ರಾಜ್ಯ ಮಸೂದೆಯ ಅನುಮೋದನೆಗೆ ​ಗಡುವು; ಮುರ್ಮು, ಮೋದಿಗೆ ಸೂಚನೆ

Ravi Talawar
ರಾಜ್ಯ ಮಸೂದೆಯ ಅನುಮೋದನೆಗೆ ​ಗಡುವು; ಮುರ್ಮು, ಮೋದಿಗೆ ಸೂಚನೆ
WhatsApp Group Join Now
Telegram Group Join Now

ನವದೆಹಲಿ: ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ಸಂಘರ್ಷ ಪ್ರಕರಣದಲ್ಲಿ ರಾಜ್ಯ ಮಸೂದೆಯ ಅನುಮೋದನೆಗೆ ​ಗಡುವು ವಿಧಿಸಿದ ಸುಪ್ರೀಂ ಕೋರ್ಟ್​ ನಡೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಏಪ್ರಿಲ್ 8ರ ತೀರ್ಪನ್ನು ನಿರಾಕರಿಸಿರುವ ರಾಷ್ಟ್ರಪತಿ, ಅದರ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಸಂವಿಧಾನ ಅಂತಹ ಯಾವುದೇ ಸಮಯದ ಚೌಕಟ್ಟು; ಷ್ಟ್ರಪತಿಗಳ ಪರಿಗಣನೆಗೆ ಮಸೂದೆಯನ್ನು ಕಾಯ್ದಿರಿಸುತ್ತದೆ. ಇದೇ ವಿಧಿಯು ರಾಜ್ಯಪಾಲರು ತಮ್ಮ ಆಯ್ಕೆಗಳನ್ನು ಚಲಾಯಿಸಲು ಯಾವುದೇ ಸಮಯ ನಿರ್ದಿಷ್ಟಪಡಿಸಿಲ್ಲ. 201ನೇ ವಿಧಿ ಮಸೂದೆಗಳಿಗೆ ಒಪ್ಪಿಗೆ ನೀಡುವ ಅಥವಾ ತಡೆಹಿಡಿಯುವ ಅಧಿಕಾರ ಮತ್ತು ಪ್ರಕ್ರಿಯೆಯನ್ನು ವಿವರಿಸುತ್ತದೆ. ಆದರೆ ಈ ಸಾಂವಿಧಾನಿಕ ಅಧಿಕಾರಗಳನ್ನು ಚಲಾಯಿಸಲು ಯಾವುದೇ ಗಡುವು ವಿಧಿಸಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಶಾಸನ ಜಾರಿಗೆ ಬರುವ ಮೊದಲು ರಾಷ್ಟ್ರಪತಿಗಳ ಒಪ್ಪಿಗೆ ಅಗತ್ಯವಿರುವ ಹಲವು ನಿದರ್ಶನಗಳನ್ನು ಸಂವಿಧಾನದ ಗುರುತಿಸುತ್ತದೆ. ವಿಧಿ 200 ಮತ್ತು 201ಗಳ ಅಡಿಯಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ವಿವೇಚನಾ ಅಧಿಕಾರಗಳು ಕಾನೂನು ಏಕರೂಪತೆ, ರಾಷ್ಟ್ರೀಯ ಸಮಗ್ರತೆ ಮತ್ತು ಭದ್ರತೆ ಮತ್ತು ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತಗಳಿಂದ ರೂಪುಗೊಂಡಿವೆ. 201ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಒಪ್ಪಿಗೆ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿದೆಯೇ ಎಂಬುದರ ಕುರಿತು ಸುಪ್ರೀಂ ಕೋರ್ಟ್ ಕ್ಲಿಷ್ಟಕರ ತೀರ್ಪುಗಳು ಇದನ್ನು ಮತ್ತಷ್ಟು ಸಂಕೀರ್ಣವಾಗಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

142ನೇ ವಿಧಿ ವಿಶೇಷವಾಗಿ ಸಾಂವಿಧಾನಿಕ ಅಥವಾ ಶಾಸನಬದ್ಧ ನಿಬಂಧನೆಗಳಿಂದ ನಿಯಂತ್ರಿಸಲ್ಪಡುವ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ತಮ್ಮ ಅಭಿಪ್ರಾಯ ನೀಡುತ್ತದೆ. ರಾಜ್ಯಪಾಲರು ಪರಿಗಣಿಸಿದ ಒಪ್ಪಿಗೆ ಎಂಬ ಪರಿಕಲ್ಪನೆಯು ಸಾಂವಿಧಾನಿಕ ಚೌಕಟ್ಟನ್ನು ಮೀರುತ್ತದೆ ಮತ್ತು ಮೂಲಭೂತವಾಗಿ ಅವರ ವಿವೇಚನಾ ಅಧಿಕಾರವನ್ನು ನಿರ್ಬಂಧಿಸುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೇ, ಸುಪ್ರೀಂ ಕೋರ್ಟ್‌ಗೆ ಈ ಕೆಳಗಿನ 14 ಪ್ರಶ್ನೆಗಳನ್ನು ಕೇಳಿದ್ದಾರೆ.

WhatsApp Group Join Now
Telegram Group Join Now
Share This Article