ಬೆಂಗಳೂರು, ಏಪ್ರಿಲ್ 15: ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಸೋಮವಾರ ಬೆಳಗ್ಗಿನಿಂದಲೇ ಆರಂಭವಾಗಿದೆ. ಇಂದಿನಿಂದ ಏಪ್ರಿಲ್ 23 ರ ವರೆಗೆ ಬೆಂಗಳೂರು ಕರಗ ಮಹೋತ್ಸವ ನಡೆಯಲಿದ್ದು, ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. 13 ಬಾರಿ ಕರಗ ಹೊತ್ತಿರುವ ಪೂಜಾರಿ ಎ. ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ.
ರಾತ್ರಿ 10ಕ್ಕೆ ರಥೋತ್ಸವ ಧ್ವಜಾರೋಹಣ, ಏಪ್ರಿಲ್ 16 ರಿಂದ 19 ಪ್ರತಿ ದಿನ ವಿಶೇಷ ಪೂಜೆ ಮತ್ತು ಮಂಗಳಾರತಿ, ಏಪ್ರಿಲ್ 21ಕ್ಕೆ ಹಸಿ ಕರಗ ಆಯೋಜನೆ, ಏಪ್ರಿಲ್ 23 ರಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯ ರಥೋತ್ಸವ, ಏಪ್ರಿಲ್ 24ರಂದು ದೇವಸ್ಥಾನದಲ್ಲಿ ಗಾವು ಪೂಜೆ, 25ಕ್ಕೆ ಕೊನೆಯ ದಿನದ ವಸಂತೋತ್ಸವ ಧ್ವಜಾರೋಹಣ, ಈ ವರ್ಷ ಸುಮಾರು 3000 ವೀರ ಕುಮಾರರು ಕರಗದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಂಪಂಗಿ ಕೆರೆ ಅಂಗಳದಲ್ಲಿ ಏಪ್ರಿಲ್ 21ರಂದು ಹಸಿ ಕರಗ ನಡೆಯಲಿದೆ.
ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ ಕಳೆದ ಕೆಲವು ವರ್ಷಗಳಿಂದ ಕರಗ ಸಾಧಾರಣವಾಗಿ ಆಚರಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ಉತ್ಸವ ಜರಗುವ ನಿರೀಕ್ಷೆ ಇದೆ.