ಮಹಾಲಿಂಗಪುರ,ಅ.೦೨ : ವಿಶ್ವ ಶಾಂತಿಯನ್ನೇ ಬಯಸುವ ಏಕೈಕ ದೇಶ ನಮ್ಮದು, ಧರ್ಮ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವ ಏಕೈಕ ನಗರ ಯಾವುದಾದರು ಇದ್ದರೆ ಅದುವೇ ಮಹಾಲಿಂಗಪುರ ಎಂದು ಹೆಮ್ಮೆಯಿಂದ ಹೇಳಿ ನಿರಂತರ ಧರ್ಮ ಜಾಗ್ರತಿ ಮಾಡುವುದೇ ಹಿಂದೂ ಧರ್ಮದ ದೇಯ ಎಂದು ಶ್ರೀಶೈಲ್ ಪೀಠದ ೧೦೦೮ ಶ್ರೀ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಬನಶಂಕರಿ ದೇವಸ್ಥಾನದ ಮಹಾದ್ವಾರ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ಮನೆಯ ದ್ವಾರ ಮನೆಯ ಮಂದಿಯನ್ನು ಮಾತ್ರ್ ಬರಮಾಡಿಕೊಳ್ಳುತ್ತದೆ. ಆದರೆ ಎಲ್ಲ ಧರ್ಮದ ಭಕ್ತರನ್ನು ಸಮನಾಗಿ ಬರಮಾಡಿಕೊಂಡು ಎಲ್ಲರನ್ನು ಸಮನಾಗಿ ಕಾಣುವ ಏಕೈಕ ದ್ವಾರ ಅದುವೇ ಮಂದಿರಗಳ ಮಹಾದ್ವಾರ ಇಲ್ಲಿ ಭಕ್ತರು ಯಾರೇ ಬಂದರು ಮುಕ್ತವಾದ ಸ್ವಾಗತ ಇರುತ್ತದೆ.ಪ್ರವಚನ ಕೇಳುವುದರಿಂದ ಧರ್ಮ ಜಾಗರತಿಯಾಗುತ್ತದೆ. ನಮಗೆ ತಿಳಿಯದಿದ್ದರೂ ನಿರಂತರವಾಗಿ ಕೇಳುವುದರಿಂದ ಮೋಕ್ಷ ಹೊಂದಬಹುದು ಎಂದರು.
ನಂತರ ಮಾತನಾಡಿದ ಸ್ಥಳೀಯ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಯೋಗಿ ಸಹಜಾನಂದ ಸ್ವಾಮೀಜಿ ದೇವಿ ಆರಾಧನೆಯಿಂದ ಧರ್ಮ ಜಾಗರತಿ ಮತ್ತು ಸಂಸ್ಕಾರ ಲಭಿಸುತ್ತದೆ. ಧರ್ಮ ಜಾಗರತಿಯಾದರೆ. ದೇಶ ಜಾಗರತಿಯಾಗುತ್ತದೆ. ಇದು ಇಂದಿನ ಯುವ ಜನತೆಗೆ ಅವಶ್ಯವಾಗಿ ಬೇಕಾಗಿದೆ ಎಂದರು.
ನಂತರ ಮಾತನಾಡಿದ ಮೈಂದರಗಿ ಸೊಲ್ಲಾಪುರದ ಗುರು ಹಿರೇಮಠದ, ಬ್ರ, ಶ್ರೀ ಅಭಿನವ ರೇವಣಸಿದ್ಧ ಪಟ್ಟದದೇವರು ಮತ್ತು ಸಮಾಜದ ಮುಖಂಡರಾದ ಲಕ್ಕಪ್ಪ ಚಮಕೇರಿ ಮಾತನಾಡಿ ಈ ಮಹಾದ್ವಾರದ ಅಡಿಗಲ್ಲು ೧೯೮೫ ರಲ್ಲಿ ಆಗಿದ್ದು. ತಳಪಾಯ್ ಹತ್ತರಿಂದ.ಹನ್ನೆರಡು ಅಡಿ ಆಳ ತೆಗೆದಿದ್ದು. ಭದ್ರವಾಗಿದೆ. ೧೯೯೩ ರಲ್ಲಿ ದ್ವಾರ ಬಾಗಿಲು ನಿರ್ಮಿಸಿದ್ದು ಅದರ ಕಲ್ಲಿನ ಬೆಲೆ ಅರವತ್ತು ಸಾವಿರ ಆದರೆ ಅದರ ಕೆತ್ತನೆಗೆ ಸುಮಾರು ೧೨೦೦೦೦ ಸಾವಿರ ಕೊಡಲಾಗಿದೆ. ಇದರ ಈ ಮಹಾ ಕಾರ್ಯ ಮುಗಿಯಲು ಸುಮಾರು ನಲ್ವತ್ತು ವರ್ಷ ತೆಗೆದುಕೊಂಡು ಸುದೀರ್ಘ ಆದರೂ ಕೊನೆಗೆ ಲೋಕಾರ್ಪಣೆಗೊಂಡಿದ್ದು ಸಂತಸ ತಂದಿದೆ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಬನಹಟ್ಟಿಯ , ಬ್ರ, ಶ್ರೀ ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಹುನ್ನೂರನ್ ನಾಯವಾದಿಗಳಾದ ರಾಚಪ್ಪ ಕಾಮಗೊಂಡ ಮತ್ತು,ಸಿದ್ದರಾಮ ಮಾತನಾಡಿದರು. ರನ್ನ ಬೆಳಗಲಿಯ ಯೋಗಗುರು ಸದಾಶಿವ ಗುರೂಜಿ ಜಮಖಂಡಿಯ ?, ಬ್ರ, ಶ್ರೀ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮುಖಂಡರಾದ ಚಂದ್ರು ಗೊಂದಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಶ್ರೀಶೈಲ್ ನುಚ್ಚಿ, ಡಾ ಬಿ ಡಿ ಸೋರಗಾಂವಿ, ಅಶೋಕ ಅಂಗಡಿ, ಯಲ್ಲಪ್ಪ ಹಟ್ಟಿ, ತುಳಜಪ್ಪ ಬಾಳಿಕಾಯಿ, ವಿ?ಗೌಡ ಪಾಟೀಲ, ಈಶ್ವರ ಚಮಕೇರಿ, ಜಿ ಎಸ್ ಗೊಂಬಿ, ವಾರದಾನೆಪ್ಪ ಭಾವಿಕಟ್ಟಿ, ಈಶ್ವರ ವಂದಾಲ, ಶಂಕರ ಅಂಬಿ, ಶ್ರೀಕಾಂತ್ ಬೀಳಗಿ, ಸಿದ್ದಪ್ಪ ನಿಂಬರಗಿ, ಎಸ್ ಕೆ ಗಿಂಡೆ, ಹಣಮಂತ ಬಡಿಗೇರ, ಮಲ್ಲಪ್ಪ ಭಾವಿಕಟ್ಟಿ, ರಾಜೇಶ ಭಾವಿಕಟ್ಟಿ, ಶಂಕರೆಪ್ಪ ಹಣಗಂಡಿ, ಮಲ್ಲು ಕುಳ್ಳೊಳ್ಳಿ, ಸಿದ್ದಗಿರೆಪ್ಪ ಕಾಗಿ, ಜಯವಂತ ಬಾಡಗಿ, ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಬಿ ಸಿ ಪೂಜಾರಿ ನಿರೂಪಿಸಿ ವಂದಿಸಿದರು. ಜಿ ಎಸ್ ಗೊಂಬಿ ಸ್ವಾಗತಿಸಿದರು.. ನಾಯವಾದಿ ಬಿ ವಿ ಕೆರೂರ್ ಮಹಾಪ್ರಸಾದ ವ್ಯವಸ್ಥೆ ಮಾಡಿಸಿದರು.
ಎಲ್ಲರನ್ನು ಸಮನಾಗಿ ಬರಮಾಡಿಕೊಳ್ಳುವುದೇ ಮಹಾದ್ವಾರ : ಶ್ರೀಶೈಲ ಜಗದ್ಗುರು


