ಮಾನಸಿಕ ಧೈರ್ಯ ತುಂಬುವ ಶಕ್ತಿ ಕ್ರಿಡೆಗಳಿಗಿದೆ – ಬಾಗೆಣ್ಣವರ

Ravi Talawar
ಮಾನಸಿಕ ಧೈರ್ಯ ತುಂಬುವ ಶಕ್ತಿ ಕ್ರಿಡೆಗಳಿಗಿದೆ – ಬಾಗೆಣ್ಣವರ
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
WhatsApp Group Join Now
Telegram Group Join Now

ಹಸಿರು ಕ್ರಾಂತಿ ವರದಿ, ಜಮಖಂಡಿ :ಮಾನಸಿಕ, ದೈಹಿಕ ಧೈರ್ಯ ತುಂಬುವ ಶಕ್ತಿ ಕ್ರೀಡೆಗಳಿಗೆ ಇದೆ. ಕ್ರೀಡೆಯಿಂದ ನಾಯಕತ್ವ ಗುಣ ಬೆಳೆಯಲು ಸಾಧ್ಯ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ,ಡಿ,ಬಾಗೆಣ್ಣವರ ಹೇಳಿದರು.ಭಾನುವಾರ ನಗರದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 2025-26 ನೇ ಸಾಲಿನ ಜಮಖಂಡಿ-ರಬಕವಿ – ಬನಹಟ್ಟಿ ತಾಲೂಕಿನ 14 ಹಾಗೂ 17 ವಯೋಮಿತಿಯೊಳಗಿನ ಮಕ್ಕಳ ಗುಂಪು ಆಟಗಳ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮನುಷ್ಯ ಶಾರೀರಕವಾಗಿ, ದೈಹಿಕವಾಗಿ ಸದೃಢನಾಗಿ ಬದುಕಲು ಕ್ರೀಡೆಗಳು ಬಹಳ ಮುಖ್ಯವಾಗಿವೆ. ಕ್ರೀಡೆಗಳಲ್ಲಿ ಸೋಲು-ಗೆಲವು ಇರುತ್ತದೆ. ಸೋಲು ಅನುಭವಿಸಿದವರು ಯಾರು ಕುಗ್ಗದೆ. ಗೆಲವು ಸಾಧಿಸುವ ಛಲ ಹೊಂದಬೇಕು. ಗೆಲುವಿಗಾಗಿ ಪ್ರಯತ್ನಿಸಬೇಕು, ಸ್ವರ್ಧಾ ಮನೋಭಾವದಿಂದ ಆಟಗಳನ್ನಾಡಬೇಕು ಎಂದು ಹೇಳಿದರು.

ತಾಲೂಕ ಮಟ್ಟದ ಕ್ರೀಡಾಕೂಟ್ಟದಲ್ಲಿ ಜಮಖಂಡಿ, ರಬಕವಿ-ಬನಹಟ್ಟಿ, ಹುನ್ನೂರ, ಸಾವಳಗಿ, ಹಿಪ್ಪರಗಿ, ಗೊಲಬಾಂವಿ, ತೇರದಾಳ ಸೇರಿದಂತೆ ಅನೇಕ ಶಾಲೆಯ ಮಕ್ಕಳು ಭಾಗವಹಿಸಿದರು. ತಾಲೂಕಿ ಐದು ಜನ ದೈಹಿಕ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ.ಗೌರವಿಸಲಾಯಿತು.

ಕ್ಚೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ ಕ್ರೀಡಾ ಧ್ವಜಾರೋಹಣನೇರವೆರಿಸಿದರು. ಬಾಹುಬಲಿ ಮುತ್ತೂರ ಪ್ರಜ್ಞಾವಿಧಿ ಭೋದಿಸಿದರು. ಕ್ಚೇತ್ರ ಸಮನ್ವಯ ಅಧಿಕಾರಿ ಕಾಡೇಶ ಕೊಲೂರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ,ಎಸ್,ಕಲ್ಯಾಣಿ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕಿ ಶ್ರೀಮತಿ ಪಂಚಾಕ್ಷರಿ ನಂದೇಶ, ನೌಕರರ ಸಂಘದ ಅಧ್ಯಕ್ಷ ಡಿ,ಬಿ,ಅಜ್ಜನವರ, ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಬಸವರಾಜ ಹನಗಂಡಿ, ಭೂಷಣ ಪತ್ತಾರ, ಕಡಕೋಳ, ಸಿ,ಜಿ,ಕಡಕೋಳ, ಅರ್ಜುನ ಕಾಖಂಡಕಿ, ನರಸಿಂಹ ಕಲ್ಲೋಳಿ,ಬಾಬಾಗೌಡ ಪಾಟೀಲ, ಪಾಂಡು ಸಿಂಗರಡ್ಡಿ, ನೇಮನಾಥ ನ್ಯಾಮಗೌಡ, ಸಿದ್ದಗೊಂಡ, ವಿಜಯಕುಮಾರ ಯಳಮಲಿ, ಪ್ರಶಾಂತ ಜಂಬಗಿ, ವಿಜಯಕುಮಾರ ಹಲಗಿಮನಿ ಸೇರಿದಂತೆ ಅನೇಕ ಶಿಕ್ಷಕರು ವೇದಿಕೆಯಲ್ಲಿದ್ದರು. ಶಿಕ್ಷಕಿ ನಿರ್ಮಲಾ ಮಿರ್ಜಿ ಸಂಗಡಿಗರು ನಾಡಗೀತೆ ಹಾಡಿದರು. ಸುರೇಶ ಭೋಸ್ಲೆ ಸ್ವಾಗತಿಸಿದರು. ಅಪ್ಪು ಧರಿಗೌಡರ ನಿರೂಪಿಸಿದರು. ಬಾಹುಬಲಿ ನ್ಯಾಮಗೌಡ ವಂದಿಸಿದರು

WhatsApp Group Join Now
Telegram Group Join Now
Share This Article