ಗಣೇಶೋತ್ಸವದಲ್ಲಿ ಆದರ್ಶ ದಂಪತಿತೋತ್ಸವ ಸ್ಪರ್ಧೆ

Ravi Talawar
ಗಣೇಶೋತ್ಸವದಲ್ಲಿ ಆದರ್ಶ ದಂಪತಿತೋತ್ಸವ ಸ್ಪರ್ಧೆ
WhatsApp Group Join Now
Telegram Group Join Now
ಹಸಿರು ಕ್ರಾಂತಿ ವರದಿ; ಜಮಖಂಡಿ: ನಗರದ ಕುಂಚನೂರ ರಸ್ತೆಯಲ್ಲಿ ಬರತಕ್ಕ ಶ್ರೀ ದಾನಮ್ಮಾದೇವಿ ಗಜಾನನ ಉತ್ಸವ ಸಮೀತಿ ಶ್ರೀ ದಾನಮ್ಮಾದೇವಿ ಸಮುದಾಯ ಭವನದಲ್ಲಿ ಗಣೇಶೋತ್ಸವದ ನಿಮಿತ್ತ ಎರಡನೇಯ ದಿನದ ಕಾರ್ಯಕ್ರಮದಲ್ಲಿ ಆದರ್ಶ ದಂಪತಿತೋತ್ಸವ ಸ್ಪರ್ಧೆ ಜರುಗಿತು.
ಆದರ್ಶ ದಂಪತಿತೋತ್ಸವ ಸ್ಪರ್ಧೆಯಲ್ಲಿ ಅಂದಾಜು ೫೦ ವಯೋಮಾನದ ೨೨ ಹಿರಿಯ ಜೋಡಿಗಳು ಭಾಗವಹಿಸದ್ದರು. ಆದರ್ಶ ದಂಪತಿ ಸ್ಪರ್ಧೆಯಲ್ಲಿ ೩ ಸುತ್ತುಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆದರ್ಶ ದಂಪತಿತೋತ್ಸವ ಸ್ಪರ್ಧೆಯಲ್ಲಿ ಗುರಯ್ಯಾ ಸರಗಣಾಚಾರಿ ದಂಪತಿಗಳು ಪ್ರಥಮ ಸ್ಥಾನ ಪಡೆದರು. ಶ್ರೀಶೈಲ ವಾಣಿ ದಂಪತಿಗಳು ದ್ವಿತೀಯ ಮತ್ತು ಮಹೇಶ ಹಿರೇಮಠ ದಂಪತಿಗಳು ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಶ್ರೀ ದಾನಮ್ಮಾದೇವಿ ಗಜಾನನ ಉತ್ಸವ ಸಮೀತಿ ಅಧ್ಯಕ್ಷ ಸುನೀಲ ಮುರುಗೋಡ, ಉಪಾಧ್ಯಕ್ಷ ಮಹಾದೇವ ಅಳ್ಳಿಮಟ್ಟಿ ಬಹುಮಾನ ವಿತರಿಸಿದರು. ಪೂಜಾ ಗಾಂವಿ, ಪೂಜಾ ರಜಪೂತ, ದಿವ್ಯಾ ಮಹಾಲಿಂಗಪೂರ, ಲಕ್ಷಿö್ಮÃ ಮುರುಗೋಡ, ಯುಕ್ತಾ ಅಳ್ಳಿಮಟ್ಟಿ ಆದರ್ಶ ದಂಪತಿತೋತ್ಸವ ಸ್ಪರ್ಧೆಯಲ್ಲಿ ನಿರೂಪಕರಾಗಿ ಗಮನ ಸೆಳೆದರು.
ಆದರ್ಶ ದಂಪತಿತೋತ್ಸವ ಸ್ಪರ್ಧೆಯಲ್ಲಿ ವಿಕ್ಷಕರಾಗಿ ಆನಂದ ಗಣಾಚಾರಿ, ಮಲ್ಲು ಗಣಾಚಾರಿ, ಸುರೇಶ ಅಬ್ಬಿಗೇರಿ, ಗುರು ಮಹಾಲಿಂಗಪೂರ, ಮಲ್ಲಿಕಾರ್ಜುನ ಮಠದ, ಸುಭಾಸ ಪಾಟೀಲ, ರಾಜು ವಾಣಿ, ಶಿವನಿಂಗ ದೊಡ್ಡಮನಿ, ಗುರು ಮಠಪತಿ, ಅರವಿಂದ ಪವಾರ, ಅಶೋಕ ಗಾಂವಿ, ರಮೇಶ ಕನಕೇರಿ, ಲಚ್ಚಪ್ಪಾ ಕೆಂಪಲಿAಗಣ್ಣವರ, ರಾಜು ಗಾಂವಿ, ಕಾರ್ತಿಕ ಮಹಾಲಿಂಗಪೂರ, ಎನ್.ಎ.ಶಾನವಾಡ, ಮಹೇಶ ತೇಲಿ, ರಾಜಶೇಖರ ಹೊಸಟ್ಟಿ ಸಹಿತ ಹಲವರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article