ಮೂರು ಸೇನೆಗಳಿಗೆ ಕೇಂದ್ರ ರಕ್ಷಣಾ ಸಚಿವಾಲಯವು ಮಾರ್ಗಸೂಚಿ

Ravi Talawar
ಮೂರು ಸೇನೆಗಳಿಗೆ ಕೇಂದ್ರ ರಕ್ಷಣಾ ಸಚಿವಾಲಯವು ಮಾರ್ಗಸೂಚಿ
WhatsApp Group Join Now
Telegram Group Join Now

ನವದೆಹಲಿ, ಮೇ 28: ಏಕೀಕೃತ ಮಿಲಿಟರಿ ಕಮಾಂಡ್​ಗೆ ಸಂಬಂಧಿಸಿದಂತೆ ಮೂರು ಸೇನೆಗಳಿಗೆ ಕೇಂದ್ರ ರಕ್ಷಣಾ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಏಕೀಕೃತ ಮಿಲಿಟರಿ ಕಮಾಂಡ್ ಎಂದರೆ ದೇಶದ ಮೂರು ಪ್ರಮುಖ ರಕ್ಷಣಾ ಪಡೆಗಳು ಅಂದರೆ ಸೇನೆ, ನೌಕಾಪಡೆ ಹಾಗೂ ವಾಯುಪಡೆ ಒಂದೇ ನಾಯಕತ್ವದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ.ಇದು ಯುದ್ಧದ ಸಂದರ್ಭದಲ್ಲಿ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ವ್ಯವಸ್ಥೆಯಾಗಿದೆ.

ಇಂಟರ್-ಸರ್ವೀಸ್ ಆರ್ಗನೈಸೇಷನ್ (ಕಮಾಂಡ್, ನಿಯಂತ್ರಣ ಮತ್ತು ಶಿಸ್ತು) ಕಾಯ್ದೆ 2023 ರ ಅಡಿಯಲ್ಲಿ ರೂಪಿಸಲಾದ ಈ ನಿಯಮಗಳನ್ನು ಗೆಜೆಟ್ ಅಧಿಸೂಚನೆಯ ಮೂಲಕ ತಿಳಿಸಲಾಗಿದ್ದು, ಮೇ 27 ರಿಂದಲೇ ಜಾರಿಗೆ ಬಂದಿದೆ. ಭೂ ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳಿಗಾಗಿ ಮಾರ್ಗಸೂಚಿ ಸಿದ್ಧವಿದೆ. ಇದರಿಂದಾಗಿ ಸಶಸ್ತ್ರಪಡೆಗಳ ನಡುವಿನ ಏಕತೆ ಮತ್ತಷ್ಟು ಗಟ್ಟಿಯಾಗಲಿದೆ.
2023 ರ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ್ದವು.ಆಗಸ್ಟ್ 15, 2023 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದವು ಮತ್ತು ಮೇ 08, 2024 ರ ಗೆಜೆಟ್ ಅಧಿಸೂಚನೆಯ ಪ್ರಕಾರ, ಕಾಯಿದೆಯು ಮೇ 10, 2024 ರಿಂದ ಜಾರಿಗೆ ಬಂದಿತ್ತು.
WhatsApp Group Join Now
Telegram Group Join Now
Share This Article