ನಾನು ಅಧ್ಯಕ್ಷಳಾಗಲು ಸಂವಿಧಾನ ಕೊಟ್ಟ ಹಕ್ಕು ಕಾರಣ : ಯಲ್ಲವ್ವಾ ರಾ ಈಟಿ

Sandeep Malannavar
ನಾನು ಅಧ್ಯಕ್ಷಳಾಗಲು ಸಂವಿಧಾನ ಕೊಟ್ಟ ಹಕ್ಕು ಕಾರಣ : ಯಲ್ಲವ್ವಾ ರಾ ಈಟಿ
WhatsApp Group Join Now
Telegram Group Join Now
ಗೋಕಾಕ 26 ತಾಲೂಕಿನ ಕೌಜಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷಳಾಗಲೂ ಡಾ|| ಬಿ.ಆರ್. ಅಂಭೇಡ್ಕರವರು ಕೊಟ್ಟ ನಮ್ಮ ಭಾರತದ ಸಂವಿಧಾನ ಕಾರಣ. ಯಾಕೆಂದರೆ ಮಹಿಳೆ ಭೋಗದ ವಸ್ತ್ರ ಹೆರಿಗೆಗೆ ಮಾತ್ರ ಯೋಗ್ಯಳು ಎಂದು ಮನೋವಾದಿಗಳು ಧರ್ಮದ ಹೆಸರಿನಲ್ಲಿ ಮಹಿಳೆಗೆ ಶತಶತಮಾನಗಳಿಂದ ಶೋಷಣೆ ಮಾಡುತ್ತಾ ಬಂದಿದ ಕಾಲವೊಂದಿತ್ತು ಈ ಮೂಢನಂಬಿಕೆಯ ವಿರುದ್ಧ ಬುದ್ಧ ಬಸವಣ್ಣನವರು ಕ್ರಾಂತಿ ಮಾಡಿದರು ಇವರು ಹಾಕಿಕೊಟ್ಟ ಹಾದಿಯಲ್ಲಿಯೇ ಡಾ. ಬಿಆರ್ ಅಂಬೇಡ್ಕರ್ ಅವರು ತಮ್ಮ ಓದಿನಿಂದ ಅಳಿಸಿ ಹಾಕಿದ ಅವರು ಮಹಿಳೆಯರ ದಲಿತರ ಹಿಂದುಳಿದವರ ಪಾಲಿಗೆ ಸೂರ್ಯೋದಯವಾದರು. ಸಂವಿಧಾನದ ಅಡಿಯಲ್ಲಿ ಕೌಜಲಗಿ ಗ್ರಾಮ ಪಂಚಾಯತಿಯ ಪರಿಶಿಷ್ಟ ಜಾತಿಯ ಅಧ್ಯಕ್ಷರ ಹುದ್ದೆಗೆ ಮೀಸಲಾಗಿತ್ತು ಸರ್ವರಿಗೂ ಸಮಪಾಲು ಸಮ ಬಾಳು ಎಂಬ ತತ್ವದ ಅಡಿಯಲ್ಲಿ ನಮ್ಮ ಭಾಗದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ನಮ್ಮ ನಾಯಕರದ ಡಾ. ರಾಜೇಂದ್ರ ಸನ್ನಕ್ಕಿ ಅವರ ಒಳ್ಳೆಯ ವಿಚಾರದಿಂದ ಮೂರು ಜನ ನೀವು ತಲಾ ಹತ್ತು ತಿಂಗಳಂತೆ ಮಾಡಬೇಕೆಂದು ಅಧಿಕಾರ ಹಂಚಿ ಕೊಟ್ಟಿರುವುದು ನಮ್ಮ ಗ್ರಾಮ ಪಂಚಾಯತಿಯ ವಿಶೇಷವಾಗಿದೆ.
ನಾನು 2020 21ನೇ ಸಾಲಿನ ಒಂದೇ ಅವಧಿಯಲ್ಲಿ 30 ತಿಂಗಳು ಉಪಾಧ್ಯಕ್ಷಳಾಗಿ 10 ತಿಂಗಳು ಅಧ್ಯಕ್ಷಳಾಗಿ ಒಂದು ಬಾರಿ ಸದಸ್ಯಳಾಗಿ ಅವಿರೋಧವಾಗಿ ಆಯ್ಕೆ ಆಗಿರುವುದು ವಿಶೇಷವಾಗಿದೆ. ನಮ್ಮ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ ದರ್ಜೆಗೆ ಏರಲು ಶಿಫಾರಸ್ಸು ಮಾಡಿದ್ದು ನನಗೆ ಹೆಮ್ಮೆ ಎನಿಸುತ್ತದೆ. ಹಾಗೂ 29 ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ ನಮ್ಮ ಕೌಜಲಗಿ ಗ್ರೇಡ್ ಒನ್ ಪಂಚಾಯಿತಿಯಾಗಿದ್ದು, ತಾಲೂಕವಾಗಲೂ ಎಲ್ಲಾ ಅರ್ಹತೆಯನ್ನು ಹೊಂದಿದೆ. ಅದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ತಾಲೂಕಕ್ಕಾಗಿ ಅನೇಕ ಹೋರಾಟ ಜೈಲುವಾಸ ಮಾಡಿರುತ್ತಾರೆ ನಮ್ಮ ಕ್ಷೇತ್ರದ ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೊಳಿ ಅವರು ಕೌಜಲಗಿಯನ್ನು ತಾಲೂಕುವನ್ನಾಗಿ ಮಾಡೇ ಮಾಡುತ್ತೇನೆಂದು ಆಶ್ವಾಸನೆ ಕೊಟ್ಟಿದ್ದಾರೆ ಗೋಕಾಕ ಜಿಲ್ಲೆಯಾದರೆ ಕೌಜಲಗಿ ತಾಲೂಕಾಗುವುದು ಶತಸಿದ್ಧ.
ನಮ್ಮ ಭಾಗದ ಶಾಸಕರ ಪ್ರಯತ್ನದಿಂದ ೧೦೦ ಹಾಸಿಗೆಯ ಆರೋಗ್ಯ ಸಮುದಾಯ ಕೇಂದ್ರವಾಗಿದೆ . ಹಾಗೂ ಉಪತಹಸಿಲ್ದಾರ್ (ನಾಡಕಚೇರಿ )ಕಾರ್ಯಗಳು ಪ್ರಾರಂಭಗೊಂಡಿರುತ್ತವೆ ಮತ್ತು ಕೌಜಲಗಿ ಗೋಕಾಕ ರಸ್ತೆಯ ಫೂಲಗಳ(ಸೇತುವೆ ) ಕೆಲಸ ಬರದಿಂದ ಆಗುತ್ತಿದೆ ಮತ್ತು ಊರ ಸುತ್ತಲೂ ಗಟಾರ ನವೀಕರಣ ಕೊಂಡಿವೆ ಕುಡಿಯುವ ನೀರಿಗಾಗಿ ಜೆ ಜೆ ಎಂ ಯೋಜನೆಯಡಿಯಲ್ಲಿ ಪ್ರತಿ ಮನೆ ಮನೆಗೆ ನೀರು ಸರಬರಾಜ ಆಗುತ್ತಿದೆ. ನಿರಂತರ ಯೋಜನೆ ಅಡಿಯಲ್ಲಿ 24*7 ಕರೆಂಟ್ ಸೌಲಭ್ಯವಿರುತ್ತದೆ. ನಮ್ಮ ಗ್ರಾಮ ಪಂಚಾಯತಿಯ ಪೌರಕಾರ್ಮಿಕರು ಬಹಳ ಉತ್ಸುಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಒಮ್ಮೊಮ್ಮೆ ಅವರ ಜೊತೆಗೂಡಿ ನಾನು ಕಸ ಗುಡಿಸುವುದು ಹಾಗೂ ಗಟಾರ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುರದುಂಬಿಸಿ ಕೆಲಸ ಮಾಡಿಸಿಕೊಳ್ಳತ್ತಾ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದೇನೆ.
ನಮ್ಮ ಊರಿನ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಪೌರಕಾರ್ಮಿಕರ ಅವಶ್ಯಕತೆ ಇರುತ್ತದೆ. ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿಡಿಓ ಆದ ಪರಶುರಾಮ್ ಇಟ್ಟಗೌಡರವರು ಯುವಕರಾಗಿದ್ದು ಸಿಬ್ಬಂದಿಯನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಕಾರ್ಯದರ್ಶಿಯಾದ ಮಾರುತಿ ಪಾಟೀಲ್ ಸರ್ ಬಹಳ ಅನುಭವೀಕರಾಗಿದ್ದ ಸಾರ್ವಜನಿಕರ ಕುಂದು ಕೊರತೆಗಳನ್ನು ಸಲೀಸಾಗಿ ನಿವಾರಿಸುತ್ತಿದ್ದಾರೆ. ಬಿಲ್ ಕಲೆಕ್ಟ್ರಾದ ಸದಾನಂದ ಮಲ್ಲಿಗೆಯವರು ಈ ಹಿಂದಿನಿಂದ ನಮ್ಮ ಗ್ರಾಮ ಪಂಚಾಯಿತಿಯು ಕರವಸೂಲಿಯಲ್ಲಿ ಬಹಳ ಹಿಂದೆ ಉಳಿದು ಕೆಂಪು ಬಣ್ಣದಲ್ಲಿ ಗುರುತಿಸಿಕೊಂಡು ಪಂಚಾಯತಿ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು ಅವರ ಸತತ ಪ್ರರಿಶ್ರಮದಿಂದ ಕರವಸೂಲಿ ಅಭಿಯಾನದಲ್ಲಿ ಡೇಂಜರ್ ಜೂನ್ ನಿಂದ ಹೊರಬರಲು ಮನೆ ಮನೆಗೆ ಕರಪತ್ರ ವಿತರಣೆ, ಡಂಗುರ ಸಾರುವುದು ಹಾಗೂ ಧ್ವನಿ ಮುಖಾಂತರ ಪ್ರಚಾರ ಮಾಡುತ್ತಾ ಕರ ವಸೂಲಿಯಲ್ಲಿ ಮುಂದಾದ ಕಾರಣ ಅಭಿವೃದ್ದಿ ಕೆಲಸಕ್ಕೆ ಅನುಕುಲವಾಗಿದೆ. ಹಾಗೂ ಸಾರ್ವಜನಿಕರಿಗೆ ಸ್ಪಂದಿಸುತ್ತಿದ್ದಾರೆ ಇನ್ನು ಉದ್ಯೋಗ ಖಾತರಿ ನರೇಗಾ ಯೋಜನೆಯ ಅಧಿಕಾರಿಯಾದ ಹನುಮಂತ ಹುಂಡದ ರವರು ದನದ ಸೆಡ್ ಕೃಷಿ ಹೊಂಡ ಹೂಳ ಎತ್ತುವುದು ನಮ್ಮ ಹೊಲ ನಮ್ಮ ದಾರಿ ಹೀಗ ಅನೇಕ ಯೋಜನೆಗಳನ್ನು ಕೂಲಿ ಕಾರ್ಮಿಕರ ಜೊತೆ ಕೆಲಸ ಮಾಡುತ್ತಿರುವುದು ರೈತಾಪಿ ವರ್ಗಕ್ಕೆ ಹಾಗೂ ಕೂಲಿ ಕಾರ್ಮಿಕರಿಗೆ ಪ್ರತಿ ಫಲಾನುಭವಿಗಳಿಗೆ ಸ್ಪಂದಿಸುತ್ತಿದ್ದಾರೆ.
ಸಿಪಾಯಿ ಸತೀಶ ಉದ್ದಪ್ಪನವರ, ತುಳಸಿಗೇರಿ ದಾಸರ, ಮಾದೇವ ಭೋವಿ ವಾಟರ್ ಮ್ಯಾನ್ ಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಕೃಷ್ಣ ಹುಂಡರದ ಲೈಮನ್ ರವರು ಬೀದಿ ದೀಪಗಳನ್ನು ಕಾಳಜಿಯಿಂದ ನೋಡಿಕೊಳ್ಳುವುದರಿಂದ ಊರಿನ ಪ್ರತಿ ಅಂಗಳದಲ್ಲಿ ಸಾರ್ವಜನಿಕರ ಹಾದಿಯಲ್ಲಿ ರಾತ್ರಿ ಹೊತ್ತು ಬೆಳಕು ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ ಪೌರವ ಕಾರ್ಮಿಕರಾದ ವಿಜಯ ಚೆನ್ನ ಮೇತ್ರಿ, ಸುಂದರವಾ ಮೇತ್ರಿ ,ಕಾಶವ್ವಾ ಮೇತ್ರಿ ಗೋವಿಂದ ನರಸನವರ, ಮಾದೇವಿ ಹುಲಶ್ಯಾರ, ಭರಮವ್ವ ಮೇತ್ರಿ ಅಂಗವಿಕಲ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಕಾರ್ಯಕರ್ತೆ ನಸೀಮಾ ಮುಲ್ತಾನಿಯವರು ಕಾರ್ಯನಿರ್ವಹಿಸುತ್ತಿದ್ದಾರೆ .
ಗ್ರಂಥಾಲಯ ಹಾಗೂ ಕೂಸಿನ ಮನೆಯ ಕಾರ್ಯಕರ್ತೆಯರಾದ ಶ್ರೀಮತಿ ದೇಸಾಯಿ ಹಾಗೂ ಪರಾಸ ಇವರುಗಳು ಎರಡನ್ನು ನೋಡಿಕೊಳ್ಳುತ್ತಿದ್ದಾರೆ.
ಸಾರ್ವಜನಿಕರ ಸಹಕಾರದಿಂದ ನಮ್ಮ ಕೌಜಲಗಿ ಗ್ರಾಮ ಪಂಚಾಯತಿಯು ತಾಲೂಕು ಗ್ರಾಮೀಣ ಗಾಂಧಿ ಪುರಸ್ಕಾರ ಯೋಜನೆಯಲ್ಲಿ ತಾಲೂಕಿಗೆ ಎರಡನೇ ಸ್ಥಾನದಲ್ಲಿದ್ದು ಮೊದಲನೇ ಸ್ಥಾನ ಪಡೆಯುವ ಆಸೆಯನ್ನು ಹೊಂದಿದೆ ಎಂದು ಹೇಳಿದರು.
WhatsApp Group Join Now
Telegram Group Join Now
Share This Article