ಚನ್ನಮ್ಮನ ಕಿತ್ತೂರು: ತಾವು ಕಲಿತ ಶಾಲೆಗಳಿಗೆ ಹಾಗೂ ಶಿಕ್ಷಕರಿಗೆ ಗುರುವಂದನೆ ಮೂಲಕ ಗೌರವಿಸುವ ಕಾರ್ಯ ಶ್ಲಾಘನೀಯ. ಗುರು-ಶಿಷ್ಯರ ಪರಂಪರೆ ಮುಂದುವರೆಯಲಿ ಎಂದು ಶ್ರೀ ತವನಪ್ಪ ಅವಲಕ್ಕಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಶೈಲ ಅಂಗಡಿ ಹೇಳಿದರು.
ದೇವಗಾಂವ ಗ್ರಾಮದ ಜದ್ಗುರು ಶ್ರೀ ಶಿವಾನಂದ ವಿದ್ಯಾವರ್ಧಕ ಸಂಘದ ಶ್ರೀ ತವನಪ್ಪ ಅವಲಕ್ಕಿ ಪ್ರೌಢಶಾಲಾ ಆವರಣದಲ್ಲಿ ನಡೆದ ೧೯೯೯-೨೦೦೦ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ. ವಿದ್ಯಾರ್ಥಿಗಳೇ ನಮ್ಮ ದೇಶದ ಆಸ್ತಿ ಅಂದು ಅವರಿಗೆ ಕೊಟ್ಟ ವಿದ್ಯೆ ಇಂದು ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡುತ್ತಿರುವುದು ಗುರುಬಳಗಕ್ಕೆ ಸಂತಸವಾಗಿದೆ. ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವುದನ್ನು ನೋಡುವುದೇ ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ದೊಡ್ಡ ಕಾಣಿಕೆ, ಈ ಹಿಂದೆ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದ ಶಿಕ್ಷಕರ ಹಾಗೂ ಆಡಳಿತ ಮಂಡಳಿ ಮಾರ್ಗದರ್ಶನದಲ್ಲಿ ನಮ್ಮ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದರಲ್ಲಿ ಮುಂದಾಗಿದ್ದಾರೆ ಎಂದರು.
ನಿವೃತ್ತ ಶಿಕ್ಷಕರಾದ ವಾಯ್.ಜಿ. ದಿಬ್ಬದಮನಿ, ಎಂ.ಸಿ. ಹಿರೇಮಠ, ಪಿ.ಜಿ. ಜೋಶಿ, ನೆಹರು ದುಗ್ಗಾಣಿ, ಕೆ.ಎಸ್. ಕೋರಿಕಂಠಿಮಠ, ಅವರು ಮಾತನಾಡಿದರು.
ಹಳೆಯ ವಿದ್ಯಾರ್ಥಿ ಪ್ರೋ. ಬಾಬು ಬೆಣ್ಣಿ ಮಾತನಾಡಿ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟ ಎಲ್ಲ ಗುರುವೃಂದಕ್ಕೆ ಸ್ನೇಹ ಬಳಗದ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಶಿಕ್ಷಕಿ ದೀಪಾ ಅಗಸಿಮನಿ, ಬಾಬು ಕುಂಬಾರ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಿವೃತ್ತ ದೈಹಿಕ ಶಿಕ್ಷಕ ಕೆ.ಎಚ್. ಮಾಳಕ, ಡ್ರಾಯಿಂಗ್ ಶಿಕ್ಷಕ ಗಂಗಾವತಿ, ಕುಮಾರ ಅರಳೀಮರದ, ಬಸಪ್ಪ ಹರಿಜನ, ಎಂ.ಬಿ. ಗಿರಿಯಾಲ್, ರವಿ ಲದ್ದಿಮಠ, ಉಮೇಶ ವಾಲಿಕಾರ, ಬಾಬು ಕುಂಬಾರ, ರವಿ ಹೆಗಡೆನ್ನವರ, ಗೌರವ್ವ ಜುಳಬುಳಿ, ಗೌರಮ್ಮಾ ಗಾಣಗಿ, ಮಹಾದೇವಿ ಶಿಂಧೋಳ್ಳಿ, ಮಂಜುಳಾ ಗುಳೇದಕೊಪ್ಪ, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಎಲ್ಲ ಶಿಕ್ಷಕ ವೃಂದ ಹಾಗೂ ೧೯೯೯-೨೦೦೦ನೇ ಸಾಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಇದ್ದರು.
ಸೈನಿಕ ಸುಕುಮಾರ ಶಿವಣ್ಣವರ ನಿರೂಪಿಸಿದರು, ಶಿಕ್ಷಕಿ ಶೋಭಾ ಮರಡಿ ಸ್ವಾಗತಿಸಿದರು.