ಜಗತ್ತಿನ ಮೊದಲ ಜ್ಞಾನದ ಬೆಳಕು ಗೌತಮ ಬುದ್ಧ: ಡಾ.ಸರಜೂ ಕಾಟ್ಕರ್ 

Ravi Talawar
ಜಗತ್ತಿನ ಮೊದಲ ಜ್ಞಾನದ ಬೆಳಕು ಗೌತಮ ಬುದ್ಧ: ಡಾ.ಸರಜೂ ಕಾಟ್ಕರ್ 
WhatsApp Group Join Now
Telegram Group Join Now
ನಾಟಕ ಆಕಾಡೆಮಿ ಬೆಂಗಳೂರು, ಕನ್ನಡ ಭವನ ಮತ್ತು ತೇಜೋಮಯ ಸಂಘ(ರಿ ) ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಮೂರು ದಿನಗಳ  “ಕಿತ್ತೂರು ಕರ್ನಾಟಕ  ನಾಟಕೋತ್ಸವ” ಪ್ರಾರಂಭಗೊಂಡಿತು. ನಾಟಕೋತ್ಸವದ ಮೊದಲನೇ ದಿನ ಧಾರವಾಡದ ಸಮುದಾಯ ತಂಡದವರಿಂದ ಬುದ್ಧ ಪ್ರಭುದ್ಧ ರಂಗ ನಾಟಕವು  ನೋಡುಗರ ಮನ ಸಳೆಯಿತು ಮತ್ತು ಅಧ್ಯಾತ್ಮದ ರುಚಿಯನ್ನು ಹೆಚ್ಚಿಸಿತು. ಕಾರ್ಯಕ್ರಮವನ್ನು ನಗಾರಿ ಬಾರಿಸುವುದರ ಮೂಲಕ ಚಾಲನೆ ನೀಡಿದ ಖ್ಯಾತ ಸಾಹಿತಿಗಳಾದ ಡಾ!! ಸರಜೂ ಕಾಟ್ಕರವರು ಮಾತನಾಡಿ ಜಗತ್ತು ಅಂಧಕಾರದಲ್ಲಿದ್ದಾಗ ಬುದ್ಧ   ಅಧ್ಯಾತ್ಮದ ಜ್ಞಾನದ ಬೆಳಕಾಗಿ ಬಂದ ಮೊದಲ ಮಹಾತ್ಮ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಅಕಾಡೆಮಿ  ಸದಸ್ಯರಾದ  ಶ್ರೀ ರವೀಂದ್ರನಾಥ ಸಿರಿವರರವರು ವಹಿಸಿ ಮಾತನಾಡಿ ಅಕಾಡೆಮಿಯು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಾಟಕ ಉತ್ಸವವನ್ನು ಹಮ್ಮಿಕೊಳ್ಳುತ್ತಿದೆ.  ಅಕಾಡಮಿಯ ಸದಸ್ಯ ಸಂಚಾಲಕರಾದ  ಶ್ರೀ ಬಾಬಾ ಸಾಹೇಬ್ ಕಾಂಬಳೆ ರವರು ಸ್ವಾಗತಿಸುತ್ತ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಂಗ ಕಲಾವಿದರಾದ ಶ್ರೀ ರಾಜು ಮಠಪತಿ,  ಶರಣಗೌಡ ಪಾಟೀಲ, ಮಹಾಂತೇಶ್ ರಾಮದುರ್ಗ, ನಳಿನಿ ವಿದ್ಯಾಸಾಗರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಲಯ ಜಂಟಿ ನಿರ್ದೇಶಕರಾದ ಶ್ರೀ ಕೆ ಎಚ್ ಚನ್ನೂರ, ಕನ್ನಡ ಭವನದ ಮುಖ್ಯಸ್ಥರಾದ ಶ್ರೀ ಯ ರು ಪಾಟೀಲ, ರಂಗಕರ್ಮಿಗಳಾದ ಶ್ರೀ ರವಿ ಕೋಟರಾಗಸ್ತಿ, ದಲಿತ ಮುಖಂಡರಾದ ಶ್ರೀ ಮಲ್ಲೇಶಿ ಚೌಗಲೆ, ಪತ್ರಕರ್ತರಾದ ಶ್ರೀ ಮುರಗೇಶ ಶಿವಪೂಜಿ,ತೇಜೋಮಯ ಸಂಘದ ಅಧ್ಯಕ್ಷರಾದ ಶ್ರೀ ಅರವಿಂದ ಪಾಟೀಲರ ಉಪಸ್ಥಿತರಿದ್ದರು. ಬಸವರಾಜ  ತಳವಾರ, ಶ್ವೇತಾ ಕುಂಬಾರ  ಕಾರ್ಯಕ್ರಮ ವನ್ನು ನಿರೂಪಿಸಿದರು ವಿನೋದ ಸಪನ್ನವರ ವಂದಿಸಿದರು.
WhatsApp Group Join Now
Telegram Group Join Now
Share This Article