ದೆಹಲಿ ಆಗಸ್ಟ್ 19: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಸೈಬರ್ ಸೆಕ್ಯುರಿಟಿ ವಾಚ್‌ಡಾಗ್, ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In), ಆಪರೇಟಿಂಗ್ ಸಿಸ್ಟಂನಲ್ಲಿನ ಎರಡು ದೋಷಗಳ ಬಗ್ಗೆ Windows 11 ಮತ್ತು Windows 10 ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ.
ಈ ದುರ್ಬಲತೆಗಳನ್ನು ಬಳಸಿಕೊಳ್ಳುವ ಮೂಲಕ, ಆಕ್ರಮಣಕಾರರು ಇಂಥಾ ಸಿಸ್ಟಂ ಮೇಲೆ ದಾಳಿ ಮಾಡಬಹುದು ಎಂದು ಸೈಬರ್ ಭದ್ರತಾ ಸಂಸ್ಥೆ ಎಚ್ಚರಿಸಿದೆ. ಆಗಸ್ಟ್ 12 ರಂದು ಸೈಬರ್ ಸೆಕ್ಯುರಿಟಿ ಏಜೆನ್ಸಿಯು ಸಮಸ್ಯೆಯ ಕುರಿತು ಕೆಲವು ವಿವರಗಳನ್ನು ಹಂಚಿಕೊಂಡಿದೆ, “ಈ ದೋಷಗಳು ವರ್ಚುವಲೈಸೇಶನ್ ಬೇಸ್ಡ್ ಸೆಕ್ಯುರಿಟಿ (VBS) ಮತ್ತು ವಿಂಡೋಸ್ ಬ್ಯಾಕಪ್ ಅನ್ನು ಬೆಂಬಲಿಸುವ ವಿಂಡೋಸ್ ಆಧಾರಿತ ಸಿಸ್ಟಮ್‌ಗಳಲ್ಲಿ ಅಸ್ತಿತ್ವದಲ್ಲಿವೆ. ಹಾಗಾಗಿ ದಾಳಿ ಮಾಡುವವರು ಅದೇ ಸಮಸ್ಯೆಗಳನ್ನು ಸೃಷ್ಟಿಸಿ ಅಥವಾ ವಿಬಿಎಸ್ ರಕ್ಷಣೆಯನ್ನು ಭೇದಿಸಿ ದಾಳಿ ಮಾಡಬಹುದು ಎಂದು ಹೇಳಿದೆ.
“ಈ ದುರ್ಬಲತೆಗಳ ಲಾಭ ಪಡೆಯುವ ಮೂಲಕ ಆಕ್ರಮಣಕಾರರಿಗೆ ಉದ್ದೇಶಿತ ಸಿಸ್ಟಂಗೆ ಲಗ್ಗೆ ಇಡಲು ಅವಕಾಶ ನೀಡುತ್ತದೆ.” ಸಲಹೆ ಹೇಳಿದೆ. ವಿಂಡೋಸ್ 10, ವಿಂಡೋಸ್ 11 ಮತ್ತು ವಿಂಡೋಸ್ ಸರ್ವರ್ ಸೇರಿದಂತೆ ವಿಂಡೋಸ್‌ನ ವಿವಿಧ ಆವೃತ್ತಿ ಮೇಲೆ ಇದು ಪರಿಣಾಮ ಬೀರುತ್ತವೆ.