ಸ್ಟ್ರಾಂಗ್ ರೂಮ್​ನ ಬೀಗದ ಕೈ ಮನೆಯಲ್ಲೇ ಮರೆತು ಬಂದ ಅಧಿಕಾರಿ

Ravi Talawar
ಸ್ಟ್ರಾಂಗ್ ರೂಮ್​ನ ಬೀಗದ ಕೈ ಮನೆಯಲ್ಲೇ ಮರೆತು ಬಂದ ಅಧಿಕಾರಿ
WhatsApp Group Join Now
Telegram Group Join Now

ವಿಜಯಪುರ, ಜೂನ್.04: ಲೋಕಸಭಾ ಚುನಾವಣೆ 2024ರ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಈಗಾಗಲೇ ಎಲ್ಲಾ ಕಡೆ ಬಹುತೇಕ ಸ್ಟ್ರಾಂಗ್ ರೂಮ್​ಗಳು ಓಪನ್ ಆಗಿದ್ದು ಅಂಚೆ ಮತ ಎಣಿಕೆ ಕೂಡ ಆರಂಭವಾಗಿದೆ. ಆದರೆ ವಿಜಯಪುರದಲ್ಲಿ ಅಧಿಕಾರಿ ಸ್ಟ್ರಾಂಗ್ ರೂಮ್​ನ ಬೀಗದ ಕೈ ಮನೆಯಲ್ಲೇ ಮರೆತು ಬಂದ ಪ್ರಸಂಗ ನಡೆದಿದೆ.

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಅವರು ಸ್ಟ್ರಾಂಗ್ ರೂಮ್​ನ ಬೀಗದ ಕೈಯನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ಲಾಕ್ ಓಪನ್ ಮಾಡಲು ಹೋದಾಗ ತಮ್ಮ ಬಳಿ ಕೀ ಇಲ್ಲದಿರುವುದು ತಿಳಿದುಬಂದಿದೆ. ತಕ್ಷಣವೇ ಶರೀಫ್ ತಮ್ಮ ಮನೆಗೆ ಹಿಂದಿರುಗಿದ್ದು ಕೀ ತಂದು ಈಗ ಸ್ಟ್ರಾಂಗ್ ರೂಮ್ ಓಪನ್ ಮಾಡಿದ್ದಾರೆ. ಅಧಿಕಾರಿಯ ಎಡವಟ್ಟಿನಿಂದಾಗಿ ಸ್ಟ್ರಾಂಗ್ ರೂಮ್ ಓಪನ್ ಮಾಡಲು ಕೊಂಚ ತಡವಾಯಿತು.

WhatsApp Group Join Now
Telegram Group Join Now
Share This Article