ಬೆಂಗಳೂರು,11: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಏಪ್ರಿಲ್ 26ರಂದು ಮುಗಿಯುತ್ತಿದ್ದಂತೆ ಅಶ್ಲೀಲ ವಿಡಿಯೋಗಳ ಕಳಂಕಿತ ವ್ಯಕ್ತಿ ವಿದೇಶಕ್ಕೆ ಪರಾರಿಯಾದರು.
ಅವರು ಹಾಸನ ಸಂಸದ ಪ್ರಜ್ವಲ್ ರೇವಣ್ಣ! ಅದಾದ ನಂತರ ಪ್ರಕರಣದ ಬೆನ್ನುಹತ್ತಿದ ಎಸ್ಐಟಿ ಪೊಲೀಸರಿಗೆ ಇದುವರೆಗೂ ಅವರನ್ನು ಪತ್ತೆ ಹಚ್ಚಿ, ಬಂಧಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ, ಜನತಾ ಪಕ್ಷದ ವತಿಯಿಂದ ಆರೋಪಿಯ ಬಗ್ಗೆ ಪೋಸ್ಟರ್ ಹಚ್ಚುವ/ಹಂಚುವ ಕೆಲಸ ನಡೆದಿದೆ.
ಪ್ರಜ್ವಲ್ ಹುಡುಕುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಪ್ರಕರಣದ ಎರಡನೆಯ ಆರೋಪಿ ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಪ್ರಕಟಿಸಿದೆ. ಬೆಂಗಳೂರಿನ ಶಿವಾನಂದ ಸರ್ಕಲ್ನಲ್ಲಿ
ಜನತಾ ಪಕ್ಷದ ನಾಗೇಶ್ ಎಂಬಾತ ಪೋಸ್ಟರ್ ಅಂಟಿಸಿ, ಮಾಧ್ಯಮಗಳ ಜೊತೆ ಮಾತನಾಡುತ್ತದ್ದಾಗಲೇ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.