ಬೆಳಗಾವಿ:ಗ್ರಾಮದ ಮೂಲಭೂತ ಸೌಕರ್ಯ, ದೇವಸ್ಥಾನ, ರಸ್ತೆ ಅಭಿವೃದ್ಧಿಗೆ ಇಲ್ಲಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕಳೆದ 20 ವರ್ಷಗಳಿಂದ ನಿರಂತರವಾಗಿ ಕಾರ್ಯ ಮಾಡುತ್ತಿದ್ದು ಮುಂದಿನ ದಿನಮಾನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಉತ್ತು ನೀಡುಲಿದ್ದು ಶಾಲಾ ಅಭಿವೃದ್ಧಿಗೆ ಅನುಧಾನ ನೀಡುತ್ತಿದ್ದು ಅದಕ್ಕಾಗಿ ಉನ್ನತ ಗುಣಮಟ್ಟದ ಶಿಕ್ಷಣ ಕಲಿಕೆಯಿಂದ ದೇಶ ಮುನ್ನೆಡೆಯದರ ಜೊತೆಗೆ ತಾವು ಉನ್ನತಿ ಹೊಂದಿ ಹೆಸರುವಾಸಿ ಆಗಲು ಶಿಕ್ಷಣವನ್ನು ಪ್ರೀತಿಯಿಂದ, ಛಲದಿಂದ ಕಲಿತು ಊರಿನ, ಜಿಲ್ಲೆಯ, ದೇಶದ ಕೀರ್ತಿ ಹೆಚ್ಚಿಸಬೇಕೆಂದು ಕೆ ಪಿ ಸಿ ಸಿ ಸದಸ್ಯ ಮಲಗೌಡ ಪಾಟೀಲ ಹೇಳಿದರು.
ಅವರು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಬೆಳಗಾವಿ ತಾಲೂಕಿನ ದೇವಗಿರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಪರೀಕ್ಷೆ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಿನ್ನಲೆ ಫಲ ಪುಷ್ಪ ಶಾಲು ಹೊದಿಸಿ ಸತ್ಕಾರಿಸಲಾಯಿತು. ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮದ ಮುಖಂಡರು, ಪಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.