ಯಶೋಧರ ನಿರ್ದೇಶನದ ಚಿತ್ರದ ಹೆಸರು  ಹಚ್ಚೆ 

Ravi Talawar
ಯಶೋಧರ ನಿರ್ದೇಶನದ ಚಿತ್ರದ ಹೆಸರು  ಹಚ್ಚೆ 
WhatsApp Group Join Now
Telegram Group Join Now
     ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಅವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ
ಹಾಗೂ ಅಭಿಮನ್ಯು ನಾಯಕನಾಗಿ ನಟಿಸಿರುವ ವಿಭಿನ್ನ ಕಥೆಯ ನೂತನ ಚಿತ್ರದ ಶೀರ್ಷಿಕೆ ಇತ್ತೀಚೆಗೆ ಅನಾವರಣಗೊಂಡಿದೆ. ಚಿತ್ರಕ್ಕೆ “ಹಚ್ಚೆ” ಎಂದು ಹೆಸರಿಡಲಾಗಿದೆ.
     ನಾಯಕಿಯಾಗಿ ಅದ್ಯಾ ಪ್ರಿಯಾ ನಟಿಸಿದ್ದಾರೆ. ಅನುಪ್ರೇಮ, ಗುರುರಾಜ್ ಹೊಸಕೋಟೆ, ದುಷ್ಯಂತ್, ಶ್ರೀಮಂತ್ ಸುರೇಶ್, ಚಂದ್ರು ಬಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ.
     ‘ಹಚ್ಚೆ’ ಚಿತ್ರಕ್ಕೆ ಇತಿಹಾಸದ ಶಕ್ತಿ ಎಂಬ ಅಡಿಬರಹವಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕರ್ನಾಟಕದ ಸುಂದರ ಸ್ಥಳಗಳಲ್ಲಿ 50 ದಿನಗಳ ಚಿತ್ರೀಕರಣ ನಡೆದಿದೆ. ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಯಾಸಿನ್  ಛಾಯಾಗ್ರಹಣವಿರುವ ಈ ಚಿತ್ರದ  ಟೀಸರ್ ಹಾಗೂ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಲಿದೆ.
WhatsApp Group Join Now
Telegram Group Join Now
Share This Article