ಕರ್ನಾಟಕ ಪ್ರಾದೇಶಿಕ ಅಸಮತೋಲನ -ಅಕ್ಟೋಬರ್ ರವರಗೆ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು: ಅಧ್ಯಕ್ಷ ಪೋಪ್ರಸರ್ .ಗೋವಿಂದರಾವ್

Hasiru Kranti
ಕರ್ನಾಟಕ ಪ್ರಾದೇಶಿಕ ಅಸಮತೋಲನ -ಅಕ್ಟೋಬರ್ ರವರಗೆ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು: ಅಧ್ಯಕ್ಷ ಪೋಪ್ರಸರ್ .ಗೋವಿಂದರಾವ್
WhatsApp Group Join Now
Telegram Group Join Now
ಧಾರವಾಡ 27-  ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನ ದಲ್ಲಿ ಆಗಿರುವ ಅಭಿವೃದ್ಧಿ, ಬದಲಾವಣೆ ಹಿನ್ನಲೆಯಲ್ಲಿ ಅಧ್ಯಯನ ಮಾಡಿ, ಅದಕ್ಕೆ ಪೂರಕವಾಗಿ ಅಸಮತೋಲನ, ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಅಗತ್ಯವಿರುವ ಅಂಶಗಳನ್ನು ಶಿಫಾರಸ್ಸು ಮಾಡುವ ಹಿನ್ನಲೆಯಲ್ಲಿ ಸಮಿತಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅಧ್ಯಯನ ಪ್ರವಾಸ ಮಾಡುತ್ತಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪೋಪ್ರಸರ್.ಗೋವಿಂದರಾವ್ ಅವರು
ಧಾರವಾಡ ಜಿಲ್ಲಾ ಪಂಚಾಯತ ಸಭಾಭವನದಲ್ಲಿ  ಶಾಸಕರ, ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ಜರುಗಿಸಿ, ಮಾತನಾಡಿದರು.
ಪ್ರಾದೇಶಿಕ ಅಸಮತೋಲನ ಹಿನ್ನೆಲೆಯಲ್ಲಿ ನೀಡಲಾಗಿದ್ದ ನಂಜುಂಡಪ್ಪ ವರದಿಯು ಎಷ್ಟರ ಮಟ್ಟಿಗೆ ರಾಜ್ಯದಲ್ಲಿ ಅನುಷ್ಠಾನ ಆಗಿರುವ ಕುರಿತು ರಾಜ್ಯದ 26 ಜಿಲ್ಲೆಗಳಿಗೆ ಪ್ರವಾಸ ಮಾಡಿ ಅಧ್ಯಯನ ಮಾಡಿದ್ದು ಬರುವ ಅಕ್ಟೋಬರ್‍ವರೆಗೆ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪೋಪ್ರಸರ್.  .ಗೋವಿಂದರಾವ್ ಹೇಳಿದರು.
ಪ್ರಾದೇಶಿಕ ಅಸಮತೋಲನ ಹಿನ್ನೆಲೆಯಲ್ಲಿ ನಂಜುಂಡಪ್ಪ ಅವರು ನೀಡಿದ ವರದಿ ಅನ್ವಯ ರಾಜ್ಯದ 114 ತಾಲೂಕುಗಳಲ್ಲಿ 22 ವರ್ಷಗಳಲ್ಲಿ ರಾಜ್ಯ ಸರ್ಕಾರ ರೂ. 31 ಸಾವಿರ ಕೋಟಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ಯಾವ ತಾಲೂಕು ಅಭಿವೃದ್ಧಿಗೊಂಡಿದೆ, ಯಾವ ತಾಲೂಕು ಇನ್ನೂ ಹಿಂದುಳಿದಿದೆ ಎಂಬುದನ್ನು ಅರಿಯಲು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚಿಸಿದೆ ಎಂದರು.
ಕಳೆದ ಏಳು ತಿಂಗಳಿಂದ ಸಮಿತಿಯು ರಾಜ್ಯದಲ್ಲಿ ಸಂಚರಿಸಿ ಅಧ್ಯಯನ ಮಾಡುವುದರ ಜೊತೆಗೆ ಹಿಂದುಳಿದ ತಾಲೂಕುಗಳಲ್ಲಿ ಇನ್ನೂ ಏನೇನು ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕು, ಕೊರತೆಗಳೇನಿವೆ ಎಂಬುದನ್ನು ಹಲವು ಸೂಚ್ಯಂಕಗಳ ಮೂಲಕ ಅರಿಯುತ್ತಿದ್ದೇವೆ. ಜೊತೆಗೆ ಸಂಘ-ಸಂಸ್ಥೆಗಳ, ಅಧಿಕಾರಿಗಳಿಂದ ಸಂವಾದ ಮೂಲಕ ಮಾಹಿತಿ ಪಡೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ನಡೆಸಿದ ಪ್ರವಾಸದಲ್ಲಿ ನಾಲ್ಕು ವಿಭಾಗಗಳಲ್ಲಿ ಕಲ್ಯಾಣ ಕರ್ನಾಟಕ ಇನ್ನೂ ಹಿಂದುಳಿದ ಪ್ರದೇಶಗಳು ಹೆಚ್ಚಿದ್ದು, ಕಿತ್ತೂರು ಕರ್ನಾಟಕ ಅಂತ್ಯಂತ ಹಿಂದುಳಿದ ತಾಲೂಕುಗಳು ಇಲ್ಲದೇ ಇದ್ದರೂ ಹಿಂದುಳಿದ ಪ್ರದೇಶಗಳಿವೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಹೋಗಿ, ಅಧ್ಯಯನ ಮಾಡಿ, ನಾವು ವರದಿ ಸಲ್ಲಿಸಲಿದ್ದೇವೆ ಎಂದರು.
ನಂಜುಂಡಪ್ಪ ವರದಿ ಅನ್ವಯ ಪ್ರಾದೇಶಿಕ ಅಸಮತೋಲನಕ್ಕೆ ಬಿಡುಗಡೆಯಾದ ಹಣ ಸರಿಯಾಗಿ ಹಂಚಿಕೆ ಆಗದಿರುವುದು ಸೇರಿದಂತೆ ಹಲವು ಅಂಶಗಳ ಕುರಿತು ಅಧ್ಯಯನ ಮಾಡುತ್ತೇವೆ. ಮುಂದಿನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಮಿತಿ ಕಾರ್ಯೋನ್ಮುಖವಾಗಿದೆ ಎಂದರು.
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಯನದಲ್ಲಿ ಗುರುತಿಸುತಿರುವಂತೆ, ಕರ್ನಾಟಕ ರಾಜ್ಯದಲ್ಲಿ ಕೆಲವು ಪ್ರದೇಶಗಳು ಹಿಂದುಳಿದಿದ್ದು, ಮತ್ತು ಕೆಲವು ಭಾಗಗಳಲ್ಲಿ ಅಭಿವೃದ್ಧಿಯನ್ನು ಹೊಂದಿವೆ. ಆದಕಾರಣ ಹಿಂದುಳಿದ ತಾಲೂಕುಗಳಲ್ಲಿ ಆದ ತೊಂದರೆಗಳನ್ನು ಗಮನ ಹರಿಸಲು ಮತ್ತು ಜಿಲ್ಲೆಗಳಲ್ಲಿ ಆಗಬೇಕಾದ ಅಭಿವೃದ್ಧಿಯ ಬಗ್ಗೆ ಈ ಸಲಹಾ ನೀಡಲು ಸಮಿತಿಯನ್ನು ರಚಿಸಲಾಗಿದೆ ಎಂದು  ಪೋಪ್ರಸರ್ .ಎಂ. ಗೋವಿಂದರಾವ್ ಅವರು ಹೇಳಿದರು.
ಧಾರವಾಡ ಜಿಲ್ಲೆಯ ಅಭಿವೃದ್ಧಿ ವಿಷಯವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಧಾರವಾಡ ಜಿಲ್ಲೆಯಲ್ಲಿ ನೀರಾವರಿ ವ್ಯವಸ್ಥೆ ಇಲ್ಲ. ಒಣ ಬೇಸಾಯ. ಹೀಗಾಗಿ ಇಲ್ಲಿಯ ಅಭಿವೃದ್ಧಿಯನ್ನು ನೀರಾವರಿ ವ್ಯವಸ್ಥೆ ಇರುವ ಬೇರೆ ಜಿಲ್ಲೆಗಳಿಗೆ ಹೋಲಿಸುವಂತಿಲ್ಲ ಎಂದರು.
ಶಿಕ್ಷಣ, ಕೈಗಾರಿಕೆ, ಆರೋಗ್ಯದ ಬಗ್ಗೆ ತಿಳಿದುಕೊಂಡು ಜಿಲ್ಲೆಯಲ್ಲಿ ಯಾವುದು ಬೆಳವಣಿಗೆ ಹೊಂದಬೇಕು ಮತ್ತು ಯಾವುದರಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಸಲಹೆಯನ್ನು ಕೊಡಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ 114 ತಾಲ್ಲೂಕುಗಳಿದ್ದು, ಅದರಲ್ಲಿ ಉತ್ತರ ಕರ್ನಾಟಕದಲ್ಲಿ 59 ತಾಲೂಕುಗಳು, ದಕ್ಷಿಣ ಕರ್ನಾಟಕದಲ್ಲಿ 58 ತಾಲೂಕುಗಳಿದ್ದು ಅದರಲ್ಲಿ ಉತ್ತರ ಕರ್ನಾಟಕದ ಕೆಲವು ಭಾಗಗಳು ಹೆಚ್ಚಾಗಿ ಅಭಿವೃದ್ಧಿ ಆಗಿಲ್ಲ ಎಂದು ತಿಳಿದು ಬಂದಿದೆ ಎಂದರು.
ಉದ್ಯೋಗಾವಕಾಶಗಳ ಸೃಷ್ಟಿಸುವುದು, ಅದಕ್ಕಾಗಿ ಶಿಕ್ಷಣ, ಕೌಶಲ್ಯ ನೀಡುವುದು, ಮೂಲಭೂತ ಸೌಕರ್ಯ, ಮಹಿಳಾ ಆಧಾರಿತ ಘಟಕಗಳ ಸ್ಥಾಪನೆ ಅಂತಹ ಸಲಹೆಗಳು ನಮ್ಮ ಎದುರಿಗೆ ಬಂದಿವೆ ಎಂದು ಪೋಪ್ರಸರ್ .ಗೋವಿಂದರಾವ್ ಅವರು ತಿಳಿಸಿದರು.
ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಮಾತನಾಡಿ, ಉನ್ನತ ಶಿಕ್ಷಣವನ್ನು ಮತ್ತು ಆರೋಗ್ಯವನ್ನು ಉಚಿತವಾಗಿ ನೀಡಬೇಕು. ಬಡ ಜನರಿಗೆ  ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಅತಿ ಹೆಚ್ಚು ಮಹತ್ವ ನೀಡಿದರೆ ಅವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ. ಮಧ್ಯಮ ವರ್ಗದವರು ಶಿಕ್ಷಣಕ್ಕೆ ಅತಿ ಹೆಚ್ಚು ಹಣವನ್ನು ವ್ಯಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಣ್ಣ ಸಣ್ಣ ಉದ್ಯಮ ಕೈಗಾರಿಕೆಗಳು ಅತಿ ಹೆಚ್ಚು ಅವನತಿ ಆಗುತ್ತಿವೆ. ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಸೇರಿ ಹಣಕಾಸಿನ ನೆರವು ನೀಡಬೇಕು ಎಂದು ಹೇಳಿದರು.
ಗುಣಮಟ್ಟದ ಉನ್ನತ ಶಿಕ್ಷಣ ನೀಡಬೇಕು. ಉನ್ನತ ಮಟ್ಟದ ಶಿಕ್ಷಣವನ್ನು ನೀಡಬೇಕಾದಲ್ಲಿ, ಬೇಸಿಕ್ ಪಠ್ಯಪುಸ್ತಕಗಳನ್ನು ನವೀಕರಿಸಬೇಕು. ಬರುವ ಪೀಳಿಗೆಗೆ ನವೀಕರಣ ಆಗಿರುವ ಪಠ್ಯಪುಸ್ತಕ ಇಲ್ಲವೆಂದರೆ ಶೈಕ್ಷಣಿಕ ಸುಧಾರಣೆ ಅಸಾಧ್ಯ ಎಂದು ಸಚಿವರು ಅಭಿಪ್ರಾಯ ಪಟ್ಟರು.
ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕೆಗಳೊಂದಿಗೆ ನೀರಾವರಿಗೂ ಆದ್ಯತೆ ನೀಡಬೇಕು. ಬೆಣ್ಣಿ ಹಳ್ಳ, ತುಪ್ಪರಿ ಹಳ್ಳ ಮತ್ತು ವಿವಿಧ ಸಣ್ಣ ಹಳ್ಳಗಳ ನೀರಿನ ಸದುಪಯೋಗವಾಗಬೇಕು ಎಂದರು.
ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ, ಅಸಮತೋಲನವಾಗಿದ್ದು ಕಲ್ಯಾಣ ಕರ್ನಾಟಕದಂತೆ ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ, ಅವಳಿನಗರ ಎಲ್ಲ ದೃಷ್ಟಿಯಿಂದಲೂ ಅನುಕೂಲಕರ ಸ್ಥಾನದಲ್ಲಿ, ಭೌಗೋಳಿಕವಾಗಿ ಉತ್ತಮ ಸ್ಥಳದಲ್ಲಿದೆ. ವ್ಯಾಪಾರ ವಹಿವಾಟಿಗೆ ಹೆಚ್ಚು ಅವಕಾಶಗಳಿವೆ. ಕೈಗಾರಿಕಾ ಬೆಳವಣಿಗೆ, ಹೊಸ ಮತ್ತು ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಮಾಡಬೇಕು. ಸಾಂಸ್ಕøತಿಕವಾಗಿ, ಪ್ರವಾಸೋದ್ಯಮ ಹಿನ್ನಲೆಯಲ್ಲಿ ಬೆಳೆಯಲು ಈ ಭಾಗಕ್ಕೆ ಹೆಚ್ಚು ಅವಕಾಶಗಳಿವೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ, ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ, ಜ್ಞಾನಾಧಾರಿತ ಕೈಗಾರಿಕೆಗಳ ಸ್ಥಾಪನೆ ಬಗ್ಗೆ ಸಲಹೆ ನೀಡಿದರು.
ಧಾರವಾಡ ಜಿಲ್ಲೆಯು ಮಳೆ ಆಧಾರಿತ ಪ್ರದೇಶವಾಗಿರುವುದರಿಂದ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಆದ್ದರಿಂದ ಹಳ್ಳಿಗಳಲ್ಲಿ ಮತ್ತು ತಾಲೂಕವಾರು ಅಭಿವೃದ್ಧಿಯನ್ನು ಕಾಣಬಹುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕಂಡುಬರುವ ವ್ಯಾಪಾರ ವಹಿವಾಟು, ಕೃಷಿಗಳಲ್ಲಿ ಹೆಚ್ಚಿನದಾಗಿ ಮಾವಿನಹಣ್ಣಿಗೆ ಮತ್ತು ಮೆಣಸಿನಕಾಯಿ ಬೆಳೆಯುವಲ್ಲಿ, ಈರುಳ್ಳಿ ಉತ್ಪಾದನೆಯಲ್ಲಿ ಹೆಚ್ಚಿನ ಆದ್ಯತೆ ಇದ್ದು, ಕೃಷಿ ಆಧಾರಿತ ರೈತರಿಗೆ ಸಬ್ಸಿಡಿ ಕೊಡುವ ಮೂಲಕ ಪೆÇ್ರೀತ್ಸಾಹಿಸಿದರೆ ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಅಭಿವೃದ್ಧಿಯಲ್ಲಿ ಭೌತಿಕ ಹಾಗೂ ಆಂತರಿಕ ಪ್ರಗತಿ ಮುಖ್ಯವಾಗಿದೆ. ಗ್ರಾಮಮಟ್ಟದಲ್ಲಿ ಹೆಚ್ಚು ಹೆಚ್ವು ಹೂಡಿಕೆ ಆಗಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಕಚ್ಚಾ ವಸ್ತುಗಳು ಜಿಲ್ಲೆಯಲ್ಲಿ ಹೇರಳವಾಗಿ ದೊರೆಯುತ್ತಿದ್ದು ಕಂಪನಿಗಳನ್ನು ತೆರೆಯುವ ಮೂಲಕ ನಿರುದ್ಯೋಗವನ್ನು ಹೋಗಲಾಡಿಸಬಹುದು ಎಂದು ಸಲಹೆಯನ್ನು ನೀಡಿದರು.
  ಚಿಕ್ಕ ಚಿಕ್ಕ ಕೈಗಾರಿಕಾ ಕಂಪನಿಗಳಿದ್ದು ಅವುಗಳನ್ನು ಪ್ರಮೋಟ್ ಮಾಡುವುದರಿಂದ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬಹುದು ಎಂದು ಹೇಳಿದರು.
ಸಂವಾದ ಸಭೆಯಲ್ಲಿ ತಜ್ಞರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳಾದ ಕರ್ನಾಟಕ ಚೇಂಬರ ಆಪ್ ಕಾಮರ್ಸ್ ಅಧ್ಯಕ್ಷ ಸಂಶಿಮಠ, ಕಾರ್ಯದರ್ಶಿ ರವೀಂದ್ರ ಬಳಿಗಾರ, ಸದಸ್ಯ ಹಾಗೂ ಉದ್ಯಮಿ ಮಹೇಂದ್ರ ಸಿಂಘೀ, ವಾಲ್ಮಿ ಮಾಜಿ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ, ಹಿರಿಯ ನ್ಯಾಯವಾದಿ ಸೋಮಶೇಖರ ಜಾಡರ, ವಿಜ್ಞಾನಿ ಮತ್ತು ಶಿಕ್ಷಣ ತಜ್ಞ ಡಾ.ಎಸ್.ಎಂ.ಶಿವಪ್ರಸಾದ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಸಿಎಂಡಿಆರ್ ಮಾಜಿ ನಿರ್ದೇಶಕ ಡಾ.ಅಣ್ಣಿಗೇರಿ, ಮಹಿಳಾ ಹೋರಾಟಗಾರ್ತಿ ಶಾರದಾ ಗೋಪಾಲ, ಉದ್ಯಮಿ ಜಗದೀಶ ಹಿರೇಮಠ, ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥೆ ಓಟ್ಟಿಲಿ ಅನ್ಬನ್ ಕುಮಾರ್ ಅವರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ವಿಷಯಗಳನ್ನು ಮಂಡಿಸಿದರು. ಅವುಗಳ ಬಗ್ಗೆ ಚರ್ಚೆಗಳಾದವು.
ಸಮಿತಿ ಸದಸ್ಯ ಕಾರ್ಯದರ್ಶಿ ಆಗಿರುವ ಯೋಜನೆ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ.ವಿಶಾಲ್ ಆರ್. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಸಮಿತಿ ಸದಸ್ಯರಾದ ಡಾ.ಸೂರ್ಯನಾರಾಯಣ ಎಂ.ಎಚ್., ಡಾ.ಎಸ್.ಟಿ. ಬಾಗಲಕೋಟ ಹಾಗೂ ಜಿಲ್ಲಾ ಪೆÇಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪ ಪೋಲೀಸ್ ಆಯುಕ್ತ ಮಾನಿಂಗ ನಂದಗಾಂವಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಅವರು ವೇದಿಕೆಯಲ್ಲಿ ಇದ್ದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ಆರ್ಥಿಕ ತಜ್ಞರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article