರು, ಉಪಾಧ್ಯಕ್ಷರು, ಮತ್ತು ಚನ್ನಮ್ಮನ ಕ್ಷೇತ್ರದ ಶಾಸಕರಾಗಿ ಜನಪ್ರಿಯ ಯೋಜನೆಗಳನ್ನು ಜಾರಿಗೆ ತರಲು ಪ್ರೇರಣೆ ಆಗಿದ್ದರು. ಹಿಂದೆ ದಿ. ಸಣಗೌಡರು ಕಿತ್ತೂರು ಚನ್ನಮ್ಮನ ಉತ್ಸವಕ್ಕೆ 5 ಲಕ್ಷ ರೂಪಾಯಿಗಳ ಅನುಧಾನ ತರುವಳಿ ಪ್ರಮುಖ ಪಾತ್ರ ವಹಿಸಿ ಅನೇಕ ಕಾರ್ಯಗಳನ್ನು ಮಾಡಿ 01-07-2020 ರಂದು ಇಹಲೋಕ ತೇಜಿಸಿ ಸಾಮಾಜಿಕ ಸೇವೆ ಮುಗಿಸಿ ಎಲ್ಲರಿಗೂ ಮಾದರಿ ಆದರು ದಿ. ಸಣಗೌದ ಫ. ದೊಡ್ಡಗೌಡರು.

ದಿ. 01-07-2024 ರಂದು ದಿ. ಸಣಗೌಡ ದೊಡ್ಡಗೌಡರ 4 ನೇ ಪುಣ್ಯಸ್ಮರಣೆ ನಿಮಿತ್ಯ ಈ ಲೇಖನ.

ಗಂಗಾಧರ ಗುಜನಟ್ಟಿ. ನೇಸರಗಿ /ಬೆಳಗಾವಿ.

WhatsApp Group Join Now
Telegram Group Join Now
Share This Article