ಹೊಸಪೇಟೆ: ಸಾವಿರಾರು ವರ್ಷಗಳಿಂದ ಅನೇಕ ಸಂತರು ಈ ನೆಲದಲ್ಲಿ ಜೀವಿಸಿ ಸತ್ಯ ಸಂದೇಶಗಳನ್ನು ನಮಗೆ ನೀಡಿ , ತಾವೂ ಅನುಭವಿಸಿ ಹೋಗಿದ್ದಾರೆ. ಅವರಿಗೆ ಸತ್ಯದ ದರ್ಶನವಾಗಿದೆ , ಅವರು ಸೇವಿಸಿದ್ದೂ ಇದೇ ಗಾಳಿ , ಆಹಾರ , ಅವರ ನಡೆದಾಡುವ ರಸ್ತೆಗಳಲ್ಲಿ ಕಲ್ಲು ಮುಳ್ಳುಗಳಿದ್ದವು , ಆದರೂ ಅವರು ಸಂತೃಪ್ತಿಯಿಂದ ಹೊರಟು ಹೋದರು, ಹೋಗುತ್ತಾ ನಮಗೆ ಸತ್ಯವನ್ನು ಹೇಳಿ ಹೋಗಿದ್ದಾರೆ. ಜೀವನದ ಗುಟ್ಟು ಎಂದರೆ ಇತರರನ್ನು ನೋಯಿಸದೇ ಇರುವುದು, ಎಲ್ಲ ಧರ್ಮಗಳು ಇದನ್ನೇ ಹೇಳಿವೆ ಎಂದು ಕೊಟ್ಟೂರು ಸಂಸ್ಥಾನ ಮಠ ಹೊಸಪೇಟೆಯ ಬಸವಲಿಂಗ ಸ್ವಾಮಿಗಳು ತಮ್ಮ ಪ್ರವಚನದಲ್ಲಿ ತಿಳಿಸಿದರು. ಅವರು ಟಿ.ಬಿ.ಡ್ಯಾಂ ರಸ್ತೆಯಲ್ಲಿನ ಕಲ್ವರಿ ಪುಣ್ಯ ಕ್ಷೇತ್ರದ ಕಲ್ವರಿ ಉದ್ಯಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಕೊಟ್ಟೂರು ಸಂಸ್ಥಾನ ಮಠ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ , ಎಲ್ಲ ಧರ್ಮಗಳ ಗೌರವಾರ್ಥ ಪ್ರತಿ ವರ್ಷ ಸರ್ವಧರ್ಮಗಳ ರಥೋತ್ಸವ ನಡೆಸುವುದು. ಇದರಲ್ಲಿ ಎಲ್ಲ ಧರ್ಮಗ್ರಂಥಗಳನ್ನು , ಖುರಾನ್ , ಬೈಬಿಲ್, ಗುರುಗ್ರಂಥಸಾಹಿಭ್, ಭಗವತ್ ಗೀತೆ ಗಳನ್ನು ಒಂದೇ ರಥದಲ್ಲಿಟ್ಟು ಮೆರವಣಿಗೆ ನಡೆಸುವುದು ಸಾಂಪ್ರದಾಯಿಕವಾಗಿದೆ. ನಮ್ಮ ಮಠಗಳಲ್ಲಿ ಎಲ್ಲ ಧರ್ಮದ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ, ಇದೇ ರೀತಿಯ ಆಚರಣೆಗಳನ್ನು ಬಳ್ಳಾರಿಯ ಬಿಷಪ್ ಡಾ:ಹೆನ್ರಿ ಫರ್ನಾಂಡೀಸ್ ರವರು ಕೂಡಾ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬಿಷಪ್ ಹೆನ್ರಿ ಡಿಸೋಜಾ ರನ್ನು ಕೊಂಡಾಡಿದರು.
ಇನ್ನೂರ್ವ ಮುಖ್ಯ ಅಥಿತಿ ಬಳ್ಳಾರಿಯ ಕಲಾಣ ಮಠ ದ ಸ್ವಾಮಿಗಳು ಮಾತನಾಡುತ್ತಾ ಕಲ್ವರಿ ಉದ್ಯಾನ ನೆಮ್ಮದಿ ತರುವಂತ ಸ್ಥಳವಾಗಿದೆ , ಇದಕ್ಕೆ ಧರ್ಮಾದ್ಯಕ್ಷರಾದ ಹೆನ್ರಿ ಡಿಸೋಜಾ ಕಾರಣ ರಾಗಿದ್ದಾರೆ ಎಂದು ಅವರನ್ನು ಶ್ಲಾಘಿಸಿದರು. ಇವರಿಂದಾಗಿಯೇ ಬಳ್ಳಾರಿ ಯಲ್ಲಿ ಧಾರ್ಮಿಕ ಸಂಘರ್ಷಗಳಾಗಿಲ್ಲ , ಯೇಸುವಿನ ತತ್ವವಾದ ಪರಸ್ಪರ ಪ್ರೀತಿಸಿರಿ ಎನ್ನುವ ತತ್ವದ ಆದಾರದ ಮೇಲೆ ಕ್ರೈಸ್ತಧರ್ಮ ನೆಡೆದಿದೆ, ಯೇಸು ಪ್ರಭು ತಾವು ನೋವುಂಡರೇ ವಿನಃ, ಯಾರಿಗೂ ನೋವುಂಟು ಮಾಡಿಲ್ಲ , ಅದರಂತೆ ಉದ್ಯಾನವನಕ್ಕೆ ಬಂದವರಿಗೆಲ್ಲರಿಗೂ ಶಾಂತಿ ದೊರಕಲಿ ಎಂದು ಆರ್ಶಿವಧಿಸಿದರು.
ನಂತರ ಕಲ್ವರಿ ಪುಣ್ಯ ಕ್ಷೇತ್ರದ ಸಮರ್ಪಣೆಯನ್ನು ಗೋವಾ ಮತ್ತು ದಮನ್ ,ಹಾ ಧರ್ಮಾದ್ಯಕ್ಷರಾದ ಘನವೆತ್ತ ಫಿಲಿಪ್ ನೇರಿ ಕಾರ್ಡಿನಲ್ ಫೆರಾವೋ’ನಡೆಸಿ ಕೊಟ್ಟರು, ಈ ಪೂಜಾ ಸಂದರ್ಭದಲ್ಲಿಕಾರವಾರದ ಧರ್ಮಾದ್ಯಕ್ಷರಾದ ಡಾ:ದುಮ್ಮಿಂಗ್ ಡಯಾಸ್ , ಕರ್ನೂಲ್ ಧಮಾದ್ಯಕ್ಷರಾದ ಡಾ; ಜೊಹಾನೆಸ್ ಗೋರಂಟ್ಲಾ , ಫಾ:ಪ್ರಾನ್ಸಿಸ್ ಚೆನ್ನಪ್ಪ , ಫಾ: ಭಗವಂತರಾಜ್ , ಪಾ:ಸ್ಟೀಪನ್ ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಗರಸಭೆ ಅದ್ಯಕ್ಷ ರೂಪೇಶ್ ಕುಮಾರ್, ಸದಸ್ಯ ಜಿ.ಎಸ್ ಹನುಮಂತಪ್ಪ ಭಾಗವಹಿಸಿದರು.
ಜೀವನದ ಗುಟ್ಟು ಎಂದರೆ ಇತರರನ್ನು ನೋಯಿಸದೇ ಇರುವುದು : ಕೊಟ್ಟೂರು ಬಸವಲಿಂಗ ಸ್ವಾಮಿಗಳು


