ಊದಬತ್ತಿ ಗೃಹ ಕೈಗಾರಿಕಾ ಘಟಕಕ್ಕೆ ಬೆಂಕಿ, ಲಕ್ಷಾಂತರ ಹಾನಿ

Hasiru Kranti
ಊದಬತ್ತಿ ಗೃಹ ಕೈಗಾರಿಕಾ ಘಟಕಕ್ಕೆ ಬೆಂಕಿ, ಲಕ್ಷಾಂತರ ಹಾನಿ
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}
WhatsApp Group Join Now
Telegram Group Join Now

ಮಹಾಲಿಂಗಪುರ: ಪಟ್ಟಣದ ಢವಳೇಶ್ವರ ರಸ್ತೆಯಲ್ಲಿರುವ ಊದಬತ್ತಿ ಗೃಹ ಕೈಗಾರಿಕಾ ಘಟಕದಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಹೊತ್ತಿ ಪತ್ರಾಸ್ ಶೆಡ್ಡಿನ ಕಾರ್ಖಾನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ತೇರದಾಳ ಶಾಸಕರಾದ ಸಿದ್ದು ಸವದಿ ಭೇಟಿ ನೀಡಿ ಹಾನಿಗೊಳಗಾದ ಮಾಲಿಕನಿಗೆ ಸಾಂತ್ವನ ಹೇಳಿದರು.
ಕಳೆದ ವ? ಸ್ಥಾಪನೆಗೊಂಡ ಈ ಕಾರ್ಖಾನೆಯಲ್ಲಿ ಊದಬತ್ತಿ ಮತ್ತು ಇನ್ನಿತರ ಸುಗಂಧ ಕಡ್ಡಿಗಳನ್ನು ತಯಾರಿಸುವ ೧೫ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಇವುಗಳ ಅಂದಾಜು ಮೊತ್ತ ೧೫ ಲಕ್ಷಗಳು. ಜೊತೆಗೆ ಸುಗಂಧ ದ್ರವ್ಯಗಳ ಸಂಗ್ರಹದ ಮೊತ್ತ ೬ ಲಕ್ಷಗಳು ಒಟ್ಟು ೨೦ ರಿಂದ ೨೫ ಲಕ್ಷಗಳ ಹಾನಿಯಾಗಿದೆ ಎಂದು ಮಾಲಿಕರು ತಿಳಿಸುತ್ತಾರೆ.
ಅಲ್ಲಿ ಇಲ್ಲಿ ಸಾಲ ಸೋಲ ಮಾಡಿ ಚಿಕ್ಕ ಉದ್ದಿಮೆ ಆರಂಭಿಸಿದ ವ್ಯಕ್ತಿ ಈ ಘಟನೆಯಿಂದ ಕಂಗಾಲಾಗಿ, ಶಾಸಕ ಸವದಿ ಸ್ಥಳಕ್ಕಾಗಮಿಸಿದ ವೇಳೆ ಗೋಳೋ ಅಂತ ಅಳಲಾರಂಭಿಸಿ ಸರ್ಕಾರದ ಪರಿಹಾರಕ್ಕೆ ಆಗ್ರಹಿಸಿದ.ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿಯಾದ ಬಗ್ಗೆ ಮತ್ತು ಈ ಘಟನೆ ಯಾವ ರೀತಿ ನಡೆಯಿತು ಎಂದು ತಿಳಿದು ಬಂದಿಲ್ಲ.
ಈ ಸಂದರ್ಭದಲ್ಲಿ ಮುಖಂಡರಾದ ಶೇಖರ ಅಂಗಡಿ, ಮಹಾಂತೇಶ ಹಿಟ್ಟಿನಮಠ, ಶಂಕರಗೌಡ ಪಾಟೀಲ, ಚನ್ನಬಸು ಯರಗಟ್ಟಿ,ಆನಂದ ಕಂಪು, ಮುತ್ತಪ್ಪ ಕಲ್ಲೋಳ್ಳಿ, ದುಂಡಪ್ಪ ನಂದೆಪ್ಪನ್ನವರ, ಅಲ್ಲಪ್ಪ ಕಲ್ಲೋಳ್ಳಿ, ಮಹೇಶ್ ಜಿಡ್ಡಿಮನಿ, ಚೆನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಕಂಠಿ, ಲೋಹಿತ ನಂದೆಪ್ಪನ್ನವರ ಮುಂತಾದವರಿದ್ದರು.
೩೦ mಟಠಿ ೦೧ ಠಿhoಣo

WhatsApp Group Join Now
Telegram Group Join Now
Share This Article