ಅಥಣಿ : ತಾಂತ್ರಿಕ ಮತ್ತು ನಿರ್ಲಕ್ಷದ ಕಾರಣಕ್ಕೆ ಹಿಪ್ಪರಗಿ ಆಣೆಕಟ್ಟೆಯ ಗೇಟ್ ನಂಬರ ೨೨ ಮುರಿದು ಹೋಗಿದ್ದರಿಂದ ಅಪಾರ ಪ್ರಮಾಣದಲ್ಲಿ ಕೃಷ್ಣಾ ನದಿಯ ಹಿನ್ನೀರು ಹರಿದು ಹೋಗದೆ. ಅಥಣಿ ಹಾಗೂ ಜಮಖಂಡಿ ತಾಲೂಕಿನ ಮಧ್ಯದಲ್ಲಿ ಕೃಷ್ಣಾ ನದಿಗೆ ಇರುವ ೬ ಟಿಎಂಸಿ ಸಾರ್ಮಥ್ಯದ ಹಿಪ್ಪರಗಿ ಆಣೆಕಟ್ಟು ಗೇಟ್‌ಗೆ ಹಾನಿಯಾಗಿದೆ.
ಕೃಷ್ಣಾ ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚುವರಿಯಾಗಿ ಇನ್ನೊಂದು ಗೇಟ್ ಹಾಕು ಕಾರ್ಯ ತಜ್ಞರಿಂದ ನಡೆಯುತ್ತಿದೆ. ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಉಸ್ತುವರಿ ಸಚಿವ ಆರ್ ಬಿ ತಿಮ್ಮಾಪೂರ, ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಅಥಣಿ ಹಾಗೂ ಬಾಗಲಕೋಟಿ ಜಿಲ್ಲೆಯ ನೀರಾವರಿ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಘಟನೆ ವರದಿ ಪಡೆದುಕೊಂಡು ಕ್ರಮಕ್ಕೆ ಸೂಚಿಸಿದ್ದಾರೆ.
ಬಾಕ್ಷ: ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಿಪ್ಪರಗಿ ಆಣೆಕಟ್ಟು ೬ ಟಿಎಂಸಿ ಸಾರ್ಮಥ್ಯ ಹೊಂದಿದ್ದು, ಗೇಟ್ ಕಟ್ ಆಗಿದ್ದರಿಂದ ೦.೦೧ ಟಿಎಂಸಿ ಅಷ್ಟು ನೀರು ಮುಂದೆ ಹರಿದು ಹೋಗಿದೆ. ನಾಳೆ ಬೆಳಗಿನ ವರಗೆ ಹೊಸ ಗೇಟ್ ಅಳವಡಿಸಿ ನೀರು ಸೂರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವದು. ತಾಂತ್ರಿಕ ಸಮಸ್ಯೆಯಿಂದಾಗಿ ಗೇಟ್ ಕಟ್ ಆಗಿರುವ ಶಂಕೆ ಇದ್ದು ತನಿಖೆ ನಡೆಸಲಾಗುತ್ತಿದೆ
ಪ್ರವೀಣ ಹುಣಸಿಕಟ್ಟಿ, ನೀರಾವರಿ ಇಲಾಖೆ ಅಭಿಯಂತರರು. ಅಥಣಿ


