ಮಳೆ, ಗಾಳಿ ರಭಸಕ್ಕೆ ಶಾಲೆಯ ಪತ್ರಾಸ್‌ ಸೆಡ್‌ ಕಿತ್ತು ಬಿದ್ದಿದೆ

Ravi Talawar
ಮಳೆ, ಗಾಳಿ ರಭಸಕ್ಕೆ ಶಾಲೆಯ ಪತ್ರಾಸ್‌ ಸೆಡ್‌ ಕಿತ್ತು ಬಿದ್ದಿದೆ
WhatsApp Group Join Now
Telegram Group Join Now

ಸಂಕೇಶ್ವರ ,ಏಪ್ರಿಲ್​ 17:  ಇತ್ತೀಚೆಗೆ ಸುರಿದ  ಮಳೆ ಹಾಗೂ ಗಾಳಿ ರಭಸಕ್ಕೆ ಸಮೀಪದ ನಿಡಸೋಸಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಮೇಲೆ ನಿರ್ಮಿಸಿದ ಪತ್ರಾಸ್‌ ಸೆಡ್‌ ಕಿತ್ತು ಬಿದ್ದ ಘಟನೆ ನಡೆದಿದೆ.

ತಾಲೂಕಾ ಪಂಚಾಯತಿಯ 15 ಹಣಕಾಸು ಯೋಜನೆಯ ಅನುದಾನದಡಿಯಲ್ಲಿ ಈ ಕಾಮಗಾರಿ ಮಾಡಿದ್ದು , ಆದರೇ ಗುತ್ತಿಗೆದಾರನ
ಕಳಪೆ ಕಾಮಗಾರಿಯಿಂದ ಮಳೆ ಗಾಳಿಗೆ ಶಾಲೆಯ ಮೇಲೆ ನಿರ್ಮಿಸಿದ ಪತ್ರಾಸ್‌ ಸೆಡ್‌ಗಳು ಕಿತ್ತು ಹೊಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಳೆ ಗಾಳಿಗೆ ಶಾಲೆಯ ಪತ್ರಾಸ್‌ ಸೆಡ್‌ಗಳು ಕಿತ್ತು ಬಿದ್ದರು ಸಹ ಗುತ್ತಿಗೆದಾರನು ಅದನ್ನು ಸರಿ ಮಾಡುವ ಗೋಜಿಗೆ ಇನ್ನುವರೆಗು ಹೋಗಿಲ್ಲ, ಯಾವುದೇ ಕೆಲಸವನ್ನು ಗುತ್ತಿಗೆದಾರ ಸರಿಯಾಗಿ ಮಾಡಿಲ್ಲ, ನಾವು ಮಾಡಿದ ಕೆಲಸವನ್ನು ಯಾರು ಪ್ರಶ್ನಿಸುತ್ತಾರೆ ಎನ್ನುವ ಅಹಂ ನಲ್ಲಿ ಗುತ್ತಿಗೆದಾರ ಇದ್ದಾನೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ತಿರುಗಿ ನೋಡುತ್ತಿಲ್ಲ.ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹವಾಗಿದೆ.

WhatsApp Group Join Now
Telegram Group Join Now
Share This Article