ಬೆಳಗಾವಿ: ” ಲಘು ಉದ್ಯೋಗ ಭಾರತಿ ದೇಶಾದ್ಯಂತ ಕಾರ್ಯನಿರ್ವಸುತ್ತಿದ್ದು, ರಾಷ್ಟ್ರೀಯ ಅಭಿವೃದ್ಧಿಗಾಗಿ ವಿವಿಧ ಇಲಾಖೆಯಲ್ಲಿ ನಿರಂತರ ಶ್ರಮಿಸುತ್ತಿದೆ ಎಂದು ” ಲಘು ಉದ್ಯಮ ಭಾರತಿ ಕರ್ನಾಟಕದ ಕಾರ್ಯದರ್ಶಿ ಪ್ರಿಯಾ ಪುರಾಣಿಕ ಹೇಳಿದರು.
ನಗರದ ತಿಳಕವಾಡಿ ಕ್ಲಬ್ ನಲ್ಲಿ ಆಯೋಜಿಸಲಾದ ಲಘು ಉದ್ಯಮ ಭಾರತಿ ಹಾಗೂ ಮಣ್ಣಿನ ಆಭರಣಗಳ ತಯಾರಿಕೆಯ ಕೌಶಲ್ಯದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗೆ ಸ್ವಯಂ ಉದ್ಯೋಗಿಗಳು ಕೊಡುಗೆ ಅಪಾರವಾಗಿದೆ. ಹೀಗಾಗಿ ಮತ್ತಷ್ಟೂ ಸ್ವಯಂ ಉದ್ಯೋಗದೊಂದಿಗೆ ಉದ್ಯಮಶೀಲತೆಯನ್ನು ಉತ್ತೇಜಿಸಲು ಸಹಕಾರಿ ನೀಡಲಾಗುತ್ತಿದೆ. ಭಾರತೀಯ ಮಣ್ಣಿಗೆ ವಿಶೇಷ ಗುಣಮಟ್ಟವಿದೆ. ಮಣ್ಣಿನ ಮಡಿಕೆ ಅಷ್ಟೇ ಅಲ್ಲ, ಆಭರಣಗಳ ತಯಾರಿಕೆಯಲ್ಲೂ ದೇಶ-ವಿದೇಶದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. 50ಕ್ಕೂ ಹೆಚ್ಚಿನ ಮಹಿಳೆಯರು ತುಂಬಾ ಆಸಕ್ತಿಯಿಂದ ಮಣ್ಣಿನ ಆಭರಣಗಳನ್ನು ಪ್ರಾಯೋಗಿಕವಾಗಿ ಕಲಿಯುವಿಕೆಯಲ್ಲಿ ತನ್ಮಯರಾಗಿದ್ದರು. ಎಲ್ಲ ಮಹಿಳೆಯರು ತರಬೇತಿ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ದೀಪಾ ಗುರುವ ಅವರು ಮಾತನಾಡಿ, ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ. ಮಹಿಳೆಯರು ಕೈಜೋಡಿಸದರಿಂದ ಎಷ್ಟೋಂದು ಪುರುಷರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅದರಲ್ಲೂ ಮಣ್ಣಿನ ಆಭರಣಗಳ ತಯಾರಿಕೆ ವಿಶೇಷ ಸ್ಥಾನವಿದೆ. ಭಾರತೀಯ ಸಂಸ್ಕೃತಿಗೆ ವಿದೇಶವೂ ತಲೆಭಾಗಿದೆ. ಮಣ್ಣಿನ ಆಭರಣಗಳು ವಿದೇಶದಲ್ಲೂ ಬಹಳಷ್ಟು ಬಹುಬೇಡಿಕೆ ಇದೆ. ಮಹಿಳೆಯರು ಈ ತಯಾರಿಕೆ ತರಬೇತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಘು ಉದ್ಯಮ ಭಾರತಿ ಬೆಳಗಾವಿ ಮಹಿಳಾ ಕೋಶದ ಅಧ್ಯಕ್ಷ ನಳಿನಿ.ವಿಮೋಲ್ಕರ, ಕ್ಲಬ್ ಮಹಿಳಾ ಕೋಶದ ಖಜಾಂಚಿ ಲತಾ ಆರ್ ಹಾಗೂ ವಿಶ್ವಕರ್ಮ ತರಬೇತುದಾರರಾದ ದೀಪಾ ಗುರುವ , ನಳಿನಿ ನಿರೂಪಿಸಿದರು, ವಂದಿಸಿದರು ಹಾಗೂ ಇತರರು ಇದ್ದರು.