ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರಾಭಿಮಾನದ ಕರೆಯ ಮೇರೆಗೆ ದೇಶಾದ್ಯಂತ, ಆಗಸ್ಟ 13 ರಿಂದ ಆರಂಭವಾಗಿರುವ “ಹರ್ ಘರ್ ತಿರಂಗಾ” ಅಭಿಯಾನದ ಅಂಗವಾಗಿ, ಧಾರವಾಡದ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಹಮ್ಮಿಕೊಂಡಿದ್ದ “ಬೃಹತ್ ಬೈಕ್ ರ್ಯಾಲಿ” ಯಲ್ಲಿ ಅತ್ಯುತ್ಸಾಹದಿಂದ ನೂರಾರು ಮಂದಿ ಪಾಲ್ಗೊಂಡರು.
ಬೃಹತ್ ಬೈಕ್ ರ್ಯಾಲಿಗೆ ಧಾರವಾಡದ ಕೊಪ್ಪದಕೇರಿ ಶಿವಾಲಯದಿಂದ ಮಾಜಿ ಶಾಸಕರಾದ ಸೀಮಾ ಮಸೂತಿ, ಮಾಜಿಮಹಾಪೌರರು ಹಾಗೂ ಸಭಾನಾಯಕರು ಈರೇಶ ಅಂಚಟಗೇರಿ ಗಣ್ಯಮಾನ್ಯರ ನೇತ್ರತ್ವದಲ್ಲಿ ಚಾಲನೆ ನೀಡಿದರು.
ನಂತರ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಸಂಚರಿಸಿ ಬಿಜೆಪಿ ಪಕ್ಷದ ಕಚೇರಿ ಎದುರು ಸಂಪನ್ನಗೊಂಡಿತು. ಇದೆ ಸಂದರ್ಭದಲ್ಲಿ ಆಗಸ್ಟ್ 15 ರ ವರೆಗೆ ಪ್ರತಿ ಮನೆಯಲ್ಲೂ ಎಲ್ಲರೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಮಹತ್ವದ ಅಭಿಯಾನವನ್ನು ಯಶಸ್ವಿಗೊಳಿಸಿ ಭವ್ಯ ಭಾರತದ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿಶಾಸಕರು ಸೀಮಾ ಮಸೂತಿ ಮಾಜಿಮಹಾಪೌರರು ಸಭಾನಾಯಕರು ಈರೇಶ ಅಂಚಟಗೇರಿ ಸವಿತಾ ಅಮರಶೆಟ್ಟಿ ಬಸವರಾಜ ಗರಗ ಶಂಕರ ಶೇಳಕೆ ಪ್ರಣಿತ ರಾಮನಗೌಡರ ಪ್ರೀತಮ ಅರಿಕೆರಿ ಶಕ್ತಿ ಹಿರೇಮಠ ರಾಜೇಶ್ವರಿ ಅಳಗವಾಡಿ ಸಂಕಲ್ಪ ಕಲ್ಯಾಣಶಟ್ಟಿ ಕಾರ್ತಕ ಸುರಂಜನ ಬಸು ಬಾಳಗಿ ಮಂಜು ನಡಟ್ಟಿ ಮಂಜು ಹೆಬಸುರ ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು