ಗದಗ : ಅಪರಿಚಿತ ವ್ಯಕ್ತಿಗಳು ನೀಡಿದ ದೂರಿನ ಮೇಲೆ ಕೂಡಲಸಂಗಮದ ಪಂಚಮಸಾಲಿ ಪೀಠದ ಪೂಜ್ಯಶ್ರೀ ಜಯಮೃತ್ಯುಂಜಯ ಶ್ರೀಗಳನ್ನು ತೋಜೋವದೆ ಮಾಡಲು ಸರಕಾರ ಪ್ರಯತ್ನ ಮಾಡುತ್ತಿದೆ ಎಂದು ಪಂಚಮಸಾಲಿ ಯುವ ಘಟಕದ ಜಿಲ್ಲಾಧ್ಯಕ್ಷ ಅಯ್ಯಪ್ಪ ಅಂಗಡಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಹಿಳಾ ಆಯೋಗವು ಅಪರಿಚಿತ ಮಹಿಳೆ ದೂರು ನೀಡಿದ ತಕ್ಷಣ ವಿಚಾರಣೆ ಮಾಡದೆ ಶ್ರೀಗಳ ವಿರುದ್ದ ಕ್ರಮ ಕೈಗೊಂಡಿರುವುದು ಖಂಡನೀಯವಾಗಿದೆ ಇಡಿ ಪಂಚಮಸಾಲಿ ಸಮಾಜದ ಗುರುಗಳಾದ ಪೂಜ್ಯಶ್ರೀ ಜಯಮೃತ್ಯುಂಜಯ ಶ್ರೀಗಳನ್ನು ಅವಮಾನಿಸಿರುವುದು ಸರಿಯಲ್ಲ. ಪಂಚಮಸಾಲಿ ಸಮಾಜವನ್ನು ೨ ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಶ್ರೀಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಸರಕಾರ ಮತ್ತು ಸಮಾಜದ ಕೆಲವರು ಮಾಡುತ್ತಿದ್ದಾರೆ. ಶ್ರೀಗಳ ಮೇಲೆ ಈ ಹಿಂದೆ ಹಲ್ಲೆ ಮಾಡಿದವರೇ ಈಗ ಶ್ರೀಗಳ ವಿರುದ್ದ ಆರೋಪ ಮಾಡುತ್ತಿದ್ದಾರೆ. ಇದರಿಂದ ಯಾರಿದ್ದಾರೆ ಎಂದು ತನಿಖೆಯಿಂದ ತಿಳಿದು ಬರಲಿದೆ. ಗುರುಗಳ ವಿರುದ್ದ ಷಡ್ಯಂತ್ರ ಮಾಡಿದವರ ವಿರುದ್ದ ಮುಂದಿನ ದಿನಗಳಲ್ಲಿ ತಕ್ಕಪಠ ಕಲಿಸುತ್ತೆವೆ ಎಂದು ಹೇಳಿದರು.
ಬಸವರಾಜ ಮನಗುಂಡಿ ಅವರು ಮಾತನಾಡಿ, ಪಂಚಮಸಾಲಿ ಸಮಾಜವನ್ನು ರಾಜಕಾರಣಿಗಳ ಕಪಿಮುಷ್ಠಿಯಿಂದ ಬಿಡುಗಡೆ ಮಾಡಿದ್ದಕ್ಕೆ ಶ್ರೀಗಳ ಮೇಲೆ ಅಪಾಧನೆ ಮಾಡಿ ಅವರ ವಿರುದ್ದ ಸರಕಾರ ಷಡ್ಯಂತ್ರ ನಡೆಸಿ ಸಮಾಜವನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ. ತಪ್ಪು ಯಾರೇ ಮಾಡಿರಲಿ ಸರಕಾರ ಕೂಡಲೆ ಕ್ರಮ ಕೈಗೊಂಡು ತಪ್ಪಿತಸ್ತರಿಗೆ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಾಜದಿಂದ ಬೃಹತ್ ಪ್ರತಿಬಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಮಹೇಶ ಕರಬಿಷ್ಟಿ, ಶರಣಪ್ಪ ಗೊಳಗೊಳಕಿ,ಈರಣ್ಣ ಬಾಲಿಕಾಯಿ, ರಮೇಶ ರೋಣದ, ಮಹೇಶ ಆದಿ, ಕುಮಾರ ಹೊಂಬಳ, ಮಲ್ಲಿಕಾರ್ಜುನ ಕಿರೇಸೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


