ಶಾಂತಿ ಯಿಂದ ಹಬ್ಬ ಆಚರಿಸಿ, ಸೂಕ್ತ ಬಂದೋಬಸ್ತ್ ನೀಡಲಾಗುವುದು  : ಮಂಜುನಾಥ

Pratibha Boi
ಶಾಂತಿ ಯಿಂದ ಹಬ್ಬ ಆಚರಿಸಿ, ಸೂಕ್ತ ಬಂದೋಬಸ್ತ್ ನೀಡಲಾಗುವುದು  : ಮಂಜುನಾಥ
WhatsApp Group Join Now
Telegram Group Join Now
ಹೊಸಪೇಟೆ.ನಮ್ಮ್ ಸಮುದಾಯದ ಸರ್ವರೂ  ಪ್ರತಿ ವರ್ಷದಂತೆ ಈ ವರ್ಷವೂ ಸಹ ಈದ್ ಮಿಲಾದ್ ಹಬ್ಬವನ್ನು ಆಚರಿಸ್ಲಿದ್ದೇವೆ  . ಈ ವರ್ಷ 1500 ನೇ ವರ್ಷದ ಈದ್ ಆಚರಣೆ ನಡೆಯಲಿದ್ದು ಹೆಚ್ಚಿನ ಸಂಭ್ರಮದಲ್ಲಿ  ಹಬ್ಬದ್  ಆಚರಣೆ ನಡೆಯಲಿದೆ ದಿನಾಂಕ 4 ರಂದು ಬಡೇ ರಾತ್,  ಆ ದಿನ ರಾತ್ರಿ ಸಮಯದಲ್ಲಿ ಎಲ್ಲಾ ಮಸೀದಿಗಳಲ್ಲಿ  ಜಾಗರಣಾ ಪ್ರಾರ್ಥನೆಗಳು ನಡೆಯಲಿದ್ದು, ಎಲ್ಲರೂ ಶಾಂತ ರೀತಿಯಿಂದ ಪ್ರಾರ್ಥನೆ ಸಲ್ಲಿಸಲಿದ್ದು, ಪ್ರಾರ್ಥನೆ ನಂತರ ಎಲ್ಲಾ ಭಾಂದವರು ಗುಂಪು ಗುಂಪಾಗಿ ನಿಲ್ಲದೇ ಮನೆಗೆ ಹೋಗುತ್ತಾರೆ. ಎಂದು  ಮುಸ್ಲೀಂ ಸಮಾಜದ ಮುಖಂಡರಾದ ಬಡಾವಲಿ  ಆವರು ಹೇಳಿದರು. ಈದ್ ಮಿಲಾದ್ ಆಚರಣೆ ಪ್ರಯುಕ್ತ ಇಂದು ಸೊಂಡೂರು ರಸ್ತೆಯಲ್ಲಿ ನ ಡಿ ವೈ ಎಸ್ ಪಿ ಕಛೇರಿ ಅವರಣ ದಲ್ಲಿ ನಡೆದ ಶಾಂತಿ ಸಭೆ ಯಲ್ಲಿ ಜಿಲ್ಲಾ ಪೊಲೀಸ್ ಅದೀಕ್ಷ ಕರ ಮುಂದೆ ನಗರದಲ್ಲಿ ಸೌಹಾರ್ದತೆ ಕಾಪಾಡುವುದಾಗಿ ಹೇಳಿದರು. ದಿನಾಂಕ: 05- ರಂದು ಬೆಳಿಗ್ಗೆ ಸುಮಾರು 09:30 ಗಂಟೆಗೆ  ಸಾಮೂಹಿಕ ಪ್ರಾರ್ಥನೆ ನಂತರ ಈದ್ಗಾದಿಂದ ಮೆರವಣಿಗೆ ಹೊರೆಟು ಮೂರಂಗಡಿ ಸರ್ಕಲ್ ವರೆಗೆ ಸಾಗಿ ಅಲ್ಲಿ ನ  ಕಾರ್ಯಕ್ರಮದಲ್ಲಿ .   ಪ್ರವಚನ ಮಾಡಲು ದಾವಣಗೆರೆಯಿಂದ ಗುರುಗಳು ಬರಲಿದ್ದು , ಪ್ರವಚನ  ನೀಡಲಿದ್ದಾರೆ   ಎಲ್ಲಾ ಮಸೀದಿಗಳಲ್ಲಿ  ಸಾಮೂಹಿಕ ಔತಣ  ಇರುವುದಾಗಿ  ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಹೇಳಿದರು.  ಮೆರವಣಿಗೆ ಸಮಯದಲ್ಲಿ  ಯಾವುದೇ ಡಿಜೆ ಸೌಂಡ್ ಬಳಸುವುದಿಲ್ಲ.  ಹಬ್ಬದ ಸಮಯದಲ್ಲಿ ಯಾವುದೇ ಗಲಭೆಗಳಿಲ್ಲದೇ ಶಾಂತ ರೀತಿಯಿಂದ ಮಾಡುವುದಾಗಿ ತಿಳಿಸಿದರು.
 ಮಂಜುನಾಥ. ಹೆಚ್ಚುವರಿ ಪೊಲೀಸ್ ಅಧಿಕ್ಷಕರು ವಿಜಯನಗರ ಜಿಲ್ಲೆ ರವರು ಮಾತನಾಡಿ. : 04- ಬಡೆರಾತ್ ಹಬ್ಬದ ದಿನದಂದು ರಾತ್ರಿ ಸಮಯದಲ್ಲಿ ಗುಂಪು ಕಟ್ಟಿಕೊಂಡು ನಿಲ್ಲುವಂತಿಲ್ಲ , ಬೈಕ್‌ನಲ್ಲಿ ಸೈಲೆನ್ಸ್ ಕಿತ್ತಿ ಕರ್ಕಶ ಶಬ್ದ ಬರುವಂತೆ ಓಡಿಸುವುದನ್ನು  ನಿಷೇಧಿಸಿದೆ ಎಂದು ಸಭೆಗೆ ತಿಳಿಸಿದರು, ಪ್ಲೆಕ್ಸ್/ಬ್ಯಾನರ್ ಗಳನ್ನು ಹಾಕುವಾಗ ಎಚ್ಚರಿಕೆವನ್ನು ವಹಿಸಬೇಕು. ಬ್ಯಾನರ್‌ಗಳಲ್ಲಿ ಯಾವುದೇ ದರ್ಮಕ್ಕೆ ದಕ್ಕೆ ಉಂಟುಮಾಡುವAತಹ ವಿಚಾರಗಳು ಇರಬಾರದು ಸದರಿ ಹಬ್ಬದ ದಿನದಂದು ಹಬ್ಬವನ್ನು ಶಾಂತಿ ರೀತಿಯಿಂದ ಆಚರಣೆ ಮಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗುವುದು ಅಂತಾ ತಿಳಿಸಿದರು.
WhatsApp Group Join Now
Telegram Group Join Now
Share This Article