ಕುಡಚಿ; ಜೀವನದಲ್ಲಿ ಏನೇ ಬಂದರೂ ಎದುರಿಸುತ್ತೇವೆ ಎನ್ನುವ ಧೈರ್ಯ ವಿದ್ಯಾರ್ಥಿಗಳಲ್ಲಿ ಇಗಿನಿಂದಲೆ ಬರಬೇಕೆಂದು ನಿವೃತ್ತ ಮುಖ್ಯಾಪಾಧ್ಯಯ ಆರ್ ಎಮ್ ಸನದಿ ಹೇಳಿದರು.
ಸೊಮವಾರ, ಗುಂಡವಾಡ ಗ್ರಾಮದಲ್ಲಿ ಆಯೋಜಿಸಿದ, ಬೆಳಗಾವಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಹಾಗೂ ಕುಡಚಿ ಪಟ್ಟಣದ ಡಾ, ಬಾಬಾಸಾಹೇಬ ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ, ಶಂಕರಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಕುಡಚಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೂಪ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಅತಿಯಾಗಿ ಮೋಬೈಲವನ್ನು ಬಳಸಬೇಡಿ ಎಂದು ಹೇಳುತ್ತಾ ರಾಷ್ಟೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಕಳೆದ ೭ ದಿನಗಳಿಂದ ಕಲತ್ತಿರುವ ಅನುಭವ ಮುಂದೋಂದು ದಿನ್ ಬದುಕಿಗೆ ಧಾರಿಯಾಗಲಿದೆ ಎಂದು ತಿಳಿಸಿದರು.
ಕುಡಚಿ ಪಟ್ಟಣದ ಬಿ, ಶಂಕರಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಎ ಎಸ್ ಕಾಂಬಳೆ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಅನೇಕ ಅನುಭವಗಳನ್ನು ನೀಡುತ್ತದೆ ಅದನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಬಳಿಸಿಕೊಳ್ಳಬೇಕೆಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ ಸಹಾಯ ಸಹಕಾರ ನೀಡಿದ ಗ್ರಾಮದ ಗಣ್ಯರನ್ನು ಸತ್ಕರಿಸಿ ಗೌರವಿಸಲಾಯಿತು.
ತಾಲೂಕ ಪಂಚಾಯಿತಿ ಮಾಜಿ ಅಧ್ಯಕ್ಷ ಸುಖಮಾರ ಪಾಟೀಲ, ಗಂಗಾರಾಮ ಪೂಜೇರಿ, ಮಲಗೌಡ ಪಾಟೀಲ, ಅಂತೋಷ ಪಾಟೀಲ, ರಾಜೇಂದ್ರ ಪಾಟೀಲ, ಅನೀಲಕುಮಾರ ಉಗಾರೆ, ಕಲಗೌಡ ಪಾಟೀಲ, ರಾವಸಾಬ ಪಾಟೀಲ, ಪ್ರಾಚಾರ್ಯ ಎ ಎಸ್ ಕಾಂಬಳೆ, ಎನ್ ಎಸ್ ಎಸ್ ಕಾರ್ಯಕ್ರಮದ ಅಧೀಕಾರಿ ಪ್ರೋ, ಆರ್ ಎಮ್ ಮಹೇಶವಾಡಗಿ, ಹಾಗೂ ಕಾಲೇಜಿನ ಸರ್ವಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.


