ಮುಸ್ಲಿಮರ ಪವಿತ್ರ ಹಜ್​ ಯಾತ್ರೆ ಜೂನ್​ 14ರಿಂದ ಆರಂಭ

Ravi Talawar
ಮುಸ್ಲಿಮರ ಪವಿತ್ರ ಹಜ್​ ಯಾತ್ರೆ ಜೂನ್​ 14ರಿಂದ ಆರಂಭ
WhatsApp Group Join Now
Telegram Group Join Now

ಸೌದಿ ಅರೇಬಿಯಾ,07: ಮುಸ್ಲಿಮರ ಪವಿತ್ರ ಹಜ್ ಯಾತ್ರೆ  ಇದೇ ಜೂನ್ 14 ರಿಂದ ಪ್ರಾರಂಭವಾಗಲಿದೆ ಎಂದು ಸೌದಿ ಅರೇಬಿಯಾ ಘೋಷಣೆ ಮಾಡಿದೆ. ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಎಂದರೆ ಅದು ಮೆಕ್ಕಾ, ಸೌದಿ ಅರೇಬಿಯಾದ ಈ ನಗರ ಮೆಕ್ಕಾಗೆ ಹಜ್ ಯಾತ್ರೆ ಭಾಗವಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ವರ್ಷ ಭೇಟಿ ನೀಡುತ್ತಾರೆ.

ಕೆಂದರೆ ವಿಶ್ವದ ಅತಿದೊಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಮೆಕ್ಕಾವೂ ಒಂದು. ಎಲ್ಲ ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು ಎಂಬ ಮಹದಾಸೆ ಹೊಂದಿರುತ್ತಾರೆ.

ಜೂನ್ 14 ರಂದು ಹಜ್ ಯಾತ್ರೆ ಪ್ರಾರಂಭವಾಗುತ್ತದೆ, ನಂತರ ಕ್ರಮವಾಗಿ ಜೂನ್ 15 ಮತ್ತು ಜೂನ್ 16 ರಂದು ಅರಾಫತ್ ದಿನ ಮತ್ತು ಈದ್ ಅಲ್ ಅಧಾ ಆಚರಣೆಗಳು ನಡೆಯಲಿವೆ.

ಯಾತ್ರಾರ್ಥಿಗಳಿಗೆ ಇದು ಅಧ್ಯಾತ್ಮಿಕ ಅನುಭವವಾಗಿದ್ದು, ಇಲ್ಲಿಗೆ ಭೇಟಿ ನೀಡಿದರೆ ಪಾಪಗಳು ಕಳೆದು ಹೋಗಲಿವೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ.

1920 ರ ದಶಕದಲ್ಲಿ ಮೆಕ್ಕಾವನ್ನು ಸೌದಿ ರಾಜಮನೆತನ ತಮ್ಮ ವಶಕ್ಕೆ ತೆಗೆದುಕೊಂಡಿತು. ಆ ಬಳಿಕ ತೀರ್ಥಯಾತ್ರೆ ಆಯೋಜಿಸುವುದು ಹೆಮ್ಮೆ ಎಂದು ಅದು ಪರಿಗಣಿಸಿದೆ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದೆ. ಯಾತ್ರಾರ್ಥಿಗಳ ಯೋಗಕ್ಷೇಮಕ್ಕಾಗಿ ಸೌದಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ.

ಆದರೂ 2015 ರಲ್ಲಿ ಇಲ್ಲಿ ಉಂಟಾದ ಕಾಲ್ತುಳಿತಕ್ಕೆ ಸುಮಾರು 2,400 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಹಜ್ ಯಾತ್ರೆ ಮಹತ್ವ ಮತ್ತು ಇತಿಹಾಸ

WhatsApp Group Join Now
Telegram Group Join Now
Share This Article