ಇಂಡಿ. ಕ್ರೀಡಾ ಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ ಎಂದು ಉಪ ತಹಶಿಲ್ದಾರ ಹಾಗೂ ನೌಕರರ ಸಂಘದ ಇಂಡಿ ತಾಲೂಕಾ ಅಧ್ಯಕ್ಷರಾದ ಬಸವರಾಜ ರಾವೂರ ಹೇಳಿದರು.
ಪಟ್ಟಣದ ರಾಯಲ್ ಇನಟ್ರನ್ಯಾಶನಲ್ ಸ್ಕೂಲ್ ಹಾಗೂ ವಿಜ್ಞಾನ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು
ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದ ಅವರು ಈ ಶಾಲೆಯ ಕ್ರೀಡಾಕೂಟದ ಉದ್ಘಾಟನೆ ನೋಡಿದರೆ ರಾಜ್ಯಮಟ್ಟದ ಕ್ರೀಡಾ ಕೂಟದ ಉದ್ಘಾಟನೆ ತರಹವೇ ಕಾಣುತ್ತದೆ. ಈ ಶಾಲೆ ಮಕ್ಕಳು ಹಾಗೂ ಶಾಲೆಯ ಹೆಸರು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಲಿ ಎಂದು ಹೇಳಿದರು.
ಇಂಡಿ ಪಿ.ಎಸ್.ಐ ಮಹೇಶ ಸಂಖ ಕ್ರೀಡಾ ಜೋತಿ ಬೆಳಗಿಸಿ ಮಾತನಾಡಿದ ಅವರು ಆರೋಗ್ಯವಂತರಾಗಿ ಬದುಕಲು ಕ್ರೀಡೆ ಮುಖ್ಯ ಪಾತ್ರ ವಹಿಸುತ್ತದೆ. ಮನುಷ್ಯ ಆರೋಗ್ಯವಂತನಾಗಿ ಇರಬೇಕಾದರೆ ದೈಹಿಕ ಸದೃಢತೆ ಮುಖ್ಯ. ದೈಹಿಕ ಸಾಮರ್ಥ್ಯ ಮಾನಸಿಕ ದೃಢತೆ ಇವೆಲ್ಲವೂ ಶಾರೀರಿಕ ಶಿಕ್ಷಣದ ಮೂಲಕ ಸಾಧ್ಯ. ಹಾಗಾಗಿ ಈಗಿನ ಶೈಕ್ಷಣಿಕ ನೀತಿಯಲ್ಲಿ ಯೋಗ ಹಾಗೂ ಶಾರೀರಿಕ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ ಎಂದರು.
ಪಿ.ಡಬ್ಲ್ಯೂ. ಡಿ ಇನಜಿನ್ಯರಾದ ಮಹಿಬೂಬ ಸಂಜವಾಡ ಮಾಡನಾಡಿ ಕ್ರೀಡೆಯಲ್ಲಿ ಎರಡು ವಿಧ ಇದೆ. ಒಂದು ಆಡಿ ಅನುಭವಿಸುವುದು ಇನ್ನೊಂದು ನೋಡಿ ಅನುಭವಿಸುವುದು. ಆಡಿ ಅನುಭವಿಸುವುದು ಕಷ್ಟದ ಕೆಲಸ. ಆದರೆ ಅದರಿಂದ ನಮ್ಮ ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲದೆ ದೈಹಿಕ ಸಾಮರ್ಥ್ಯವೂ ಕೂಡ ಬೆಳವಣಿಗೆಯಾಗುತ್ತದೆ. ಹೀಗಾಗಿ ಆಡುವ ಮೂಲಕ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷರಾದ ಅಸ್ಲಂ ಪಟೇಲ್ ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆಯನ್ನುಮೂಡಿಸುವಲ್ಲಿ ಸಫಲವಾಗಿದೆ ಹಾಗೂ ಮನಸ್ಸಿಗೆ ಮುದ ನೀಡುತ್ತವೆ.ಹಾಗೆಯೇ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತ ಮಾಡದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹುಸೇನ ಗುನ್ನಾಪುರ, ನವಾಜ್, ಮಹಿಬೂಬ ಸಾವಳೆ, ಮಹೆಶ ಕೂಳಿ, ಇಕ್ಬಾಲ್ ಪಠಾಣ್‌ಮಹ್ಮದ ಗುಲಬರ್ಗಾ, ಹಸನ ಮುಜಾವರ, ಮುಖ್ಯೋಪಾಧ್ಯಾಯರಾದ ದೇರಾಜ ಟಿ, ಮುಖ್ಯಗುರುಮಾತೆಯಾದ ಶಬನಂ ಕೋಕಣಿ, ಪಿ.ಯು.ಸಿ ಕಾಲೇಜ್ ಪ್ರಾಂಶುಪಾಲರಾದ ಡಾ. ಗೀತಾ, ಅಶ್ಪಾಕ ಮಾಕಾನದಾರ, ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಸೇರಿದಂತೆ ಎಲ್ಲಾ ಸಹಾಯಕ ಸಿಬ್ಬಂದಿ ಇದ್ದರು.