ಗಚ್ಚಿನ ಮಠದ ಭಕ್ತರ ಸಮರ್ಪಣಾ ಭಾವ ಬೇರೆ ಎಲ್ಲಿಯೂ ಸಿಗಲು ಸಾಧ್ಯವಿಲ್ಲ : ಶಿವಬಸವ ಸ್ವಾಮೀಜಿ

Hasiru Kranti
ಗಚ್ಚಿನ ಮಠದ ಭಕ್ತರ ಸಮರ್ಪಣಾ ಭಾವ ಬೇರೆ ಎಲ್ಲಿಯೂ ಸಿಗಲು ಸಾಧ್ಯವಿಲ್ಲ : ಶಿವಬಸವ ಸ್ವಾಮೀಜಿ
WhatsApp Group Join Now
Telegram Group Join Now

ಅಥಣಿ : ಗಚ್ಚಿನ ಮಠದ ಭಕ್ತರ ಸಮರ್ಪಣಾ ಭಾವ ಬೇರೆ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಇಲ್ಲಿನ ಭಕ್ತರ ಕಾಯಕ ಹಾಗೂ ದಾಸೋಹ ಸೇವೆ ಮೆಚ್ಚುವಂತಹದ್ದಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಹಾ ಶಿವರಾತ್ರಿಯ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸುವ ನಿರ್ಧಾರವನ್ನು ನಮ್ಮ ಶ್ರೀ ಮಠದ ಭಕ್ತರು ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಅವರು ಗಚ್ಚಿನ ಮಠದಲ್ಲಿ ಜರುಗಿದ ಶಿವರಾತ್ರಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮಹಾ ಶಿವರಾತ್ರಿ ಅಂಗವಾಗಿ ಫೆ. ದಿ. 04 ರಿಂದ ದಿ.13 ವರೆಗೆ ಸಿದ್ಧರಾಮ ಸ್ವಾಮೀಜಿ ಇವರಿಂದ ಪ್ರವಚನ ಕಾರ್ಯಕ್ತಮ ನಡೆಯಲಿದೆ, ಮಹಾ ಶಿವರಾತ್ರಿ ಅಂಗವಾಗಿ ಜಾಗರಣೆ ನಿಮಿತ್ಯ ನಡೆಯಲಿರುವ ಸಂಗೀತ ಕಾರ್ಯಕ್ಕೆ ನಾಡಿನ ಖ್ಯಾತ ಕಲಾವಿದರನ್ನು ಆವ್ಹಾನಿಸುವ ಯೋಚನೆ ‌ನಡೆದಿದೆ ಎಂದರು.

ನಾಡಿನ ಜಗದ್ಗುರುಗಳು. ಅನೇಕ ಮಠಾಧೀಶರು. ಸಚಿವರು. ಸಂಸದರು. ಶಾಸಕರು. ಗಣ್ಯಮಾನ್ಯರು ಕಾರ್ಯಕ್ರಮಕ್ಕೆ ಆಹ್ವಾನಿಸುವ ಉದ್ದೇಶವಿದೆ ಎಂದರು.

ಮಹಾ ಶಿವರಾತ್ರಿ ಅಂಗವಾಗಿ ನಡೆಯಲಿರುವ ಶರಣ ಸಂಸ್ಕೃತಿ ಮೇಳಕ್ಕೆ ಒಳ್ಳೆಯ ಪ್ರಭಾವಿ ಉಪನ್ಯಾಸಕರನ್ನು ಆವ್ಹಾನಿಸಬೇಕು ಎಂದು ಭಕ್ತರ ಕೋರಿಕೆಯಾಗಿದೆ ಎಂದ ಅವರು ಶಿಕ್ಷಣ, ಉದ್ಯೋಗ ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಮೇಲೆ ಉಪನ್ಯಾಸಗಳನ್ನು ಆಯೋಜಿಸಲಾಗುವುದು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ನ್ಯಾಯವಾದಿ ಕೆ.ಎ.ವಣಜೋಳ, ಧುರೀಣರಾದ ಗಜಾನನ ಮಂಗಸೂಳಿ, ಶಿವಾನಂದ ದಿವಾನಮಳ, ಸುನೀಲ ಸಂಕ, ಮಹಾದೇವ ಮಡಿವಾಳ, ಸಂತೋಷ ಸಾವಡಕರ ಮಾತನಾಡಿ, ಗಚ್ಚಿನ‌ ಮಠದಿಂದ ಆಯೋಜನೆಯಾಗುತ್ತಿರುವ ಮಹಾ ಶಿವರಾತ್ರಿ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ತನು, ಮನ, ಧನದಿಂದ ಸಹಾಯ, ಸಹಕಾರ ನೀಡುವುದಾಗಿ ಹೇಳಿದರು.

ಈ ವೇಳೆ ಪ್ರಮೋದ ಬಿಳ್ಳೂರ, ರಾಮನಗೌಡ ಪಾಟೀಲ, ಶಶಿಕಾಂತ ಹುಲಕುಂದ, ರವಿ ಭಡಕಂಬಿ. ಶೇಖರ ಕೋಲಾರ, ಅಶೋಕ ಹೊಸುರ, ಗಿರೀಶ ದಿವಾನಮಳ, ಸಿದ್ಧಪ್ಪ ಮಹಾಜನ, ಮಹಾದೇವ ಹೊನ್ನಳ್ಳಿ, ಚಂದು ಯಲ್ಲಟ್ಟಿ, ಮಹಾದೇವ ಹಳ್ಳದಮಳ, ಶ್ರೀಶೈಲ ಹಳ್ಳದಮಳ, ಸೋಮು ವಾಂಗಿ, ಪರಸರಾಮ ಸೋನಕರ. ಪ್ರಶಾಂತ ತೋಡಕರ. ನಿತ್ಯಾನಂದ ಚರಂತಿಮಠ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article