ಗುಂಡಿ ಬಿದ್ದ ರಸ್ತೆ: ಮೈಮರೆತರೆ ಜೀವಕ್ಕೆ ಅಪಾಯ

Pratibha Boi
ಗುಂಡಿ ಬಿದ್ದ ರಸ್ತೆ: ಮೈಮರೆತರೆ ಜೀವಕ್ಕೆ ಅಪಾಯ
WhatsApp Group Join Now
Telegram Group Join Now
ಸುರೇಬಾನ : ಕೊಣ್ಣೂರದಿಂದ ಸುರೇಬಾನ ಮಾರ್ಗವಾಗಿ ರಾಮದುರ್ಗ ಪಟ್ಟಣಕ್ಕೆ  ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗದ ಹಲವೆಡೆ ಗುಂಡಿಬಿದ್ದ ಪರಿಣಾಮ ವಾಹನ ಸವಾರರು ಸಂಚರಿಸಲು ಹರಸಾಹಸಪಡುವ ಪರಿಸ್ಥಿತಿ ಎದುರಾಗಿದೆ.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು,  ಈ ವ್ಯಾಪ್ತಿಯ ಜನರು ವ್ಯಾಪಾರ, ಆಸ್ಪತ್ರೆ, ಕೂಲಿ ಕೆಲಸ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಹೆಚ್ಚಾಗಿ ಈ ರಸ್ತೆಯನ್ನೇ ಅವಲಂಭಿಸಿದ್ದಾರೆ. ಅಲ್ಲದೇ ಪ್ರಮುಖ ರಸ್ತೆಯಾಗಿರುವ ಹಿನ್ನೆಲೆ ನಿತ್ಯ ಸಾವಿರಾರು ವಾಹನಗಳು ಗುಂಡಿ ಬಿದ್ದ ರಸ್ತೆಯಲ್ಲೇ ಸಂಚರಿಸುವ ಪರಿಸ್ಥಿತಿ ಬಂದಿದೆ.
ನಿರಂತರ ಮಳೆ ಹಾಗೂ ವಾಹನಗಳ ಸಂಚಾರ ದಟ್ಟಣೆಯಿಂದ ಈ ಮಾರ್ಗದ ಗೊಣ್ಣಾಗರ, ಉಲಿಗೊಪ್ಪ, ಕೊಳಚಿ, ಘಟಕನೂರ,  ದೊಡ್ಡಮಂಗಡಿ ಸೇರಿದಂತೆ ಹಲವಡೆ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಾಯ್ದೆರೆದಿದೆ. ಅಲ್ಲದೆ ಮಳೆ ಬಂದಂತಹ ಸಂದರ್ಭದಲ್ಲಿ ಗುಂಡಿಗಳಲ್ಲಿ ನೀರು ತುಂಬಿದ ಪರಿಣಾಮ ದೊಡ್ಡ ವಾಹನಗಳುಸಂಚರಿಸುವ ಸಂದರ್ಭ ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಗುಂಡಿಯ ನೀರು ಹಾರುತ್ತಿರುವ ಸಮಸ್ಯೆಗಳು ಉಂಟಾಗುತ್ತಿವೆ. ಇದರಿಂದ ವಾಹನ ಸವಾರರು ಸಂಚಾರ ಮಾಡುವಾಗ ಅಪಘಾತವಾಗಿ ಪೆಟ್ಟು ತಿಂದಿದ್ದಾರೆ. ಇದರಿಂದ ನಮಗೆ ರಸ್ತೆಯ ಮೇಲೆ ಸರ್ಕಸ್ ಮಾಡಿದಂತ ಅನುಭವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಕೂಡಲೇ ಗುಂಡಿ ಬಿದ್ದಿರುವ ಸ್ಥಳಗಳಲ್ಲಿ ದುರಸ್ಥಿಕೈಗೊಳ್ಳಬೇಕು ಎಂಬುದು ಈ ಭಾಗದ ಸ್ಥಳೀಯರು ಹಾಗೂ ವಾಹನ ಸವಾರರ ಪ್ರಮುಖ ಒತ್ತಾಯವಾಗಿದೆ.
————–+
ಬಾಕ್ಸ್ : ಕೋಟ್
ರಾಜ್ಯದ ಕಾಂಗ್ರೆಸ್ ಸರ್ಕಾರ ಕಾಟಾಚಾರಕ್ಕೆ ಅವೈಜ್ಞಾನಿಕವಾಗಿ ಹಾಗೂ ಕಳಪೆ ಡಾಂಬರೀಕರಣ ಕೆಲಸ ಮಾಡಿದ್ದು, ಎಲ್ಲ ರಸ್ತೆಗಳಲ್ಲೂ ಈಗಾಗಲೇ ಗುಂಡಿ ಬಿದ್ದಿದೆ. ಇದರಿಂದ ಸಾಕಷ್ಟು ರಸ್ತೆ ಅಪಘಾತಗಳು ಹಾಗೂ ಸಾವುಗಳು ಸಂಭವಿಸಿವೆ ಎಂದು ಆರೋಪಿಸಿ, ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿದರು.
>> ವಿಜಯ ಗುಡದಾರಿ, ಬಿಜೆಪಿ ಕಾರ್ಯದರ್ಶಿ ರಾಮದುರ್ಗ
ಬಾಕ್ಸ್ :
ಗುಂಡಿಗಳನ್ನು ಮುಚ್ಚುವಂತೆ ಜಿಜೆಪಿ ಕಾರ್ಯಕರ್ತರು ಪ್ರತಿಭಟನೆ
 ರಸ್ತೆ ಹಾಳಾಗಿ ಗುಂಡಿಮಯವಾಗಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ ತೋರಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಮದುರ್ಗ ತಾಲೂಕಿನ ತುರನೂರು ಗ್ರಾಮದಲ್ಲಿ ಬುಧವಾರ(ಸ.24) ಬಿಜೆಪಿ ಕಾರ್ಯಕರ್ತರು ರಸ್ತೆತಡೆ ಚಳವಳಿ ನಡಿಸುವ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
                 ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತರು, ರಸ್ತೆಗಳೆಲ್ಲಾ ಗುಂಡಿಮಯವಾಗಿವೆ. ವಾಹನಗಳ ಸಂಚಾರ ದುಸ್ತರವಾಗಿದೆ. ಹಲವೆಡೆ ಅಪಘಾತಗಳು ನಡೆದು ಜನರ ಪ್ರಾಣಕ್ಕೆ ಕುತ್ತು ತಂದಿರುವ ಘಟನೆಗಳು ನಡೆದಿವೆ. ಇಷ್ಟಾದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಗುಂಡಿಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ ತೋರಿದೆ. ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿ ಪ್ರತಿಭಟಿಸಿದರು‌.
WhatsApp Group Join Now
Telegram Group Join Now
Share This Article