ಬಳ್ಳಾರಿ, ಮಾ.30t t ನಗರದ ಪ್ರತಿಷ್ಠಿತ ವೀರಶೈವ ಮಹಾವಿದ್ಯಾಲಯದ ಕನ್ನಡ ವಿಭಾಗದಿಂದ ಇಂದು “ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ”: ಒಂದು ಮೌನ ಕ್ರಾಂತಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡುತ್ತಾ ವಚನಕಾರರ ತತ್ವ ಆದರ್ಶಗಳು ಇಂದಿನ ಜಂಜಡದ ವಿಶ್ವಕ್ಕ ಅತ್ಯಂತ ಅವಶ್ಯಕ, ಅವರು ನೀಡಿದ ಆದರ್ಶ ತತ್ವ ನೀತಿಗಳನ್ನು ಪಾಲಿಸಿದರೆ ಇಡೀ ವಿಶ್ವ, ಶಾಂತಿ ಮತ್ತು ಸಮೃದ್ಧವಾಗಿ ನೆಲಸಲು ಸಾಧ್ಯವಾಗುತ್ತದೆ ಎಂದು ಬಸವ ಸಮಿತಿಯ ಅಧ್ಯಕ್ಷ ಅಭಿಪ್ರಾಯಪಟ್ಟರು.
ಅನುಭವ ಮಂಟಪದ ಮೂಲಕ ಇಡೀ ವಿಶ್ವಕ್ಕೆ ಪ್ರಜಾ ಪ್ರಭುತ್ವವನ್ನು 12ನೇ ಶತಮಾನದಲ್ಲಿ ನೀಡಿದ ದಾರ್ಶನಿಕ ವ್ಯಕ್ತಿ ಬಸವಣ್ಣನವರು. ನಾನು ಪ್ರಜಾಪ್ರಭುತ್ವದ ಬದಲಾಗಿ ಪ್ರಜ್ಞಾತತ್ವಯನ್ನಲು ಬಯಸುತ್ತೇನೆ. 12ನೇ ಶತಮಾನದ ಎಲ್ಲ ವಚನಕಾರರು ಕಾಯಕ ತತ್ವ, ಸಮಾನತೆ, ತಾರತಮ್ಯ, ಜಾತೀಯತೆ, ತೊಡೆದು ಹಾಕಿ, ಸಮಸಮಾಜವನ್ನು ನಿರ್ಮಾಣಮಾಡಲು ಶ್ರಮಿಸಿದವರು ಅವರು ಪ್ರತಿಪಾದಿಸಿದ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕೆಂದು ಕರೆ ನೀಡಿದರು.
ವಿಶ್ವಕ್ಕೆ ಸಿಂಧುನಾಗರೀಕತೆ ನೀಡಿದ್ದು ಭಾರತ. ಹಾಗೇ ಜಗತ್ತಿಗೆ ಆದರ್ಶ ತತ್ವಗಳನ್ನು ನೀಡಿದವರು ವಚನಕಾರರು. ವಚನೆಗಳು ಎಂದರೆ ಅದೊಂದು ಮಹಾಮಾನವನಾಗಿಸುವ ವೇದಾಂತ, ವಚನಗಳು ಸಾಹಿತ್ಯದ ಉಪನಿಷತ್ತುಗಳು. ವಚನಕಾರರು ನಾಡಿನ ಋಷಿಗಳು. ಇಂಥವರು ನೀಡಿದ ಸಂದೇಶಗಳು 21ನೇ ಶತಮಾನಕ್ಕೂ ಪ್ರಸ್ತುತವಾಗುತ್ತದೆಂದು ಬಸವ ಸಮಿತಿಯ ಸಂಯೋಜಕ ಸಾಸಲು ಜಿ.ವಿಶ್ವನಾಥ,ಪ್ರಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಶರಣರು ವಚನ ಸಾಹಿತ್ಯದ ಮೂಲಕ ನೀಡಿದಂತ ಸಂದೇಶಗಳು. ಎಲ್ಲ ಕಾಲಕ್ಕೂ ಎಲ್ಲರಿಗೂ ಅನ್ವಯವಾಗುತ್ತವೆ. ನಾವೆಲ್ಲರೂ ಅವರು ನೀಡಿದ ಮೌಲ್ಯಗಳನ್ನು ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗುತ್ತೇವೆಂದು ವೀ.ವಿ.ಸಂಘದ ಕೋಶಾಧಿಕಾರಿಗಳಾದ ಬೈಲುವದ್ದಿಗೇರಿ ಎರಿಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು..
ಇದೊಂದು ಉತ್ತಮ ಉಪನ್ಯಾಸ ಕಾರ್ಯಕ್ರಮ ಶರಣರ ನಡೆ ನುಡಿಗಳನ್ನು ವಿದ್ಯಾರ್ಥಿಗಳ ಅಳವಡಿಸಿಕೊಳ್ಳಬೇಕೆಂದು ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಿ.ಮಲ್ಲನಗೌಡ ಇವರು ತಿಳಿಸಿದರು. ಶರಣರ ತತ್ವಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕೆಂದು ಡಾ.ಜಿ.ಮನೋಹರ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಡಾ.ರಾಜಶ್ರೀ ಪಾಟೀಲ್, ಸ್ವಾಗತಿಸಿದರು. ಡಾ.ಭ್ರಮರಾಂಭ.ವೈ, ಕನ್ನಡ ಉಪನ್ಯಾಸಕರು ಇವರು ವಂದಿಸಿದರು. ಕಾರ್ಯಕ್ರಮ ಸಂಯೋಜಕರಾದ ಡಾ.ಶ್ಯಾಮೂರ್ತಿ.ಜಿ, ಕನ್ನಡ ವಿಭಾಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

