ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜಿನ ಹಣ ‘ನಮಾಮಿ ಗಂಗೆ ಯೋಜನೆ’ಗೆ ಅರ್ಪಣೆ

Ravi Talawar
ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜಿನ ಹಣ ‘ನಮಾಮಿ ಗಂಗೆ ಯೋಜನೆ’ಗೆ ಅರ್ಪಣೆ
WhatsApp Group Join Now
Telegram Group Join Now

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆತ ಸಾರ್ವಜನಿಕ ಕಾಣಿಕೆಗಳ ಇ-ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಇದರಿಂದ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲು ಉದ್ದೇಶಿಸಲಾಗಿದೆ. ಇ-ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿ ಬಿಡ್​​ ಮಾಡುವಂತೆ ಮೋದಿ ಮನವಿ ಮಾಡಿದ್ದಾರೆ.

ಈ ಕುರಿತು ‘ಎಕ್ಸ್’​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಪ್ರತೀ ವರ್ಷ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನನಗೆ ಉಡುಗೊರೆಯಾಗಿ ಬಂದ ಕಾಣಿಕೆಗಳನ್ನು ಹರಾಜಿಗೆ ಹಾಕಲಾಗುವುದು. ಹರಾಜು ಪ್ರಕ್ರಿಯೆಯಲ್ಲಿ ಬಂದ ಹಣ ನಮಾಮಿ ಗಂಗೆ ಯೋಜನೆ ಸೇರಲಿದೆ. ಈ ವರ್ಷದ ಹರಾಜು ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ನಿಮಗೆ ಆಸಕ್ತಿಕರ ಎನ್ನಿಸಿದ ವಸ್ತುಗಳ ಮೇಲೆ ಬಿಡ್​ ಮಾಡಬಹುದು ಎಂದು ತಿಳಿಸಿದ್ದಾರೆ.

ಗಂಗಾ ನದಿಯ ಪುನರುಜ್ಜೀವನ ಮತ್ತು ನದಿಯನ್ನು ಸಂರಕ್ಷಿಸುವ ಯೋಜನೆಯೇ ನಮಾಮಿ ಗಂಗೆ. ಈ ಯೋಜನೆಗೆ ವಿಶ್ವಸಂಸ್ಥೆ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ.

ಇನ್ನು ಉಡುಗೊರೆಗಳ ಇ-ಹರಾಜು ಪ್ರಕ್ರಿಯೆ ಅಕ್ಟೋಬರ್​ 2ರವರೆಗೆ ನಡೆಯಲಿದೆ. ಹರಾಜಿನಲ್ಲಿ 600ಕ್ಕೂ ಹೆಚ್ಚು ಉಡುಗೊರೆಗಳಿವೆ. ಕೇಂದ್ರ ಸಂಸ್ಕೃತಿ ಸಚಿವಾಲಯ ಆನ್​ಲೈನ್​ ಮೂಲಕ ಹರಾಜು ನಡೆಸಲಿದೆ.

ಸಾಂಪ್ರದಾಯಿಕ ಕಲಾ ಪ್ರಕಾರದ ವಸ್ತುಗಳು, ವರ್ಣಚಿತ್ರ, ಶಿಲ್ಪಗಳು, ಕರಕುಶಲ ವಸ್ತುಗಳು, ಕಲಾಕೃತಿಗಳು, ಶಾಲುಗಳು, ಶಿರಸ್ತ್ರಾಣ, ಕತ್ತಿ, ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತು ಶ್ರೀ ದ್ವಾರಕಧೀಶ ಮಾದರಿಗಳೂ ಸೇರಿ ಹಲವು ಹಿಂದೂ ದೇವರ ಪ್ರತಿಮೆಗಳು ಹರಾಜಿನಲ್ಲಿವೆ.

WhatsApp Group Join Now
Telegram Group Join Now
Share This Article