ಕೋಲ್ಕತ್ತಾ: ಅರ್ಜೆಂಟೀನಾದ ಸೂಪರ್ ಸ್ಟಾರ್‌ನನ್ನು ಎಂದು ಖ್ಯಾತಿ ಗಳಿಸಿರುವ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಮೂರು ದಿನ ಭಾರತದ ಪ್ರವಾಸ ಕೈಗೊಂಡಿದ್ದು, ಶನಿವಾರ ಬೆಳಗ್ಗೆ ಕೋಲ್ಕತ್ತಾಗೆ ಬಂದಿದರು. ಲಿಯೋನೆಲ್ ಮೆಸ್ಸಿ ನೋಡಲು ಚಳಿಯನ್ನು ಲೇಕಿಸದೇ ಫುಟ್‌ಬಾಲ್ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಕಾಯುತ್ತಿದ್ದರು. ಇದರ ಮಧ್ಯ ಮಸ್ಸಿಯನ್ನು ನೋಡಲು ಸಾಧ್ಯವಾಗದಿದ್ದಾಗ ಅಭಿಮಾನಿಗಳು ಕ್ರೀಡಾಂಗಣಕ್ಕೆ ಏಕಾಏಕಿ ನುಗ್ಗಿ ದಂಗೆಯನ್ನು ಎಬ್ಬಿಸಿದ್ದಾರೆ.
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿನ ಈ ಅವ್ಯವಸ್ಥೆಗೆ ಕಾರಣವಾದ ಆರೋಪದ ಮೇಲೆ ಕೋಲ್ಕತ್ತಾದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ಪ್ರಮುಖ ಆಯೋಜಕರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಅವರು ತಿಳಿಸಿದ್ದಾರೆ.
ನಿರಾಶೆಗೊಂಡ ಪ್ರೇಕ್ಷಕರಿಗೆ ಟಿಕೆಟ್ ಹಣವನ್ನು ಮರುಪಾವತಿಸುವಂತೆ ಆಯೋಜಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.

ಬೆಳಗ್ಗೆ 10.30ಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೆ ಲಿಯೋನೆಲ್ ಮೆಸ್ಸಿ ಅವರು ಲೇಕ್ಟೌನ್‌ನಲ್ಲಿರುವ 70 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಬದಲ್ಲಿ “ನಮಗೆ ಮೆಸ್ಸಿ ಬೇಕು” ಎಂಬ ಘೋಷಣೆಗಳು ಗ್ಯಾಲರಿಯಿಂದ ಕೇಳಿಬರುತ್ತಲೇ ಇತ್ತು. ಭದ್ರತಾ ಕಾರಣಗಳಿಂದಾಗಿ ಮೆಸ್ಸಿ ಅಭಿಮಾನಿಗಾಳ ಹತ್ತಿರ ಹೋಗಲಿಲ್ಲ. ನಂತರ, ಲಿಯೋನೆಲ್ ಮೆಸ್ಸಿ ಆಗಮಿಸಿ, ಬೆಳಗ್ಗೆಯಿಂದಲೇ ಕಾಯುತ್ತಿದ್ದ ಅಭಿಮಾನಿಗಳತ್ತ ಕೈ ಬೀಸಿದರು.
ಅಕ್ಷರಶಃ ರಣರಂಗವಾಯಿತು ಲೇಕ್ ಕ್ರೀಡಾಂಗಣ: ಮೆಸ್ಸಿ ನೋಡಲು ದುಬಾರಿ ಮೊತ್ತ ಪಾವತಿಸಿ ಟಿಕೆಟ್ ಖರೀದಿಸಿ ಅಭಿಮಾನಗಳುಬಂದಿದರು. ಆದರೆ, ಮೆಸ್ಸಿ ಕೇವಲ 10 ನಿಮಿಷ ಕ್ರೀಡಾಂಗಣದಲಿದ್ದು, ಅಲ್ಲಿಂದ ತೆರಳಿದ್ದು, ಮಸ್ಸಿಯನ್ನು ನೋಡಲು ಸಾಧ್ಯವಾಗದಿದ್ದಾಗ ಅಭಿಮಾನಿಗಳು ಆಕ್ರೋಶಗೊಂಡು ಮೈದಾನಕ್ಕೆ ಏಕಾಏಕಿ ನುಗ್ಗಿ ಕುರ್ಚಿಗಳಿಂದ ಹಿಡಿದು ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಪುಡಿಮಾಡಿದ ಘಟನೆ ನಡೆದಿದೆ. ಮೆಸ್ಸಿ ಬಂದು ಹೋದ ನಂತರ ಸಾಲ್ಟ್ ಲೇಕ್ ಕ್ರೀಡಾಂಗಣ ಅಕ್ಷರಶಃ ರಣರಂಗವಾಗಿತ್ತು. ಈ ಅವ್ಯವಸ್ಥೆಗೆ ಕಾರಣವಾದ ಆರೋಪದ ಮೇಲೆ ಕೋಲ್ಕತ್ತಾದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ಪ್ರಮುಖ ಆಯೋಜಕರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಅವರು ತಿಳಿಸಿದ್ದಾರೆ.
ಪ್ರೇಕ್ಷಕರಿಗೆ ಟಿಕೆಟ್ ಹಣ ವಾಪಸ್: ಮೆಸ್ಸಿ ನೋಡಲೆಂದೆ 5000 ದಿಂದ 50000 ಸಾವಿರದವರೆಗೆ ಟಿಕೆಟ್ ಕೊಟ್ಟು ಸ್ಟೇಡಿಯಂಗೆ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಾಳು ಬಂದಿದ್ದರು.



