ಚುನಾವಣೆಗೂ ಮುನ್ನವೇ ಗೆದ್ದು ಬೀಗಿದ ಜಾರಕಿಹೊಳಿ ಸಹೋದರರ ಬಣ: 9 ಸ್ಥಾನ ಅವಿರೋಧ| 7 ಸ್ಥಾನಕ್ಕೆ ಅ.19 ರಂದು ಚುನಾವಣೆ.

Ravi Talawar
ಚುನಾವಣೆಗೂ ಮುನ್ನವೇ ಗೆದ್ದು ಬೀಗಿದ ಜಾರಕಿಹೊಳಿ ಸಹೋದರರ ಬಣ:   9 ಸ್ಥಾನ ಅವಿರೋಧ| 7 ಸ್ಥಾನಕ್ಕೆ ಅ.19 ರಂದು ಚುನಾವಣೆ.
WhatsApp Group Join Now
Telegram Group Join Now

 ಗಂಗಾಧರ ಗುಜನಟ್ಟಿ

ಬೆಳಗಾವಿ. ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆ ಕಾವು ಇಂದು ಜೋರಾಗಿತ್ತು, ಮೊನ್ನೆ ನಾಮಪತ್ರ ಸಲ್ಲಿಕೆ ಕೊನೆಯ ದಿನದಂದು ಐದು ತಾಲೂಕಿನ ಅಭ್ಯರ್ಥಿಗಳಾದ ಗಣೇಶ ಹುಕ್ಕೇರಿ, ವಿಶ್ವಾಸ ವೈದ್ಯ, ರಾಹುಲ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ವೀರೂಪಾಕ್ಷ ಮಾಮನಿ ಅವಿರೋಧವಾಗಿ ಆಯ್ಕೆ ಆಗಿದ್ದರು. ಆ ಆಯ್ಕೆಯಲ್ಲಿ ಗಣೇಶ ಹುಕ್ಕೇರಿ ಮಾತ್ರ ಯಾವುದೇ ಬಣದೊಂದಿಗೆ ಗುರ್ತಿಸಿಕೊಳ್ಳದೆ ಆಯ್ಕೆ ಅಗಿದ್ದು ಉಳಿದ ನಾಲ್ಕು ತಾಲೂಕಾ ಅಭ್ಯರ್ಥಿಗಳು ಜಾರಕಿಹೊಳಿ ಬಣದ ನಿರ್ದೇಶಕರಾಗಿ ಆಯ್ಕೆ ಆಗಿದ್ದರು. ಇಂದು 23-10-2025 ರಂದು ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದ್ದರಿಂದ ಖಾನಾಪುರ ತಾಲೂಕಿನಿಂದ ಅರವಿಂದ ಪಾಟೀಲ, ಮೂಡಲಗಿ ತಾಲೂಕಿನಿಂದ ನೀಲಕಂಠ ಕಪ್ಪಲಗುದ್ದಿ, ಕಾಗವಾಡ ತಾಲೂಕಿನಿಂದ ಅಚ್ಚರಿ ಎಂಬಂತೆ  ಜಾರಕಿಹೊಳಿ ಸಹೋದರರು ಶಾಸಕ ರಾಜು ಕಾಗೆ ವಿರುದ್ಧ ಸ್ಪರ್ದಿಸಿದ್ದ ಶ್ರೀಮಂತ ಪಾಟೀಲ ಮಗ ಶ್ರೀನಿವಾಸ ಪಾಟೀಲ  ನಾಮಪತ್ರ ಹಿಂಪಡೆದ ಕಾರಣ ಶಾಸಕ ರಾಜು ಕಾಗೆ ಅವರು ಕಾಗವಾಡ ತಾಲೂಕಿನಿಂದ ಡಿಸಿಸಿ ಬ್ಯಾಂಕ  ನಿರ್ದೇಶಕರಾಗಿ ಅವಿರೋಧವಾಗಿ  ಆಯ್ಕೆಯಾಗಿ ಸವದಿ – ಕಾಗೆ ಬಣದಿಂದ ಹೊರಬಂದು ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡರು. ಮತ್ತು ಇತ್ತರೆ ಕ್ಷೇತ್ರದಿಂದ ಸ್ಪರ್ದಿಸಿದ್ದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿರುದ್ಧ ಸ್ಪರಿಸಿದ್ದ ಎಲ್ಲ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಕಾರಣ ಚನ್ನರಾಜ ಹಟ್ಟಿಹೊಳಿ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿಅವಿರೋಧವಾಗಿ  ಆಯ್ಕೆಯಾದರು. ಅದಕ್ಕಾಗಿ ಒಟ್ಟು ಡಿಸಿಸಿ ಬ್ಯಾಂಕ ನಿರ್ದೇಶಕರ 16 ಕ್ಷೇತ್ರಗಳಲ್ಲಿ ಚುನಾವಣೆ ಇಲ್ಲಿಯವರೆಗೆ 9 ಜನ ಅವಿರೋಧವಾಗಿ ಆಯ್ಕೆ ಅಗಿದ್ದು, ಉಳಿದ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
   ಚುನಾವಣೆ ನಡೆಯುವ ಕ್ಷೇತ್ರಗಳು.
ಹುಕ್ಕೇರಿ. ಮಾಜಿ ಸಂಸದ ರಮೇಶ ಕತ್ತಿ  ಹುಕ್ಕೇರಿ ತಾಲೂಕಿನಿಂದ ಸ್ಪರ್ದಿಸುತ್ತಿದ್ದು ಅವರ ವಿರುದ್ಧ ರಾಜೇಂದ್ರ ಪಾಟೀಲ ಜಾರಕಿಹೊಳಿ ಬಣದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲಿದ್ದಾರೆ.
ಬೈಲಹೊಂಗಲ. ಜಾರಕಿಹೊಳಿ ಬಣದಿಂದ  ಮಾಜಿ ಶಾಸಕ ಹಾಗೂ 6 ಬಾರಿ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿದ್ದ ಮಹಾಂತೇಶ ದೊಡ್ಡಗೌಡರ ವಿರುದ್ಧ  ಮಾಜಿ ಶಾಸಕ ವಿ ಆಯ್ ಪಾಟೀಲ  ಸ್ಪರ್ಧೆ ಒಡ್ಡಿದ್ದಾರೆ.
ರಾಮದುರ್ಗ. ಜಾರಕಿಹೊಳಿ ಬಣದ ಅಭ್ಯರ್ಥಿ ಎಸ್ ಎಸ್ ಡವನ್ ವಿರುದ್ಧ ಮಾಜಿ ಶಾಸಕ ಮಹದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಸ್ಪರ್ಧೆ ಒಡ್ಡಿದ್ದಾರೆ. ರಾಮದುರ್ಗ ತಾಲೂಕಿನಿಂದ ನಾಮಪತ್ರ ಸಲ್ಲಿಸಿದ್ದ ಶಾಸಕ ಹಾಗೂ ಮುಖ್ಯ ಮಂತ್ರಿಗಳ ದೆಹಲಿ ಪ್ರತಿನಿಧಿ ಅಶೋಕ ಪಟ್ಟಣ ಅವರು ಅಚ್ಚರಿ ಎಂಬಂತೆ  ಸೋಮವಾರದಂದು ನಾಮಪತ್ರ ಹಿಂಪಡೆದರು.
ಅಥಣಿ. ಈ ತಾಲೂಕಿನಲ್ಲಿ ಮಾಜಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ ಸವದಿ ಸ್ಪರ್ಧೆ ಮಾಡುತ್ತಿದ್ದು  ಇವರ ವಿರುದ್ಧ ಮಾಜಿ ಶಾಸಕ ಮಹೇಶ ಕುಮಟಳ್ಳಿ ಸ್ಪರ್ಧೆ ಒಡ್ಡಿದ್ದಾರೆ.
ನಿಪ್ಪಾಣಿ. ತೀವ್ರ ಕುತೂಹಲ ಕೆರಳಿಸಿರುವ ನಿಪ್ಪಾಣಿ ತಾಲೂಕಿನಿಂದ ಜಾರಕಿಹೊಳಿ ಬಣದ ಅಭ್ಯರ್ಥಿ ಆಗಿ  ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ವಿರುದ್ಧ ಉತ್ತಮ ಪಾಟೀಲ ಸ್ಪರ್ಧೆ ಒಡ್ಡಿದ್ದಾರೆ.
ರಾಯಭಾಗ. ಡಿಸಿಸಿ ಬ್ಯಾಂಕ ಮಾಜಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಜಾರಕಿಹೊಳಿ ಬಣದ ಅಭ್ಯರ್ಥಿ ಅಗಿದ್ದು ಇಲ್ಲಿ ಅವರಿಗೆ ಸ್ಪರ್ಧೆ ಇದೆ.
ಚನ್ನಮ್ಮನ ಕಿತ್ತೂರು. ಹೊಸದಾಗಿ ತಾಲೂಕಾ ರಚನೆ ಆಗಿರುವ ತಾಲೂಕು ಚನ್ನಮ್ಮನ ಕಿತ್ತೂರು ಕ್ಷೇತ್ರದಿಂದ ಬಾಲಚಂದ್ರ ಜಾರಕಿಹೊಳಿ ಬಣದಿಂದ ವಿಕ್ರಮ ಇನಾಮದಾರ ವಿರುದ್ಧ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಬೆಂಬಲಿಗರಾದ ಶಾಸಕ ಬಾಬಾಸಾಹೇಬ ಪಾಟೀಲ ಅವರ ಸಹೋದರ ನಾನಾಸಾಹೇಬ ಪಾಟೀಲ ಚುನಾವಣೆ ಕಣದಲ್ಲಿ ಇದ್ದು ಇಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
    ಈಗ ಒಟ್ಟು 16 ಸ್ಥಾನಗಳಲ್ಲಿ ಅವಿರೋಧವಾಗಿ 9  ಆಯ್ಕೆ ಅಗಿದ್ದು ಅದರಲ್ಲಿ 8 ಜನ  ಜಾರಕಿಹೊಳಿ ಬಣದ ಆಯ್ಕೆ ಅಗಿದ್ದು. ಜಾರಕಿಹೊಳಿ ಸಹೋದರರ ಬಣ ಡಿಸಿಸಿ ಬ್ಯಾಂಕ ಗದ್ದುಗೆ ಎರುವದು ಖಚಿತವಾದಂತೆ ಅನಿಸುತ್ತದೆ. ಉಳಿದ 7 ಸ್ಥಾನಗಳ ಫಲಿತಾಂಶಕ್ಕೆ ಅ. 19 ರವರೆಗೆ ಕಾದು ನೋಡಬೇಕು.
WhatsApp Group Join Now
Telegram Group Join Now
Share This Article