ಬಳ್ಳಾರಿ ಜುಲೈ 30 : ಯುವಜನರಲ್ಲಿ ದುಶ್ಚಟಗಳನ್ನು ದೂರ ಮಾಡಿ ದುಶ್ಚಟ ಮುಕ್ತ ಸಮಾಜ ಹಾಗೂ ಆರೋಗ್ಯವಂತ ಸಮಾಜವನ್ನು ನಿರ್ಮಿಸುವುದು ಇಂದಿನ ದಿನಗಳಲ್ಲಿ ಅತ್ಯಂತ ಮುಖ್ಯವಾದದ್ದು, ಸಮಾಜದಲ್ಲಿ ಏನಾದರೂ ಬದಲಾವಣೆ ಸಾಧ್ಯ ಎಂದಾದಲ್ಲಿ ಅದಕ್ಕೆ ಯುವಕರೇ ಕಾರಣ ಅಂತ ಯುವಕರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜೆ ಅಭಿಪ್ರಾಯ ಪಟ್ಟರು
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬಳ್ಳಾರಿ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬಳ್ಳಾರಿ ಇವರುಗಳ ಸಹಯೋಗದೊಂದಿಗೆ
ಜ್ಞಾನಾಮೃತ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಯೋಜನಾಧಿಕಾರಿ ರೋಹಿತಾಕ್ಷ ಮಾತನಾಡಿ, ಮಾದಕ ವ್ಯಸನದಿಂದ ಸಮಾಜ ಮುಕ್ತವಾಗಬೇಕಾದರೆ ಮೊದಲು ತನ್ನನ್ನು ತಾನು ವ್ಯಸನದಿಂದ ದೂರವಿರುವಂತೆ ಮನಸ್ಸನ್ನು ಹತೋಟಿಯಲ್ಲಿಡಬೇಕು
ಅಂದಾಗ ಮಾತ್ರ ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿ ಎಂಜಿ ಗೌಡ ಮಾತನಾಡಿ,
ಇಂದಿನ ಯುವಕಾರು ಮತ್ತು ಮಕ್ಕಳು ಅತಿ ಹೆಚ್ಚು ಮೊಬೈಲ್ ಬಳಕೆಯಿಂದ ಸಮಯದ ಮಹತ್ವವನ್ನೆ ಮರೆತ್ತಿದ್ದಾರೆ
ಭಕ್ತಿಯ ಸಂಗಮವಾದ ಜ್ಞಾನದಿಂದ ಯಾವುದೇ ಉಪಯೋಗವಿಲ್ಲ. ಅಂತ್ಯಕಾಲ ಬಂದಾಗ ವ್ಯಾಕರಣಗಳು ಪಂಡಿತರನ್ನು ಉಳಿಸುವುದಿಲ್ಲ. ದೇವರ ಸ್ಮರಣೆ ಹಾಗೂ ಸಂಕೀರ್ತನೆ ಅಥವಾ ಭಜನೆ ಇಲ್ಲದೇ ಏನನ್ನೂ ಸಾಧಿಸಲು ಅಸಾಧ್ಯ ಎನ್ನುತ್ತಾರೆ ಮಹಾತ್ಮರು.
ದೇವರನ್ನು ಒಲಿಸಿಕೊಳ್ಳಲು ಜ್ಞಾನಮಾರ್ಗ, ಕರ್ಮಮಾರ್ಗ ಹಾಗೂ ಯೋಗವಾರ್ಗಕ್ಕಿಂತ ಭಕ್ತಿಮಾರ್ಗವೇ ಅತ್ಯುತ್ತಮ ಎನ್ನುವುದು ಜ್ಞಾನಿಗಳಾದ ಪುರಂದರದಾಸ, ಕನಕದಾಸ, ರಾಮಕೃಷ್ಣ ಪರಮಹಂಸ ಸೇರಿದಂತೆ ಹಲವರು ಕಂಡುಕೊಂಡ ಮಾರ್ಗವಾಗಿದೆ ಆದರಿಂದ ಮಕ್ಕಳಿಗೆ ಹಾಡುಗಳ ಮೂಲಕ ಭಜನೆ ಕುಣಿತದಿಂದ ಮಕ್ಕಳ್ಳಿ ದುಶ್ಚಟಗಳಿಂದ ಮಕ್ಕಳನ್ನು ದೂರ ಇರುವಂತೆ ನೋಡಿಕೊಳ್ಳುವದು ಪೋಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ಸ್ವಾಸ್ಥ್ಯ ಸಂಕಲ್ಲ ಕಾರ್ಯಕ್ರಮದ ನಿರೂಪಕರಾದ ರೂಪಶ್ರೀ, ಯಶವಂತ್ ಶೆಟ್ಟಿ, ಜ್ಞಾನಾಮೃತ ಕಾಲೇಜಿನ ಪ್ರಾಂಶುಪಾಲ, ಬಸವರಾಜ ಕೆ, ಕ್ಷೇತ್ರ ಯೋಜನಾಧಿಕಾರಿಗಳು ಬಳ್ಳಾರಿ-1
ನಾಗೇಶ್ ಬಿ ನೆರಿಯಾ, ಮಹೇಶ್, ಅಭಿಷೇಕ್ ಚಾರ್ಮಡಿ, ಅಭಿಶ್ರೀ ಚಾರ್ಮಾಡಿ, ಸಂಕೇತ್ ಮುಂಢಾಜೆ, ಕುಣಿತ ಭಜನಾ ತರಬೇತಿ ಕಾರ್ಯಗಾರದ ಗುರುವರ್ಯರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.