ಘಟಂಪುರ, ಆಗಸ್ಟ್ 29: ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನು ಕಳ್ಳರೆಂದು ಭಾವಿಸಿ ಹಳ್ಳಿ ಜನ ಥಳಿಸಿರುವ ಘಟನೆ ಉತ್ತರ ಪ್ರದೇಶದ ಘಟಂಪುರದಲ್ಲಿ ನಡೆದಿದೆ. ಠಾಣೆಯ ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ತಪ್ಪಾಗಿ ಭಾವಿಸಿದ್ದರು.
ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಘಟನೆಗಳಿಂದ ಜನರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಶಹಪುರ್ ಉಮ್ರಾ ಗ್ರಾಮದಲ್ಲಿ ಒಂಬತ್ತು ತಿಂಗಳ ಶಿಶುವಿನ ಹಣೆಗೆ ಬಂದೂಕಿಟ್ಟು, ದರೋಡೆ ಮಾಡಿದ ಪ್ರಕರಣವೂ ವರದಿಯಾಗಿದೆ.