ಹಸಿರು ಕ್ರಾಂತಿ
ಚನ್ನಮ್ಮನ ಕಿತ್ತೂರು: ಪಟ್ಟಣದ ಐತಿಹಾಸಿಕ ಗಡಾದ ಮರಡಿಯ ಮೇಲೆ ಇರುವ ಕಾವಲು ಗೋಪುರ ಎಡಬಿಡದೆ ಸುರಿದ ಭಾರಿ ಮಳೆಗೆ ಶುಕ್ರವಾರ ಕುಸಿದು ಬಿದ್ದಿದೆ.
ಬಿಜೆಪಿ ಸರ್ಕಾರದ ಆಡಳಿತಾವದಿಯಲ್ಲಿ ಗಡಾದ ಮರಡಿಯನ್ನು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ರೂ 1.80 ಲಕ್ಷ ಅನುದಾನದಲ್ಲಿ ಇತರೆ ಅಭಿವೃದ್ದಿ ಸೇರಿದಂತೆ ಕಾವಲು ಗೋಪುರ ಮರು ನಿರ್ಮಾಣ ಮಾಡಲಾಗಿತ್ತು.
ಎರಡು ವಾರಗಳಿಂದ ಸುರಿದ ಮಳೆಗೆ ವಾಚ್ ಟವರ್ ಕುಸಿದು ಬಿದ್ದಿದ್ದು ಕಾಮಗಾರಿಯ ಕುರಿತು ಪಟ್ಟಣದ ನಾಗರಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಸ್ವಾತಂತ್ರ ಪೂರ್ವದಲ್ಲಿ ಈ ಸ್ಥಳದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಲಾಗುತ್ತಿತ್ತು. ಪ್ರಸ್ತುತ ಇಲ್ಲಿ ಬೃಹತ್ ಗಾತ್ರದ ರಾಷ್ಟ್ರಧ್ವಜ ಹಾರಿಸಲಾಗುತ್ತದೆ. ಸನಿಹದಲ್ಲಿ
ಸ್ವಾತಂತ್ರೋತ್ಸವವಿದ್ದು, ಕೂಡಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತು
ದುರಸ್ತಿಗೊಳಿಸುತ್ತಾರೋ ಇಲ್ಲೋ ಎಂದು ಕಾಯಿದು ನೋಡಬೇಕು.