ತನ್ನ ಬಾಸ್ ಜತೆ ಮಲಗಲು ಎರಡನೇ ಪತ್ನಿ ಒಪ್ಪದ ಕಾರಣ ವ್ಯಕ್ತಿಯೊಬ್ಬ ಆಕೆಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಡಿಸೆಂಬರ್ 19 ರಂದು 45 ವರ್ಷದ ವ್ಯಕ್ತಿಯೊಬ್ಬ ತನ್ನ 28 ವರ್ಷದ ಹೆಂಡತಿಯನ್ನು ಪಾರ್ಟಿಯಲ್ಲಿ ತನ್ನ ಬಾಸ್ ಜೊತೆ ಇರಲು ಹೇಳಿದ್ದ.
ಸಂತ್ರಸ್ತೆ ಈ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದರು. ಪತಿ ಹಣಕ್ಕಾಗಿ ಕಿರುಕುಳ ನೀಡಲು ಪ್ರಾರಂಭಿಸುವ ಮೊದಲು ಹೆಂಡತಿ ಮೊದಲ ಕೆಲವು ತಿಂಗಳು ಸಂತೋಷದ ಜೀವನ ಸಾಗಿಸುತ್ತಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡಲು 15 ಲಕ್ಷ ರೂಪಾಯಿ ಬೇಕು ಎಂದು ಪತಿ ಹೇಳಿದ್ದು, ಆ ಮೊತ್ತವನ್ನು ಪೋಷಕರಿಂದ ಪಡೆಯಲು ಎರಡನೇ ಪತ್ನಿಗೆ ಪೀಡಿಸಿದ್ದಾನೆ.
ತನ್ನ ಬಾಸ್ ಜೊತೆ ಮಲಗಲು ನಿರಾಕರಿಸಿದ ನಂತರ ಪತಿ ತನ್ನ ಎರಡನೇ ಹೆಂಡತಿಗೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ತಕ್ಷಣ ತಲಾಖ್ ನೀಡಿದ ಬಳಿಕ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ.ಡಿಸೆಂಬರ್ 19 ರಂದು ಪತಿ ವಿರುದ್ಧ ಪ್ರಕರಣ ದಾಖಲಿಸಲು ಪತ್ನಿ ಸಂಭಾಜಿ ನಗರ ಠಾಣೆಗೆ ತೆರಳಿದ್ದರು. ಮರುದಿನ ಪ್ರಕರಣವನ್ನು ಕಲ್ಯಾಣ್ನ ಬಜಾರ್ಪೇತ್ ಠಾಣೆಗೆ ವರ್ಗಾಯಿಸಲಾಯಿತು.