ನವದೆಹಲಿ, ಸೆಪ್ಟೆಂಬರ್ 3: ಈ ಹಿಂದೆ ಜಾರಿಯಲ್ಲಿದ್ದ 4 ಜಿಎಸ್ಟಿ ಸ್ಲ್ಯಾಬ್‌ಗಳನ್ನು ಕೇಂದ್ರ ಸರ್ಕಾರ 2 ಸ್ಲ್ಯಾಬ್ಗಳಿಗೆ ಇಳಿಸಿದೆ. ಈ ಜಿಎಸ್ಟಿ ದರಗಳಿಗೆ ನಡೆದ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ GST ಮಂಡಳಿಯ 56ನೇ ಸಭೆಯು ಈ ನಿರ್ಧಾರ ತೆಗೆದುಕೊಂಡಿದೆ. ಅಸ್ತಿತ್ವದಲ್ಲಿರುವ ಶೇ. 12 ಮತ್ತು ಶೇ. 28ರ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ಇನ್ಮುಂದೆ ಶೇ. 5 ಮತ್ತು ಶೇ. 18ರ ಸ್ಲ್ಯಾಬ್ ದರಗಳು ಮಾತ್ರ ಜಾರಿಯಲ್ಲಿರಲಿವೆ.
ಸೆಪ್ಟೆಂಬರ್ 22ರಿಂದ ನೂತನ ಜಿಎಸ್ಟಿ ಜಾರಿ

ಸೆಪ್ಟೆಂಬರ್ 22ರಿಂದ GST ಮಂಡಳಿಯ ನಿರ್ಧಾರಗಳು ಜಾರಿಗೆ ಬರಲಿದೆ. ಆರೋಗ್ಯ, ಜೀವವಿಮೆ ಮೇಲಿನ ಜಿಎಸ್ಟಿಯನ್ನು ಸಹ ರದ್ದುಪಡಿಸಲಾಗಿದೆ. ಜಿಒಎಂನ ಎಲ್ಲಾ ಶಿಫಾರಸುಗಳನ್ನು ಜಿಎಸ್ಟಿ ಮಂಡಳಿಯು ಅನುಮೋದಿಸಿದೆ. ಎಲ್ಲಾ ರಾಜ್ಯಗಳು ಈ ಪ್ರಸ್ತಾವನೆಗಳಿಗೆ ಸರ್ವಾನುಮತದಿಂದ ಒಪ್ಪಿಕೊಂಡಿವೆ. ಈ ಮೂಲಕ ದೇಶದ ಜನರಿಗೆ ಬಂಪರ್ ಕೊಡುಗೆ ನೀಡಲಾಗಿದೆ.