ತುಮಕೂರು: ದೂರು ನೀಡಲು ಬಂದ ಮಹಿಳೆಯೊಂದಿಗೆ ಪೊಲೀಸ್ ಠಾಣೆಯಲ್ಲೇ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಬಂನಕ್ಕೊಳಗಾಗಿರುವ ಮಧುಗಿರಿ ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ಮಧುಗಿರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪೊಲೀಸರು ಮೆಡಿಕಲ್ ಟೆಸ್ಟ್ ಮಾಡಿಸಿದರು.
ಶುಕ್ರವಾರ ರಾತ್ರಿ ಬಂಧಿಸಿರುವ ಮಧುಗಿರಿ ಪೊಲೀಸರು, ಆರೋಪಿ ರಾಮಚಂದ್ರಪ್ಪ ಅವರನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಮಧುಗಿರಿ ಜೆಎಂಎಫ್ ಸಿ ಕೋರ್ಟ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಸಂತ್ರಸ್ತ ಮಹಿಳೆಯಿಂದ ದೂರು ಪಡೆದು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿ ರಾಮಚಂದ್ರಪ್ಪ ಪೊಲೀಸ್ ಠಾಣೆಯಲ್ಲಿಯೇ ರಾತ್ರಿಯಿಡಿ ಕುಳಿತಿದ್ದರು.
ನಂತರ ಡಿವೈಎಸ್ ಪಿಯನ್ನ ಬಂಧಿಸಿ ಕೆಲ ಸಮಯ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಕೂರಿಸಿ ವಿಚಾರಣೆ ನಡೆಸಿದರು.
ಪ್ರಕರಣ ಹಿನ್ನೆಲೆ: ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪದಡಿ ಮಧುಗಿರಿ ಉಪವಿಭಾಗದ ಡಿವೈಎಸ್ಪಿ ರಾಮಚಂದ್ರಯ್ಯ ಅವರನ್ನ ಸಸ್ಪೆಂಡ್ ಮಾಡಿ ಪೊಲೀಸ್ ಇಲಾಖೆ ನಿನ್ನೆಯೇ ಆದೇಶಿಸಿತ್ತು.