ದಕ್ಷಿಣಾಭಿಮುಖ ಹನುಮಾನ ಜಯಂತಿಯ ಅದ್ದೂರಿ ಉತ್ಸವ

MK HasiruKranti
ದಕ್ಷಿಣಾಭಿಮುಖ ಹನುಮಾನ ಜಯಂತಿಯ ಅದ್ದೂರಿ ಉತ್ಸವ
WhatsApp Group Join Now
Telegram Group Join Now
ಬೆಳಗಾವಿ : ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದಲ್ಲಿರು ದಕ್ಷಿಣಾಭಿಮುಖ ಹನುಮಾನ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಚೈತ್ರ ಮಾಸದ ಹುಣ್ಣಿಮೆ ದಿನದಂದು ಹನುಮಂತನ ಜನ್ಮ ದಿನವನ್ನು ಆಚರಿಸಲಾಗುವುದು. ಈ ದಿನ ನಿಮ್ಮ ರಾಶಿಗೆ ಅನುಸಾರವಾಗಿ ಕೆಲವೇ ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳುವುದು ಎಂದು ಹೇಳಲಾಗುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಪೂಜೆ, ಬುಧವಾರ ಸಂಜೆಯಿಂದ ಹನುಮಾನ ಜಯಂತಿ ಭಕ್ತಿಯಲ್ಲಿ ಮೂಳಗಿದ ಭಕ್ತ ಸಾಗರ, ಅರ್ಚನೆ, ಸಂಜೆ ವೇಳೆ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಗುರುವಾರ ಬೆಳಿಗ್ಗೆ ಸೂರ್ಯೋದಯಕ್ಕೆ ಪೂರ್ವವಾಗಿಯೇ ಜನ್ಮ ತೊಟ್ಟಿಲು ನಾಮಕರಣ, ಅಭಿಷೇಕ, ಹಾಗೂ ವಿಶೇಷ ಪೂಜೆಯನ್ನು ಅರ್ಚಕರುಗಳಾದ ಸುಖದೇವ ಫ. ಬಾಳೇಕುಂದ್ರಿ, ಸುರೇಶ ಯ. ಹತ್ತರವಾಡ ಅವರು ವಿಶೇಷ ಪೂಜೆಗಳನ್ನು ನೆರವೇರಿಸಿದರು.
ಬಳಿಕ ಮಧ್ಯಾಹ್ನದ ವೇಳೆ ಸಾರ್ವಜನಿಕರಿಗೆ ಮಹಾ ಪ್ರಸಾದದ ವ್ಯವಸ್ಥೆಗೆ ಪಂತ ಬಾಳೇಕಂದ್ರಿ ಗ್ರಾಮದ ಹಿರಿಯರು ಹಾಗೂ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಬಿ.ಎನ್‌ ಪಾಟೀಲ ಸೇರಿದಂತೆ  ಸುತ್ತಮುತ್ತಲಿನ ಭಕ್ತಾಧಿಗಳು ಸೇರಿ ಮಹಾ ಪ್ರಸಾದಕ್ಕೆ ಚಾಲನೆ ನೀಡಿದರು.
ಈ ಹನುಮಾನ ದೇವಸ್ಥಾನವು  ಮೂರು ಗ್ರಾಮಗಳ ಸೀಮೆಯ ಹದ್ದಿನಲ್ಲಿದ್ದು ಬೆಳಗಾವಿ  ಗ್ರಾಮೀಣ ಭಾಗದಲ್ಲಿಯೇ ಫೇಮಸ್ ಹನುಮಾನ ದೇವಸ್ಥಾನವೆಂದು ಕರೆಯಲಾಗುತ್ತದೆ.  ಪ್ರತಿ ಶನಿವಾರ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.
ಭಕ್ತಿಯಿಂದ ಬೇಡಿಕೊಂಡವರಿಗೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಪಂತ ಬಾಳೇಕುಂದ್ರಿ ದಕ್ಷಿಣಾಭಿಮುಖ ಹನುಮಾನನ್ನು ನಂಬಿದ ಸಾವಿರಾರು ಭಕ್ತಾಧಿಗಳು ಹೇಳಿಕೊಂಡಿದ್ದಾರೆ.
WhatsApp Group Join Now
Telegram Group Join Now
Share This Article