ಶಿಕ್ಷಣದ ಕ್ರಾಂತಿಗೆ ಸುತ್ತೂರು ಮಠದ ಕೊಡುಗೆ ಅಪಾರ: ಡಾ. ಸಿ. ಕೊಟ್ರೇಶ್

Ravi Talawar
ಶಿಕ್ಷಣದ ಕ್ರಾಂತಿಗೆ ಸುತ್ತೂರು ಮಠದ ಕೊಡುಗೆ ಅಪಾರ: ಡಾ. ಸಿ. ಕೊಟ್ರೇಶ್
WhatsApp Group Join Now
Telegram Group Join Now
ಬಳ್ಳಾರಿ, ಆ.31: ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರ ವಹಿಸಿದ ಇಬ್ಬರು ಶ್ರೀಗಳಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು  ಮತ್ತೊಬ್ಬರು ಹಾನಗಲ್ಲು ಕುಮಾರೇಶ್ವರ ಶ್ರೀಗಳು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹ ಪ್ರಾಧ್ಯಾಪಕ ಡಾ. ಸಿ. ಕೊಟ್ರೇಶ್ ಹೇಳಿದರು.
ಅವರು ನಗರದ ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್‌ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸ್ಮರಣೆ, ಸಂಸ್ಥಾಪಕರ ದಿನಾಚರಣೆ ಹಾಗೂ ಸೇವಾದೀಕ್ಷೆ ಸಮಾರಂಭದಲ್ಲಿ ‘ಸುತ್ತೂರು ಶ್ರೀಗಳ ಶೈಕ್ಷ ಣಿಕ ಸೇವೆ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಚೋಳರ ಕಾಲಘಟ್ಟದಲ್ಲಿ ಶಿವ ರಾತ್ರೀಶ್ವರರ ಸುತ್ತೂರು ಮಠ ಸ್ಥಾಪನೆ ಆಗುತ್ತದೆ. ಚೋಳ ಮತ್ತು ಗಂಗರ ನಡುವೆ ನಡೆದ ಯುದ್ಧವನ್ನು ನಿಲ್ಲಿಸಲು ಸಹ ಈ ಮಠ ಕಾರಣವಾಗುತ್ತದೆ.
ಮಠದ 23 ನೇ ಶ್ರೀಗಳಾದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಜೆಎಸ್ ಎಸ್ ವಿದ್ಯಾಪೀಠ ಸ್ಥಾಪನೆ ಮಾಡಿದರು.ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಮಠ ಇಂದು ರಾಜ್ಯದಲ್ಲಿ ಮಹತ್ತರವಾದ ಶೈಕ್ಷಣಿಕ ಕ್ರಾಂತಿ ಮಾಡಿದೆ. ಶಿಕ್ಷಣದ ಮಹತ್ವವನ್ನು ಅರಿತು ಶ್ರೀಗಳು ಐದು ದಶಕಗಳ ಕಾಲ ಶ್ರಮಿಸಿದರು. ಅನೇಕ ಸಮುದಾಯಗಳನ್ನು ಮಠದ ಕಡೆ ಸೆಳೆಯುವ ಕೆಲಸ ಅವರಿಂದ ನಡೆಯಿತು. ಅವರಲ್ಲಿನ ತ್ಯಾಗದ ಮನೋಭಾವದಿಂದ ಸಮಾಜದ ಅಭಿವೃದ್ದಿ ಹರಿಕಾರರಾದರು.
ಮಹನೀಯರ ಜನ್ಮ ದಿನಾಚರಣೆ ಕಾರ್ಯಕ್ರಮಗಳು ಅವರ ವಿಚಾರಧಾರೆ ಅರಿ ಯುವಂತಾಗಬೇಕು ಆದರೆ ಇಂದು ರಜೆಯ ದಿನಗಳಾಗುತ್ತಿರುವದು ವಿಷಾದಕರ ಎಂದರು.
ಸಾನಿಧ್ಯವಹಿಸಿದ್ದ ಕಲ್ಯಾಣ ಸ್ವಾಮಿಗಳು ಆಶೀರ್ವಚನ ನೀಡಿ, ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಜಚನಿ, ಸಿದ್ದಯ್ಯ ಪುರಾ ಣಿಕ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು ಎಂದರು. ಶ್ರೀಗಳು ಸುತ್ತೂರು ಶ್ರೀಗಳು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ, ಹತ್ತು ದಿನಗಳ ನಡೆಯುವ ಸುತ್ತೂರು ಜಾತ್ರೆಯು ಕೃಷಿ ಆಧುನಿಕತೆ ಸೇರಿದಂತೆ ಸಮಗ್ರ ಅನುಭವ ನೀಡುವಂತಹದು  ಎಂದರು.
ಈಗಿನ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಸರಳ ರೀತಿಯ ಜೀವನದ ಮೂಲಕ ಗಮನ ಸೆಳೆಯು ತ್ತಾರೆ. ರಾಜ್ಯದಲ್ಲಿ ಕೊಪ್ಪಳ, ಕಲ್ಬುರ್ಗಿ, ಸುತ್ತೂರು, ಸಿದ್ದಗಂಗಾ ಮೊದಲದ ಮಠಗಳು ಶಿಕ್ಷಣಕ್ಕೆ ನೀಡುವ ಕೊಡುಗೆ ಮಹತ್ವದ್ದು ಎಂದರು.
ಉತ್ತಮ ಆರೋಗ್ಯಕ್ಕೆ ಯೋಗ ಅಭ್ಯಾಸ ಮಾಡಿ, ಸಾವಯುವ ಆಹಾರ ಸೇವಿಸಿ ಎಂದು ತಿಳಿಸಿ ದರು.
ಕಾಲೇಜಿನ ಆಡಳಿತ ಮಂಡ ಳಿಯ ಅಧ್ಯಕ್ಷ ಪಲ್ಲೇದ ಪ್ರಭುಲಿಂಗ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಈ ವೇಳೆ ಸಾವಯವ ಕೃಷಿಕ ಬಿ.ಎಂ.ವೀರ ಪ್ಪಯ್ಯ, ನೃತ್ಯ ಕಲಾವಿದ ಜಿಲಾನ್ ಭಾಷಾ, ರಂಗ ಕಲಾವಿದೆ ಜಯಶ್ರೀ ಪಾಟೀಲ್, ಸಮಾಜ ಸೇವಕ ಚಂದ್ರಶೇಖರಗೌಡ  ಮಸೀದಿಪುರ. ಸಂಜೆವಾಣಿ ಹಿರಿಯ ವರದಿಗಾರ ಎನ್. ವೀರಭದ್ರಗೌಡ, ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತಿನ ಕಾರ್ಯ ಚಟುವಟಿಕೆಗ ಳನ್ನು ತಿಳಿಸಿದರು. ಉಪನ್ಯಾಸಕಿ ಡಿ. ಸುಮ ಎ.ಎಂ.ಪಿ ವೀರೇಶ್ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಪ್ರಾಂಶುಪಾಲ ಶ್ರೀಶೈಲಗೌಡ ಸ್ವಾಗತಿಸಿದರು.
ವೇದಿಕೆಯಲ್ಲಿ ಹಿರಿಯ ಕನ್ನಡ ಪರ ಮುಖಂಡ ಸಂಗನಕಲ್ಲು ಹಿಮಂತರಾಜ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಬಾಣಾಪುರ ಜಡೇಸಿದ್ದನಗೌಡ, ಕರ್ನಾಟಕ ಯುವಕ ಸಂಘದ ಮಾಜಿ ಅಧ್ಯಕ್ಷ ವಿಭೂತಿ ಎರಿಸ್ವಾಮಿ ಇದ್ದರು.ಶರಣ ಸಾಹಿತ್ಯ ಪರಿಷತ್ತಿಗೆ ನೂತನವಾಗಿ ಕಾರ್ಯಕಾರಿ ಮಂಡಳಿಗೆ ಚಾಲನೆ ನೀಡಲಾಯಿತು.
WhatsApp Group Join Now
Telegram Group Join Now
Share This Article