ಹುನಗುಂದ,ಡಿ.13: ಪಟ್ಟಣದಲ್ಲಿ ಮೂವರು ಪೊಲೀಸ್ ರ ಮನೆ ಸೇರಿದಂತೆ ಇತರೆ ನಾಲ್ಕು ಮನೆ ಹಾಗೂ ಒಂದು ದೇವಸ್ಥಾನವನ್ನು ಖತರ್ನಾಕ ಕಳ್ಳರಿಂದ ಸರಣಿ ಕಳ್ಳತನ ನಡೆದಿದೆ. .ಇದರಿಂದ ಪಟ್ಟಣದ ಜನತೆ ಬೆಚ್ಚಿ ಬೀಳುವಂತಾಗಿದೆ. ಘಟನೆಯ ವಿವರ- ಶುಕ್ರವಾರ ನಸುಕಿನ ಜಾವ ಸರಿಸುಮಾರು 1 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಪಟ್ಟಣದ ನಾಲ್ಕು ಕಡೆಗಳಲ್ಲಿ 7 ಮನೆ ಸೇರಿದಂತೆ ಒಂದು ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಅಪಾರ ಪ್ರಮಾಣದ ಬಂಗಾರ, ಬೆಳ್ಳಿ ಆಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದ್ದು. ಆದರೇ ಎಷ್ಟು ಪ್ರಮಾಣದ ಬಂಗಾರ, ಬೆಳ್ಳಿ, ನಗದು ಕಳ್ಳತನವಾಗಿದೆ ಎಂಬುವುದರ ಬಗ್ಗೆ ಪೊಲೀಸರು ಖಚಿತ ಪಡಿಸಿಲ್ಲ.
ರಾತ್ರಿ 1 ಗಂಟೆಯ ಸುಮಾರಿಗೆ ಅಂಬೇಡ್ಕರ್ ನಗರದ ಲಕ್ಷ್ಮಿ ದೇವಸ್ಥಾನದ ದೇವಿಗೆ ತೊಡಿಸುವ ಸಣ್ಣಪುಟ್ಟ ಬೆಳ್ಳಿ ಆಭರಣ ದೋಚಿದ ಕದೀಮರು ಅಲ್ಲಿಂದ ಅಜಾದ್ ನಗರದಲ್ಲಿ ಇಬ್ಬರ ಪೊಲೀಸ್‌ರ ಮನೆ ಸೇರಿ ಇನ್ನುಂದು ಮನೆಗೆ ಕಣ್ಣಾ ಹಾಕಿ ತಮ್ಮ ಕೈಚಳಕ ತೋರಿಸಿ ಅಲ್ಲಿಂದ ಪಟ್ಟಣದ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರುವ ಓರ್ವ ಪೊಲೀಸ್ ಮನೆ, ಮತ್ತೊಂದು ಮನೆಯನ್ನು ಕಳ್ಳತನ ಮಾಡಿದ್ದಾರೆ. ಇನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ ಎರಡು ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡಿದ್ದು. ಈ ಎಲ್ಲ ಘಟನೆಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಸಾರ್ವಜನಕರ ಅಭಿಪ್ರಾಯವಾಗಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳವನ್ನು ಕರೆಸಿ ಪರಿಶೀಲನೆ ನಡೆಸಿ, ಪೊಲೀಸರು ಕದೀಮರ ಹೆಡೆಮುರಿ ಕಟ್ಟಲು ತನಿಖೆ ಚುರುಕುಗೊಳಿಸಿದ್ದಾರೆ.
ಮೂವರು ಪೊಲೀಸರ ಮನೆಗೆ ಕಳ್ಳರು ಕನ್ನಾ ಹಾಕಿದ್ದು ನೋಡಿದರೇ ಪೊಲೀಸರ ಮನೆಗೆ ರಕ್ಷಣೆ ಇಲ್ಲದಿರುವಾಗ ದೇವಸ್ಥಾನ ನಮ್ಮಂತ ಸಾರ್ವಜನಿಕರ ಸ್ಥಿತಿ ಇನ್ನೇನು ಎನ್ನುವ ಆತಂಕದಲ್ಲಿ ಪಟ್ಟಣ ಜನತೆ ಬಹಳಷ್ಟು ಭಯ ಬೀತರಾಗಿದ್ದಂತು ಸತ್ಯ.
ಘಟನಾ ಸ್ಥಳಕ್ಕೆ ಹುನಗುಂದ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ಧಾರೂಢ ಆಲದಕಟ್ಟಿ, ಅಪರಾಧ ವಿಭಾಗದ ಪಿಎಸ್‌ಐ ಎಸ್. ಎಸ್. ಸೀಮಾನೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡು ಇಂದಿನಿAದ ರಾತ್ರಿ ಗಸ್ತು ಹೆಚ್ಚಿಸಲಾಗುವದು ಜನರು ಭಯಪಡಬಾರದು. ರಾತ್ರಿ ವೇಳೆ ಯಾರಾದರು ಸಂಶಯಾಸ್ಪದ ಕಂಡು ಬಂದಲ್ಲಿ ತಕ್ಷಣ ಠಾಣೆಗೆ ದೂರವಾಣಿ ಕರೆ ಮಾಡಬೇಕೆಂದು ಪಿಎಸ್‌ಐ ಸಿದ್ದಾರೂಢ, ಆಲದಕಟ್ಟಿ ತಿಳಿಸಿದರು.


