ಬೆಂಗಳೂರು, ಮೇ.30: ಸಿಬಿಐ ಅಧಿಕಾರಿಗಳು ಎಂದು ಹೇಳಿ ರಾತ್ರಿ ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ಗೆ ನುಗ್ಗಿ ದರೋಡೆ ಮಾಡಿದ್ದರು. ಕೃತ್ಯ ನಡೆದ ಹನ್ನೆರಡು ಗಂಟೆ ಒಳಗಡೆ ಆರೋಪಿಗಳನ್ನ ಚೇಸ್ ಮಾಡಿ ಪೊಲೀಸರು ಹಿಡಿದಿದ್ದಾರೆ. ಮೇ.29 ರಾತ್ರಿ ಸೆಕ್ಯೂರಿಟಿಗೆ ಸಿಬಿಐ ಪೊಲೀಸರು ಎಂದು ಹೇಳಿ ಅಪಾರ್ಟ್ಮೆಂಟ್ಗೆ ನಾಲ್ವರು ನುಗ್ಗಿದ್ದಾರೆ. ನಂತರ ಆಚಾರ್ಯ ಕಾಲೇಜು ವಿದ್ಯಾರ್ಥಿಗಳು ವಾಸ ಮಾಡುವ ಫ್ಲಾಟ್ಗೆ ಹೋಗಿ, ಫ್ಲಾಟ್ನಲ್ಲಿದ್ದವರಿಗೆ ಲಾಠಿಯಿಂದ ಹಲ್ಲೆ ನಡೆಸಿ, ಲಾಕಪ್ ಮತ್ತು ಗನ್ ತೋರಿಸಿ ಗಾಂಜಾ ಮಾರಾಟ ಮಾಡ್ತಿದ್ದಿರಾ ಎಂದು ಹೇಳಿ ಬೆದರಿಸಿದ್ದಾರೆ.
ಫ್ಲಾಟ್ನಲ್ಲಿದ್ದ ಯುವಕರಿಗೆ ಹಲ್ಲೆ ಮಾಡಿ ತೊಂಬತ್ತು ಸಾವಿರ ಹಣ ದೋಚಿದ್ದಾರೆ. ಕೂಡಲೇ ಘಟನೆ ಬಳಿಕ ಹಲ್ಲೆಗೆ ಒಳಗಾದವರು ಸೋಲದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಕಾರ್ಯಚರಣೆ ನಡೆಸಿದ ಪೊಲೀಸರಿಗೆ ತಮಿಳುನಾಡಿನ ಕಡೆ ಆರೋಪಿಗಳು ಎಸ್ಕೇಪ್ ಆಗ್ತಿದ್ದ ಮಾಹಿತಿ ದೊರೆಯುತ್ತದೆ. ಈ ಹಿನ್ನಲೆ ಚೇಸ್ ಮಾಡಿ ತಮಿಳುನಾಡಿನ ಧರ್ಮಪುರಿಯಲ್ಲಿ ಆರೋಪಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ.