ಅಥಣಿ: ಶಿಕ್ಷಕರ ತ್ಯಾಗ, ಪರಿಶ್ರಮ ಮತ್ತು ಮಾರ್ಗದರ್ಶನದಿಂದಲೇ ಸಮಾಜದಲ್ಲಿ ಜ್ಞಾನ, ಪ್ರಜ್ಞೆ ಮತ್ತು ಸಂಸ್ಕೃತಿ ಬೆಳೆದು ನಿಂತಿದೆ. ಪ್ರಶ್ನೆ ಇಲ್ಲದೆ ಯಾವುದನ್ನು ಸ್ವೀಕರಿಸುವುದನ್ನು ಮಾಡಬಾರದು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವವನ್ನು ಮೂಡಿಸುವ ಶಿಕ್ಷಣವನ್ನು ಕೊಟ್ಟು ಸಮಾಜಕ್ಕೆ ಸತ್ಪçಜೆಗಳನ್ನು ರೂಪಿಸಿಕೊಡಬೇಕು. ಶಿಕ್ಷಣದ ಸಾರ್ವತ್ರಿಕರಣದಲ್ಲಿ ಲಿಂಗಾಯತರ ಕೊಡುಗೆ ಅನನ್ಯವಾಗಿದೆ ಎಂದು ಖ್ಯಾತ ಅನುವಾದ ಸಾಹಿತಿ ಡಾ. ಜೆ ಪಿ ದೊಡಮನಿ ಹೇಳಿದರು.
ಪಟ್ಟಣದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಶಿಕ್ಷಕ ದಿನಾಚರಣೆ ಹಾಗೂ ಸ್ವಾತಂತ್ರö್ಯ ದಿನಾಚರಣೆ ನಿಮಿತ್ಯ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ರಾಧಾಕೃಷ್ಣನ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಸಾಹಿತಿ ಡಾ. ಜೆ ಪಿ ದೊಡಮನಿ ಮಾತನಾಡಿ ಶಿಕ್ಷಕರ ಪಾತ್ರವು ಕೇವಲ ಪಾಠಗಳನ್ನು ಕಲಿಸುವುದಲ್ಲ, ಬದಲಿಗೆ ಉತ್ತಮ ಮೌಲ್ಯಗಳು, ಶಿಸ್ತು, ಸತ್ಕಾರ್ಯ ಹಾಗೂ ಜೀವನದ ನೈತಿಕತೆಗಳನ್ನು ಬೋಧಿಸುವುದಾಗಿದೆ. ಗುರುಗಳಿಲ್ಲದೆ ಸಮಾಜದಲ್ಲಿ ಜ್ಞಾನ ಬೆಳೆಯುವುದಿಲ್ಲ. ಆದ್ದರಿಂದ ಶಿಕ್ಷಕರು “ಮಾತೃ-ಪಿತೃ-ಗುರು-ದೇವ” ಎಂಬ ಮಾತಿನಂತೆ ಅತ್ಯಂತ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು
ಇದೆ ಸಮಯದಲ್ಲಿ ದೊಡಮನಿ ದಂಪತಿಗಳನ್ನು ಹಾಗೂ ನೃತ್ಯದಲ್ಲಿ ಬಹುಮಾನ ಪಡೆಯುವಲ್ಲಿ ಪಾತ್ರರಾದ ಶಿಕ್ಷಕರು ಹಾಗೂ ಮಕ್ಕಳನ್ನು ಸನ್ಮಾನಿಸಲಾಯಿತು.
ಪ್ರಾಸ್ಥಾವಿಕವಾಗಿ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಕಾಶ ಮಹಾಜನ, ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಮಾತನಾಡಿದರು
ಈ ವೇಳೆ ಸಾಹಿತಿ ಶ್ರೀಮತಿ ಪ್ರಭಾ ಬೋರಗಾಂವಕರ, ಕಾರ್ಯದರ್ಶಿ ಓ ಎಸ ಸಾವಡಕರ, ನೀರ್ದೇಶಕರಾದ ಅಶೋಕ ಬುರ್ಲಿ, ವಿಜಯಕುಮಾರ ಬುರ್ಲಿ, ಸುನೀಲ ಶಿವಣಗಿ, ಶ್ರೀಶೈಲ ಸಂಕ, ಮುಖ್ಯ ಶಿಕ್ಷಕರ ಪಿ ಡಿ ಚನಗೌಡರ, ಎಮ ಎಸ್ ದೇಸಾಯಿ, ಆಡಳಿತಾಧಿಕಾರಿ ಭಾರತಿ ಪೂಜಾರಿ, ಎಮ ಎಸ್ ಧರಿಗೌಡರ ಉಪಸ್ಥಿತರಿದ್ದರು
ಶಿಕ್ಷಣದ ಸಾರ್ವತ್ರಿಕರಣದಲ್ಲಿ ಲಿಂಗಾಯತರ ಕೊಡುಗೆ ಅನನ್ಯ: ಡಾ|| ಜೆ ಪಿ ದೊಡಮನಿ
