ನೇಸರಗಿ- ಕುಡಿದ ಅಮಲಿನಲ್ಲಿ ಪತ್ನಿಯನ್ನೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಮೀಪದ ಹಣಬರಹಟ್ಟಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಫಕೀರವ್ವ ಕಾಕಿ(೩೬) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಯಲ್ಲಪ್ಪ ಕಾಲಿ ಎಂಬಾತ ಪತ್ನಿಯನ್ನು ಕೊಂದ ವ್ಯಕ್ತಿಯಾಗಿದ್ದಾನೆ. ಕಂಠಪೂರ್ತಿ ಕುಡಿದು ಬಂದಿದ್ದ ಪತಿ, ಪತ್ನಿಯು ಮಲಗಿದ್ದಾಗ ಸಲಾಕೆಯಿಂದ ತಲೆಗೆ ಹೊಡೆದು ಆಕೆಯನ್ನು ಸಾಯಿಸಿದ್ದಾನೆ. ಮಕ್ಕಳ ಎದುರಲ್ಲೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ಪರಾರಿಯಾಗಿದ್ದಾನೆ. ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಘಟನಾ ಸ್ಥಳಕ್ಕೆ ನೇಸರಗಿ ಪೋಲಿಸ್ ಠಾಣೆ ಸಿಪಿಐ ರಾಘವೇಂದ್ರ ಹವಾಲ್ದಾರ, ಪಿಎಸ್‌ಐ ಸಿದ್ದಪ್ಪ ಯಡಳ್ಳಿ, ಮುಖ್ಯಪೇದೆ ಎನ್ ವಿ ಪರಡ್ಡಿ ಭೇಟಿ ತನಿಖೆ ನಡೆಸಿದ್ದಾರೆ. ಪರಾರಿಯಾದ ಆರೋಪಿಯನ್ನು ಪತ್ತೆ ಮಾಡಲು ೨ ತಂಡ ರಚನೆ ಮಾಡಲಾಗಿದೆ. ನೇಸರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.