ಅಥಣಿ,ಅ.೦೨: ದುರ್ಗಾ ಪೂಜೆ ಹಿಂದೂ ಧರ್ಮದ ಪ್ರಮುಖ ಹಾಗೂ ಭವ್ಯ ಹಬ್ಬಗಳಲ್ಲಿ ಒಂದಾಗಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ, ತ್ರಿಪುರಾ ಮತ್ತು ಬಿಹಾರ ರಾಜ್ಯಗಳಲ್ಲಿ ಈ ಹಬ್ಬವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಸಹ ಇತ್ತೀಚಿನ ದಿನಗಳಲ್ಲಿ ದುರ್ಗಾ ಪೂಜೆಗೆ ಮಹತ್ವ ಹೆಚ್ಚಾಗಿದೆ.ಈ ಹಬ್ಬವನ್ನು ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ನವರಾತ್ರಿಯ ಶುಭಾರಂಭದಿಂದ ದಶಮಿಯ ವರೆಗೆ ನಡೆಯುವ ಈ ಹಬ್ಬದಲ್ಲಿ ದುರ್ಗಾದೇವಿಯ ಶಕ್ತಿಯನ್ನು ಸ್ಮರಿಸಲಾಗುತ್ತದೆ.
ಮಹಿಷಾಸುರನನ್ನು ಸಂಹರಿಸಿದ ದುರ್ಗೆಯ ವಿಜಯವನ್ನು ಈ ಹಬ್ಬದ ಮೂಲಕ ಆಚರಿಸಲಾಗುತ್ತದೆ ಎಂದು ಶಿಲ್ಪಾ ತೊದಲಬಾಗಿ ಹೇಳಿದರು
ಅಥಣಿ ಪಟ್ಟಣದ ಗವಸಿದ್ದನ ಮಡ್ಡಿ ಬಡಾವಣೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ದುರ್ಗಾ ದೇವಿಯ ೯ ದಿನಗಳ ಮಹಾ ಆರಾಧನೆ ಸಮಾರಂಭ ನಡೆಯುತ್ತಿದೆ. ಕಳೆದ ಹತ್ತು ವರ್ಷಗಳಿಂದ ಅಣ್ಣಪ್ಪ ಭಜಂತ್ರಿಯವರ ನೇತೃತ್ವದಲ್ಲಿ ನಡೆಯುತ್ತಿರುವ ದುರ್ಗಾ ಮಹಾರಾಜನೆಯ, ಭಕ್ತಿ ಭಾವ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನಗಳನ್ನು ನೀಡುವುದರ ಜೊತೆಗೆ ಬಡವರು ದೀನ ದಲಿತರಿಗೆ ಅನ್ನದಾಸೋಹ ಮಾಡುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.ಈ ವೇಳೆ ಮಾತನಾಡಿದ ಮುಖಂಡ ಅಣ್ಣಪ್ಪ ಭಜಂತ್ರಿ ಹಬ್ಬದ ಸಂದರ್ಭದಲ್ಲಿ ಸಮುದಾಯದವರು ಬೃಹತ್ ಮಂಟಪಗಳನ್ನು ನಿರ್ಮಿಸಿ, ಅಲ್ಲಿ ದುರ್ಗಾದೇವಿಯ ವಿಗ್ರಹವನ್ನು ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ. ಪುರಾಣಪ್ರಕಾರ ದುರ್ಗಾ ದೇವಿ ಶಕ್ತಿ, ಧೈರ್ಯ ಮತ್ತು ಧರ್ಮದ ಪ್ರತೀಕ. ಆದ್ದರಿಂದ ದುರ್ಗಾ ಪೂಜೆಯು ಸತ್ಯದ ಜಯ ಮತ್ತು ಅಧರ್ಮದ ನಾಶವನ್ನು ಪ್ರತಿಪಾದಿಸುತ್ತದೆ.
ದುರ್ಗಾ ಪೂಜೆಯ ವೇಳೆ ಕಲಾತ್ಮಕ ಪ್ರದರ್ಶನಗಳು, ಸಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ-ನೃತ್ಯಗಳು ಹಾಗೂ ಜನಪದ ಕಲಾ ರೂಪಗಳಿಗೆ ವಿಶೇಷ ಸ್ಥಾನ ನೀಡಲಾಗುತ್ತದೆ. ಜನರು ಹೊಸ ವಸ್ತ್ರಗಳನ್ನು ಧರಿಸಿ, ಹಬ್ಬದ ಸಡಗರದಲ್ಲಿ ತೊಡಗುತ್ತಾರೆ.
ಸಮಾಜದಲ್ಲಿ ಒಗ್ಗಟ್ಟು, ಸಹಕಾರ ಮತ್ತು ಭಕ್ತಿಭಾವವನ್ನು ವೃದ್ಧಿಸುವುದು ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ ಎಂದು ಅಣ್ಣಪ್ಪ ಭಜಂತ್ರಿ ಹೇಳಿದರು
ದುರ್ಗಾ ಪೂಜೆ ಭಕ್ತಿಯ, ಶಕ್ತಿಯ ಮತ್ತು ಸಾಂಸ್ಕೃತಿಕ ಐಕ್ಯತೆಯ ಹಬ್ಬವಾಗಿದೆ. ಇದು ಸಮಾಜಕ್ಕೆ ಧರ್ಮ, ನೀತಿ ಮತ್ತು ಒಗ್ಗಟ್ಟಿನ ಸಂದೇಶವನ್ನು ನೀಡುತ್ತದೆ.
ಈ ವೇಳೆ ಹನುಮಂತ ಭಜಂತ್ರಿ ರಾಜು ಭಜಂತ್ರಿ, ಖಂಡು ಭಜಂತ್ರಿ, ಚಂದ್ರಕಾಂತ್ ಭಜಂತ್ರಿ, ಸುರೇಶ್ ಕೈಕಾಡಿ, ಕಲ್ಲಪ್ಪ ಭಜಂತ್ರಿ, ಕಲ್ಲಪ್ಪ ಬಜಂತ್ರಿ, ಸಮಾಜದ ಹಲವು ಮುಖಂಡರು ಹಿರಿಯರು ಹಾಗೂ ಸಮುದಾಯದ ಮಹಿಳಾ ಮಂಡಳದ ಸದಸ್ಯರು ಸೇರಿ ಹಲವು ಉಪಸ್ಥಿತರಿದ್ದರು


