ಸರ್ಕಾರಿ ಪ್ರೌಢಶಾಲೆಗೆ ನೋಟ್ ಬುಕ್ ವಿತರಿಸಿದ ಅಂಗವಿಕಲರ ಸಂಘ

Ravi Talawar
ಸರ್ಕಾರಿ ಪ್ರೌಢಶಾಲೆಗೆ ನೋಟ್ ಬುಕ್ ವಿತರಿಸಿದ ಅಂಗವಿಕಲರ ಸಂಘ
WhatsApp Group Join Now
Telegram Group Join Now

 

ರನ್ನ ಬೆಳಗಲಿ: ಜು.೨೩., ಪಟ್ಟಣದ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ದಂದು ಜಗದ್ಗುರು ಶಂಕರಾಚಾರ್ಯರ ಹಾಗೂ ವಿದ್ಯಾರ್ಥಿ ಜೀವನಕ್ಕೆ ಅಳವಡಿಸಿಕೊಳ್ಳುವ ಶಂಕರ ಸೂಕ್ತಿಗಳನ್ನು ಒಳಗೊಂಡ ೪೦೦ ನೋಟು ಬುಕ್ಕಗಳನ್ನು ನವ ಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೇಬಲ್ ಸಂಸ್ಥೆ ರಾಮನಗರ ಬೆಂಗಳೂರು ಹಾಗೂ ಅನಿಕೇತನ ವಿಕಲಚೇತನರ ಸಂಸ್ಥೆ ಮಹಾಲಿಂಗಪುರ ಇವರ ಆಶ್ರಯದಲ್ಲಿ “ಉಚಿತ ನೋಟ್ ಬುಕ್ ವಿತರಣಾ ಸಮಾರಂಭ” ಜರಗಿತು.

ವಿಕಲಚೇತನ ಸಂಸ್ಥೆಯ ಅಧ್ಯಕ್ಷರಾದ ಸಣ್ಣಬಸಪ್ಪ ಹೋಳಗಿ ಮಾತನಾಡಿ ನಮ್ಮ ಸಂಸ್ಥೆಯು ಪಟ್ಟಣದ ಅನೇಕ ಶಾಲೆಗಳಿಗೆ ೧೫ ವ?ಗಳಿಂದ ಸಂಸ್ಥೆಯು ಈ ಕಾರ್ಯವನ್ನು ಮಾಡುತ್ತಾ ಬಂದಿದೆ.ಸಜ್ಜನರ ಸಹವಾಸ ಮಾಡಬೇಕು, ತಂದೆ ತಾಯಿ ಮತ್ತು ಗುರು ಹಿರಿಯರನ್ನು ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗಿರೀಶ ಸಂಕ್ರಟ್ಟಿ,ಶಾಲೆಯ ಪ್ರಭಾರಿ ಮುಖ್ಯ ಗುರುಮಾತೆಯರಾದ ಎಸ್ ಎಸ್ ಉದಪುಡಿ, ಎಮ್ ಪಿ ಎಸ್ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಿದ್ದು ಮಾಳಿ, ಜಿಲ್ಲಾ ಅಂಗವಿಕಲ ಸಂಘದ ಅಧ್ಯಕ್ಷರಾದ ರಾಜು ತೇರದಾಳ, ಮಹಾದೇವ ಒಡೆಯರ, ಲಕ್ಷ್ಮಣ ಬನಾಜ,ವಿ ಎಮ್ ಹೊಸೂರ. ಪಿ ಕೆ ಪವಾರ. ಲಕ್ಷ್ಮೀ ವೈ ಶಾಸ್ತ್ರಿ. ಎಲ್ ಕೆ ಮಂಟೂರ. ಎಸ್ ಎಂ ಮೆಗಾಡಿ. ಶ್ರೀಶೈಲ ಕಾಡದೇವರ.ಮಂಜುನಾಥ ಪೂಜಾರಿ.ಕಿರಣ ಪವಾರ.ರವಿ ಹಿರೇಕಲ್ಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,ಬಾಲಕೃ? ಚೋಪಡೆ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article