ಕೊಲೆ ಪ್ರಕರಣದ ಆರೋಪಿಗಳಿಗೆ ರಾಜಾತಿಥ್ಯ ಕಲ್ಪಿಸಿದ ಆರೋಪ: ಸಿಸಿಟಿವಿ ದೃಶ್ಯ ನೀಡುವಂತೆ ವಕೀಲರ ನಿಯೋಗ ಆಗ್ರಹ –

Ravi Talawar
ಕೊಲೆ ಪ್ರಕರಣದ ಆರೋಪಿಗಳಿಗೆ ರಾಜಾತಿಥ್ಯ ಕಲ್ಪಿಸಿದ ಆರೋಪ: ಸಿಸಿಟಿವಿ ದೃಶ್ಯ ನೀಡುವಂತೆ ವಕೀಲರ ನಿಯೋಗ ಆಗ್ರಹ –
WhatsApp Group Join Now
Telegram Group Join Now

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಸೇರಿ ಇನ್ನುಳಿದ ಆರೋಪಿಗಳಿಗೆ ರಾಜಾತಿಥ್ಯ ಕಲ್ಪಿಸಿದ‌ ಆರೋಪದಡಿ ವಕೀಲರ ನಿಯೋಗವು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಭೇಟಿ ನೀಡಿ ಪ್ರಶ್ನಿಸಿತ್ತು. ಸತ್ಯಾಸತ್ಯತೆ ಅರಿಯಲು ಠಾಣೆಯ 48 ಗಂಟೆಯೊಳಗಿನ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಆಗ್ರಹಿಸಿ ಆರ್​ಟಿಐ ಅಡಿ ಅರ್ಜಿ ಸಲ್ಲಿಸಿದೆ.

ರೇಣುಕಸ್ವಾಮಿ‌ ಕೊಲೆ ಪ್ರಕರಣದಲ್ಲಿ 13 ಮಂದಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿರುವ ಅನ್ನಪೂರ್ಣೇಶ್ವರಿ ನಗರ‌ ಠಾಣೆಯಲ್ಲಿ ಆರೋಪಿತರಿಗೆ ರಾಜ್ಯಾತಿಥ್ಯ ಕಲ್ಪಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ‌ ಪೂರಕವೆಂಬಂತೆ ನಿನ್ನೆ ಠಾಣೆ ಆವರಣದಲ್ಲಿ ಶಾಮಿಯಾನ ಹಾಕಲಾಗಿತ್ತು. ವಿಚಾರಣೆ ಎದುರಿಸುತ್ತಿರುವ ದರ್ಶನ್​ಗೆ ಸಿಗರೇಟು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು‌.

ಶಾಮಿಯಾನ ಹಾಕಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಠಾಣೆ ಪ್ರವೇಶ ನಿರಾಕರಿಸಲಾಗಿತ್ತು. 144 ಸೆಕ್ಷನ್ ಜಾರಿ‌ ನೆಪದಲ್ಲಿ ಠಾಣೆಯ ಮುಂದಿನ ರಸ್ತೆಯನ್ನ ಬ್ಯಾರಿಕೇಡ್ ಹಾಕಿ ಸಾರ್ವಜನಿಕ‌ ಪ್ರವೇಶ ನಿಷೇಧಿಸಲಾಗಿದ್ದರಿಂದ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದರು. ರಾಜಾತಿಥ್ಯ ಕಲ್ಪಿಸಿದ ಆರೋಪದಡಿ ವಕೀಲರ ನಿಯೋಗ ಆರ್​ಟಿಐ ಅಡಿ ಅರ್ಜಿ ಹಾಕಿ ಕಳೆದ 48 ಗಂಟೆಯೊಳಗಿವರೆಗೂ ಠಾಣೆಯ ಒಳಾಂಗಣ ಸಿಸಿಟಿವಿ ದೃಶ್ಯ ನೀಡುವಂತೆ ಆಗ್ರಹಿಸಿದೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಉಮಾಪತಿ, ಕೊಲೆ ಪ್ರಕರಣದ ಆರೋಪಿಗಳಿಗೆ ವಿಶೇಷ ಆತಿಥ್ಯ ಕೊಟ್ಟಿರುವ ಆರೋಪ ಹಿನ್ನೆಲೆಯಲ್ಲಿ ಸತ್ಯಾಸತ್ಯಾತೆ ತಿಳಿಯಲು ಸಿಸಿಟಿವಿ ದೃಶ್ಯಾವಳಿ ಲಗತ್ತಿಸಬೇಕೆಂದು ಆರ್​ಟಿಐ ಅಡಿ ಅರ್ಜಿ ಸಲ್ಲಿಸಲಾಗಿದೆ. ಸಿಸಿಟಿವಿ ಸಿಕ್ಕರೆ ಎಲ್ಲವೂ ಗೊತ್ತಾಗಲಿದೆ. ಈ ಠಾಣೆ ಬಳಿ ಸೆಕ್ಷನ್ 144 ಹಾಕಲು ಕಾರಣವೇನು..?, ಶಾಮಿಯಾನ ಹಾಕಲು ಸೂಚನೆ ಕೊಟ್ಟಿದ್ರು ಅನ್ನೊದರ ಬಗ್ಗೆ ಮಾಹಿತಿ ಕೇಳಿದ್ದೇವೆ. ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು‌.

ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಮಾತನಾಡಿ, ಈ ಹಿಂದೆ ಆರ್.ಆರ್.ನಗರದಲ್ಲಿ ಒತ್ತುವರಿಯಾಗಿದ್ದ ರಾಜಕಾಲುವೆ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿಯು ಬಡವರ ಮನೆ ಹೊಡೆದಾಕಿದ್ದರು. ಆ ವೇಳೆ ದರ್ಶನ್ ಮತ್ತು ಶಿವಶಂಕರಪ್ಪ ಮನೆ ಬಿಟ್ಟಿದ್ದರು. ಅಂದು ಯಾರು ದರ್ಶನ್ ಕಾಪಾಡಿದ್ರು, ಅದೇ ಶಕ್ತಿ ಮತ್ತೆ ಕಾಪಾಡಲು ಮುಂದಾಗಿದೆ. ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರುವುದು ಸರ್ವಾಧಿಕಾರಿ ಧೋರಣೆನಾ ? ಎಂದು ಪ್ರಶ್ನಿಸಿದರು.

WhatsApp Group Join Now
Telegram Group Join Now
Share This Article